Advertisement
ಬಾಗೇಪಲ್ಲಿ ತಾಲೂಕಿನ ರಮೇಶ್ (26), ಈತನ ಸಹೋದರ ರಾಮಾಂಜನಿ(22), ಲಕ್ಷಿಪತಿ (26) ಮತ್ತು ಚಂದ್ರ (23) ಎಂಬುವರನ್ನು ಬಂಧಿಸಿದ್ದು, ಇವರಿಂದ 3 ಲಕ್ಷ ರೂ. ಬೆಲೆ ಬಾಳುವ 100 ಗ್ರಾಂ ಚಿನ್ನದ ಆಭರಣಗಳು, ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಇತ್ತೀಚೆಗೆ ಮಾರುತಿನಗರದ ಬಾಬು ಎಂಬುವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳವು ಮಾಡಿದ್ದರು ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Related Articles
Advertisement
ಕಳವು ಪ್ರಕರಣದಲ್ಲಿ ಸಿಕ್ಕ ಆರೋಪಿಗಳು: ಬಾಗೇಪಲ್ಲಿ ಮೂಲದ ಬಾಬು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಆರೋಪಿ ರಮೇಶ್ ಇವರ ಕಾರು ಚಾಲಕನಾಗಿದ್ದ. ಈ ಹಿನ್ನೆಲೆಯಲ್ಲಿ ಆಗಾಗ್ಗೆ ಯಲಹಂಕದ ಮನೆಗೆ ಆರೋಪಿ ಬರುತ್ತಿದ್ದು, ಲಕ್ಷಾಂತರ ರೂ. ಚಿನ್ನಾಭರಣ ಕಳವು ಮಾಡಲು ಸಂಚು ರೂಪಿಸಿದ್ದ. ಅದರಂತೆ ಸಹೋದರ ರಾಮಾಂಜನಿಗೆ ಈ ವಿಷಯ ತಿಳಿಸಿದ್ದಾನೆ. ಬಳಿಕ ಆ.21ರಂದು ಯಲಹಂಕದ ಮಾರುತಿನಗರದ ಮನೆಗೆ ನುಗ್ಗಿ ಆಭರಣ ಕಳ್ಳತನ ಮಾಡಿದರು. ಈ ಸಂಬಂಧ ಬಾಬು ದೂರು ನೀಡಿದ್ದು, ಹೆಚ್ಚಿನ ವಿಚಾರಣೆಗೆ ಆರೋಪಿ ರಮೇಶ್‌ನನ್ನು ಕರೆಸಿಕೊಂಡು ವಿಚಾರಣೆ ನಡೆಸಿದಾಗ ಕೊಲೆ ಹಾಗೂ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಗಿರೀಶ್ ವಿವರಿಸಿದರು.
ದರೋಡೆಕೋರರ ಬಂಧನ: ಮತ್ತೂಂದು ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಹಲ್ಲೆ ಮಾಡಿ ಮೊಬೈಲ್ ಹಾಗೂ ಹಣ ದೋಚುತ್ತಿದ್ದ ಮೂವರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದ್ದಾಮ ಹುಸೇನ್(20), ಅಬ್ರಹಾರ್ (19) ಮತ್ತು ಇಬ್ರಾಹಿಂ(21) ಬಂಧಿತರು. ಮನೆಯೊಂದರ ಶೋಕೆಸ್‌ನಲ್ಲಿಟ್ಟಿದ್ದ 1 ಲಕ್ಷ ರೂ. ಹಣ ಕಳ್ಳತನ ಮಾಡಿದ್ದ ಪಶ್ಚಿಮಬಂಗಾಳ ಮೂಲದ ಮೈದುಲ್(27) ಎಂಬಾತನನ್ನು ಬಂಧಿಸಿ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆ.18ರಂದು ದ್ವಾರಕಾನಗರದ3ನೇ ಮುಖ್ಯರಸ್ತೆ ನಿವಾಸಿ ಶಾಂತಿ ಎಂಬುವರ ಮನೆಯ ಶೋಕೆಸ್‌ನಲ್ಲಿಟ್ಟಿದ್ದ ಒಂದು ಲಕ್ಷ ಹಣ ಕಳವು ಮಾಡಿದ್ದರು.
ಇನ್ನು ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಬೆದರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಐದು ಮಂದಿಯನ್ನು ಕೊಡುಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುನೀಲ್(23), ಸತೀಶ್(23), ರವಿ(23), ತೇಜು (25), ಮಾರುತಿ (24)ಬಂಧಿತರು. ತಲೆ ಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ಅಪ್ಪಿ(24)ಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳು ಜು.24ರಂದು ರಾತ್ರಿ 1ದ ಗಂಟೆ ಸುಮಾರಿಗೆ ಕೊಡುಗೆಹಳ್ಳಿ ವ್ಯಾಪ್ತಿಯಲ್ಲಿ ನಡೆದು ಹೋಗುತ್ತಿದ್ದ ಗಿರೀಶ್ ಎಂಬುವರನ್ನು ಅಡ್ಡಗಟ್ಟಿ ಅವರಿಂದ 2,500 ಹಣ, 2 ಮೊಬೈಲ್ ದರೋಡೆ ಮಾಡಿದ್ದರು.