Advertisement
ಸರಕಾರದ ಮಾರ್ಗಸೂಚಿ ಮಾತ್ರ ತಿಳಿದಿದ್ದ ಮಂದಿ ಜಿಲ್ಲಾಡಳಿತದ ಮಾರ್ಗಸೂಚಿಗೆ ಕಿವಿಗೊಡದೆ ಪಡುಬಿದ್ರಿ ಸುತ್ತಮುತ್ತ ಹಾರ್ಡ್‌ವೇರ್, ಸಿಮೆಂಟ್, ಇಲೆಕ್ಟ್ರಿಕಲ್, ಪೈಂಟ್, ಫ್ಯಾನ್ಸಿ ಅಂಗಡಿಗಳನ್ನು ತೆರೆದಿದ್ದರು. ಇದನ್ನು ಮನಗಂಡ ಪೊಲೀಸರು ತಪಾಸಣೆ ನಡೆಸಿ ಅಂತಹ ಮಳಿಗೆಯನ್ನು ಬಂದ್ ಮಾಡುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಡ್ರೋಣ್ ಕೆಮರಾ ಮೂಲಕ ತಪಾಸಣೆ
ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಹೆಜಮಾಡಿಯಲ್ಲಿ ಸೀಲ್‌ಡೌನ್ ಮುಂದುವರಿದಿದ್ದು, ಎರಡೂ ತಪಾಸಣಾ ಕೇಂದ್ರ, ಪಡುಬಿದ್ರಿ ಸುತ್ತಮುತ್ತ ಪೊಲೀಸರು ಡ್ರೋಣ್ ಕೆಮರಾ ಬಳಸಿ ತಪಾಸಣೆ ಕಾರ್ಯ ಆರಂಭಿಸಿದ್ದಾರೆ. ಹೆಜಮಾಡಿಯಲ್ಲಿ ಡ್ರೋಣ್ ಕೆಮರಾ ಮೂಲಕ ತಪಾಸಣೆ ಮಾಡುತ್ತಿದ್ದಾಗ ಕೆಮರಾವು ಹೈಟೆನ್ಶನ್ ವಿದ್ಯುತ್ ತಂತಿಗೆ ಅಪ್ಪಳಿಸಿ ನೆಲಕ್ಕುರುಳಿ ಸುಮಾರು 25,000 ರೂ. ನಷ್ಟವಾಗಿದೆ. ತತ್‌ಕ್ಷಣ ಬದಲಿ ಕೆಮರಾ ಬಳಸಿ ತಪಾಸಣೆ ಮುಂದುವರಿಸಲಾಯಿತು.
Related Articles
Advertisement