ಗಂಗಾವತಿ: ಕೋವಿಡ್-19 ಲಾಕ್ ಡೌನ್ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟು ನಿರ್ಬಂಧಿಸಲಾಗಿದ್ದರೂ ರಾತ್ರಿ ವೇಳೆ ಕೆಲವರು ಅಂಗಡಿ ತೆರೆದಿರಿಸಿ ವ್ಯಾಪಾರ ನಡೆಸುತ್ತಿದ್ದ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ.
ಪೊಲೀಸರು ರಾತ್ರಿ ಕರ್ತವ್ಯ ಮುಗಿಸಿ ಹೋದ ನಂತರ ಮಧ್ಯ ರಾತ್ರಿಯಿಂದ ನಗರದ ವಿವಿಧ ಸರ್ಕಲ್ ಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯವಹಾರ ನಡೆಸಿ ಜನ ಸಂದಣಿ ಸೇರಲು ಕಾರಣರಾಗುತ್ತಿದ್ದರು.
ಬಟ್ಟೆ, ದಿನಸಿ ಮೊಬೈಲ್ ಎಲೆಕ್ಟ್ರಾನಿಕ್ ಮತ್ತು ಪ್ಯಾನ್ಸಿಸ್ಟೋರ್ ಸೇರಿ ವಿವಿಧ ಅಂಗಡಿಗಳನ್ನು ತೆರೆದು ಭರ್ಜರಿ ವ್ಯಾಪಾರ ನಡೆಸಿ ಲಾಕ್ ಡೌನ್ ಉಲ್ಲಂಘನೆ ಕುರಿತು
ಉದಯವಾಣಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿ ಪ್ರಮುಖ ವೃತ್ತಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ.
ಸಹಾಯಕ ಆಯುಕ್ತೆ ಗೀತಾ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಇಒ ಡಾ.ಮೋಹನಕುಮಾರ ಡಿವೈಎಸ್ ಪಿ ಡಾ.ಚಂದ್ರಶೇಖರ ಗುರುವಾರ ಇಡೀ ರಾತ್ರಿ ನಗರದಲ್ಲಿ ಗಸ್ತು ನಡೆಸಿ ಅಂಗಡಿ ಓಪನ್ ಆಗದಂತೆ ಕ್ರಮಕೈಗೊಳ್ಳಲಾಗಿದೆ.
ಶುಕ್ರವಾರ ಬೆಳ್ಳಿಗ್ಗೆ ಇಡೀ ನಗರದಲ್ಲಿ ಪೊಲೀಸ್ ಪೆಟ್ರೋಲಿಂಗ್ ನಡೆಸಿ ವಾಹನ ಸಂಚಾರವಾಗದಂತೆ ಏಕಮುಖ ಸಂಚಾರ ಮಾಡಲು ಒಂದು ಕಡೆ ರಸ್ತೆ ಬಂದ್ ಮಾಡಲಾಗಿದೆ.
ಲಾಕ್ ಡೌನ್ ಇನ್ನಷ್ಟು ಬಿಗಿಗೊಳಿಸಿ ವಿನಾಕಾರಣ ಬೈಕ್ ನಲ್ಲಿ ಓಡಾಡುವವರ ವಿರುದ್ದ ಕ್ರಮ ಕೈಗೊಂಡು ದಂಡ ಹಾಕಲಾಗುತ್ತಿದೆ.