Advertisement

ಅವಲಕ್ಕಿ ಬಾಂಗ್ಲಾ ತಿನಿಸು ಎಂದ ಬಿಜೆಪಿ ನಾಯಕನ ಬೆವರಿಳಿಸಿದ ನೆಟ್ಟಿಗರು!

09:48 AM Jan 26, 2020 | Hari Prasad |

ಹೊಸದಿಲ್ಲಿ: ದೇಶೀಯ ತಿನಿಸು ಅವಲಕ್ಕಿಯನ್ನು ಬಾಂಗ್ಲಾ ದೇಶದ ಆಹಾರ ಎಂದ ಬಿಜೆಪಿ ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ನಮ್ಮ ಮನೆಗೆ ಬಂದಿದ್ದ ಕಟ್ಟಡ ಕಾರ್ಮಿಕರು ಪೋಹಾ (ಅವಲಕ್ಕಿ) ತಿನ್ನುತ್ತಿದ್ದರು.

Advertisement

ಇದು ಬಾಂಗ್ಲಾ ತಿನಿಸು, ಇವರು ಬಾಂಗ್ಲಾದೇಶದವರಿರಬಹುದು ಎಂದು ಬಿಜೆಪಿ ನಾಯಕ ಕೈಲಾಸ್‌ ವಿಜಯ್‌ ವರ್ಗೀಯ ಹೇಳಿಕೆ ನೀಡಿದ್ದರು. ಇದಕ್ಕೆೆ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಅವಲಕ್ಕಿ ಮಹಾರಾಷ್ಟ್ರ ಸಹಿತ ದಕ್ಷಿಣ ಭಾರತದ ಪ್ರಖ್ಯಾತ ತಿನಿಸು ಎಂದು ಅನೇಕರು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next