Advertisement

ಕುಖ್ಯಾತ ಮನೆಗಳ್ಳ ಪೊಲೀಸರಿಗೆ ಸಿಕ್ಕಿಬಿದ್ದ

11:39 AM Feb 02, 2017 | |

ಬೆಂಗಳೂರು: ಬೀಗ ಹಾಕಿದ್ದ ಮನೆಗಳ ಬೀಗ ಒಡೆದು ಕಳವು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಕಾಟನ್‌ಪೇಟೆ ಪೊಲೀಸರು 30 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಚಾಮರಾಜಪೇಟೆಯ ವಾಲ್ಮೀಕಿ ನಗರ ನಿವಾಸಿ ಯಾಸೀನ್‌ ಖಾನ್‌ ಅಲಿಯಾಸ್‌ ಚೋರ್‌ ಇಮ್ರಾನ್‌ (26) ಬಂಧಿತ.

Advertisement

ಆರೋಪಿಯಿಂದ 1 ಕೆ.ಜಿ.100 ಗ್ರಾಂ ಚಿನ್ನಾಭರಣ, 750 ಗ್ರಾಂ ಬೆಳ್ಳಿ ಹಾಗೂ ಒಂದು ಗಿಲ್ಮಾ ಟಿ.ವಿ.ಜಪ್ತಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಈತ, ಜೈಲಿನಿಂದ ಹೊರ ಬಂದ ಬಳಿಕವು ಕಳವು ಕೃತ್ಯ ಮುಂದುವರೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕಳವು ಮಾಡುವುದನ್ನೇ ವೃತ್ತಿಯಾನ್ನಾಗಿಸಿಕೊಂಡಿದ್ದ. ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹಗಲಿನಲ್ಲಿ ಹಲವು  ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ ಆರೋಪಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ. ಕಳವು ಮಾಡಿದ ಚಿನ್ನಾಭರಣವನ್ನು ಶಿವಾಜಿನಗರ, ರಾಜಾಮಾರ್ಕೆಟ್‌ ಜ್ಯೂವೆಲರಿ ಶಾಪ್‌ ಮತ್ತು ಗಿರಿವಿ ಅಂಗಡಿಗಳಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. 

ಬಂದ ಹಣವನ್ನು ದುಶ್ಚಟಗಳಿಗೆ ಬಳಸಿಕೊಳ್ಳುತ್ತಿದ್ದ. ಈತನ ಬಂಧನದಿಂದ ಕಾಟನ್‌ಪೇಟೆಯ 3, ಹಲಸೂರು ಗೇಟ್‌, ಸಿಟಿ ಮಾರ್ಕೆಟ್‌ ಮತ್ತು ಬ್ಯಾಟರಾಯನಪುರ ಪೊಲೀಸ್‌ ಠಾಣೆಯ ತಲಾ 1 ಪ್ರಕರಣ ಪತ್ತೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next