Advertisement

Police station: ನಟ ದರ್ಶನ್‌ ಇರುವ ಠಾಣೆಗೆ ಶಾಮಿಯಾನ ಹಾಕಿಸಿದ ಪೊಲೀಸರು

10:23 PM Jun 13, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ ಹಾಗೂ ಗ್ಯಾಂಗ್‌ ಅನ್ನು ವಿಚಾರಣೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜತೆಗೆ ಠಾಣೆಯನ್ನು ಶಾಮಿಯಾನದಿಂದ ಮುಚ್ಚಲಾಗಿದೆ.

Advertisement

ದರ್ಶನ್‌ ಸೇರಿ 14 ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. ಠಾಣೆ ಬಳಿ ಗುಂಪು ಸೇರುವುದನ್ನು ನಿಯಂತ್ರಿಸುವ ಉದ್ದೇಶದಿಂದ ಜೂನ್‌13 ರಿಂದ 17ರ ವರೆಗೆ ಠಾಣೆಯ ಸುತ್ತ-ಮುತ್ತ 144 ಸೆಕ್ಷನ್‌ ಅಡಿ 200 ಮೀಟರ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಆದೇಶಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಪ್ರದೋಶ್‌ ಬಂಧನ:

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮತ್ತೂಬ್ಬ ಆರೋಪಿ ಹೋಟೆಲ್‌ ಉದ್ಯಮಿ ಪ್ರದೋಶ್‌ ಎಂಬಾತನನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈತ ಕೂಡ ಸ್ಯಾಂಡಲ್‌ವುಡ್‌ ನಟನಾಗಿದ್ದಾನೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ  14ನೇ ಆರೋಪಿಯಾಗಿರುವ ಪ್ರದೋಶ್‌, ಶವವನ್ನು ಸ್ಕಾರ್ಪಿಯೋ ಕಾರಿನಲ್ಲಿ ಒಯ್ಯಲು ಸಹಾಯ ಮಾಡಿದ್ದ ಎನ್ನಲಾಗಿದೆ. ರೇಣುಕಾಸ್ವಾಮಿಯ ಶವವನ್ನು ಎಸೆಯಲು ದರ್ಶನ್‌ ಇದೇ ಪ್ರದೋಶ್‌ಗೆ ಸೂಚಿಸಿದ್ದರು. ಜತೆಗೆ ಇದಕ್ಕೆ 30 ಲಕ್ಷ ರೂ. ದುಡ್ಡನ್ನು ಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಈತ ದರ್ಶನ್‌ ಜತೆಗೆ ಬೃಂದಾವನ, ಬುಲ್‌ ಬುಲ್‌ ಚಿತ್ರಗಳಲ್ಲಿ ನಟಿಸಿದ್ದಾನೆ. ಮಾತ್ರವಲ್ಲದೇ ಬಿಜೆಪಿಯ ಕೆಲ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next