Advertisement

ಉತ್ತಮ ಸೇವೆ ನೀಡುತ್ತಿದೆ ಪೊಲೀಸ್‌ ಇಲಾಖೆ

05:59 PM Apr 13, 2022 | Team Udayavani |

ಬೆಳಗಾವಿ: ಪೊಲೀಸ್‌ ಇಲಾಖೆ ರಾಜ್ಯದಲ್ಲಿ ಉತ್ತಮ ಸೇವೆ ಒದಗಿಸುತ್ತಿದೆ. ಪೊಲೀಸ್‌ ಸಿಬ್ಬಂದಿ ನೆಮ್ಮದಿಯಿಂದ ತಮ್ಮ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಈಗಿರುವ ವಸತಿ ಗೃಹಗಳಿಗಿಂತ ದೊಡ್ಡ ಮಟ್ಟದಲ್ಲಿ 20 ಸಾವಿರ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 10 ಸಾವಿರ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ನಗರದ ಮಚ್ಛೆ ಕೆ.ಎಸ್‌.ಆರ್‌.ಪಿ 2ನೇ ಪಡೆಯ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ  ಮಂಗಳವಾರ ಕೆ.ಎಸ್‌.ಆರ್‌.ಪಿ. ಪೊಲೀಸ್‌ ಕಾನ್ಸ್‌ ಟೇಬಲ್‌ ಪ್ರಶಿಕ್ಷಣಾರ್ಥಿಗಳ 4ನೇ ತಂಡದ ನಿರ್ಗಮನ ಪಥಸಂಚಲನ ಪರಿವೀಕ್ಷಿಸಿ ಮಾತನಾಡಿದ ಅವರು, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಸಮಯದಲ್ಲಿ, ಭಾರತೀಯರಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಾಮರ್ಥ್ಯ ಇಲ್ಲ ಎಂದು ಹೇಳಿದ್ದರು.

ಪ್ರಸ್ತುತ ನಮ್ಮ ದೇಶದಲ್ಲಿ ಪೊಲೀಸ್‌ ಪಡೆ ಶಿಸ್ತು, ಪ್ರಾಮಾಣಿಕತೆಯಿಂದ ಶಾಂತಿ ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುತ್ತಿದೆ ಎಂದರು. ದೇಶದಲ್ಲಿ ಕರ್ನಾಟಕ ಪೊಲೀಸ್‌ ಇಲಾಖೆ ಉತ್ತಮ ರೀತಿಯ ಸೇವೆ ಸಲ್ಲಿಸುತ್ತಿದೆ. ಚುನಾವಣೆ ಸಮಯದಲ್ಲಿ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಶೌರ್ಯ, ಸಾಹಸ, ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದ ಅವರು, ಕೆಲವು ಸಮಾಜಘಾತಕರು ವಿದೇಶಿ ಏಜೆಂಟ್‌ ರ ಜೊತೆಗೆ ಕೈ ಜೋಡಿಸಿ ಆಂತರಿಕ ಶಾಂತಿಯನ್ನು ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಂತವರನ್ನು ಎದುರಿಸಿ ದೇಶದ ಆಂತರಿಕ ಭದ್ರತೆಗೆ ಪೊಲೀಸ್‌ ಇಲಾಖೆ ಗಟ್ಟಿಯಾಗಿ ನಿಂತಿದೆ ಎಂದರು.

ಒಂಬತ್ತು ತಿಂಗಳ ಕಾಲ ವಿಶೇಷ ತರಬೇತಿಯನ್ನು ಪಡೆದ 216 ಕೆ.ಎಸ್‌.ಆರ್‌.ಪಿ ಸಿಬ್ಬಂದಿಗಳು ರಾಷ್ಟ್ರ ಧ್ವಜ ಅಡಿಯಲ್ಲಿ ಸಂಕಲ್ಪ ಮಾಡಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸಂವಿಧಾನದ ಮೌಲ್ಯಗಳನ್ನು ಕಾಪಾಡಬೇಕು ಹಾಗೂ ಕಾನೂನು ಪಾಲಿಸುವ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು ಎಂದು ಅವರು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಳೆದ 1 ವರ್ಷ 6 ತಿಂಗಳಲ್ಲಿ ಪೊಲೀಸ್‌ ಠಾಣೆಗಳ ಉನ್ನತಿಗೆ ಕ್ರಮ ಕೈಗೊಳ್ಳಲಾಗಿದೆ. 200 ಕೋಟಿ ರೂಗಳನ್ನು ಮೀಸಲಿಟ್ಟು 100 ಪೊಲೀಸ್‌ ಠಾಣೆಗಳನ್ನು ಉನ್ನತ ದರ್ಜೆಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

Advertisement

ಇದೇ ಸಂದರ್ಭದಲ್ಲಿ ವಿವಿಧ ಒಳಾಂಗಣ ಮತ್ತು ಹೊರಾಂಗಣ ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಅತೀ ಹೆಚ್ಚು ಅಂಕಪಡೆದ ಪ್ರಶಿಕ್ಷಣಾರ್ಥಿಗಳಿಗೆ ಗೃಹ ಸಚಿವರು ಬಹುಮಾನ ವಿತರಿಸಿದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ ಅಪರ ಮಹಾ ನಿರ್ದೇಶಕರಾದ ಆಲೋಕ್‌ ಕುಮಾರ್‌ ಮಾತನಾಡಿ, ಹೊಸದಾಗಿ ಕೆಲಸಕ್ಕೆ ಸೇರಿದ ಸಿಬ್ಬಂದಿಗೆ ಪ್ರವಾಹ ಭೀತಿ ವಿಪತ್ತು ನಿರ್ವಹಣೆಯ ಜೊತೆ ಉತ್ತಮ ರೀತಿಯ ತರಬೇತಿ ನೀಡಿದ್ದೇವೆ ಎಂದು ಹೇಳಿದರು.

ಹೆಚ್ಚುವರಿ ತರಬೇತಿ ಶಾಲೆ ಕೆ.ಎಸ್‌.ಆರ್‌.ಪಿ 2ನೇ ಪಡೆಯ ಪ್ರಾಂಶುಪಾಲರಾದ ಹಂಜಾ ಹುಸೇನ್‌ ಅವರು ಪ್ರಶಿಕ್ಷಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ ಪೊಲೀಸ್‌ ಮಹಾ ನಿರೀಕ್ಷಕರಾದ ರವಿ ಎಸ್‌., ಬೆಳಗಾವಿ ಪೊಲೀಸ್‌ ಆಯುಕ್ತರಾದ ಡಾ.ಎಂ.ಬಿ. ಬೋರಲಿಂಗಯ್ಯ, ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ¾ಣ ನಿಂಬರಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next