Advertisement
ರೋಟರಿ ಬಾಲಭವನದಲ್ಲಿ ಸೋಮವಾರ ಪ್ರಕೃತಿ ಪ್ರಕಾಶನ ಮತ್ತು ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕವಿ ಪ್ರಕಾಶ್ ಕೊಡಗನೂರು ಅವರ ಏಟ್ಸ್ ಮತ್ತು ನಾನು ಕವನ ಸಂಕಲನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
Related Articles
Advertisement
ವಿಮರ್ಶಕ ಸತೀಶ್ ಕುಲಕರ್ಣಿ ಮಾತನಾಡಿ, ಕಾವ್ಯಕ್ಕೆ ತನ್ನದೇ ಆದ ಭಾಷೆ ಇದೆ. ಮಾಧ್ಯಮ ಭಾಷೆಗೆ ಜನರ ಮನಸ್ಸಿನಲ್ಲಿ ಕುತೂಹಲ ಮೂಡಿಸುವ ಶಕ್ತಿ ಇದ್ದರೆ, ಕಾವ್ಯದ ಭಾಷೆ ಅದಕ್ಕಿಂತ ಭಿನ್ನವಾಗಿರುತ್ತದೆ ಎಂದು ಹೇಳಿದರು.
ಕೆ.ಎಸ್. ನರಸಿಂಹಸ್ವಾಮಿ, ಬೇಂದ್ರೆ ಇತರರು ಪ್ರೀತಿಯನ್ನು ಮೌಲ್ಯವಾಗಿ ನೋಡಿದಂತವರು. ಏಟ್ಸ್ ಮತ್ತು ನಾನು ಕವನ ಸಂಕಲದನಲ್ಲಿ 32ಕ್ಕೂ ಹೆಚ್ಚು ಕವಿತೆಗಳು ಪ್ರೀತಿ, ಪ್ರೇಮದ ವಿಚಾರಗಳನ್ನು ಒಳಗೊಂಡಿವೆ. ಇಂತಹ ಕಾವ್ಯ ಸಂಕಲನ ಹೊರತಂದಿರುವ ಪ್ರಕಾಶ್ ಕೊಡಗನೂರು ಅವರು ಮುಂದಿನ ದಿನಗಳಲ್ಲಿ ನೇರ ಅನುಭವ, ಅನಿಸಿಕೆಗಳನ್ನು ಇನ್ನಷ್ಟು ಕಲಾತ್ಮಕವಾಗಿ ಕಾವ್ಯದ ರೂಪದಲ್ಲಿ ಹೊರತರುವ ಕೆಲಸ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಬಿ. ಸುರೇಂದ್ರನಾಯ್ಕ ಮಾತನಾಡಿ, ಕಾವ್ಯ ಪರಂಪರೆಗೆ ವಿಶಿಷ್ಟ ಮಾನ್ಯತೆ ಇದೆ. ಬರವಣಿಗೆ ಸಶಕ್ತವಾಗಿದ್ದರೆ ಕಾವ್ಯಕ್ಕೆ ಸಾವೇ ಇಲ್ಲ. ಮಾಧ್ಯಮ ನೆಪ ಮಾತ್ರ. ಪ್ರಚಾರ ಸಿಕ್ಕರೂ, ಸಿಗದಿದ್ದರೂ ಓದು, ಬರವಣಿಗೆ ಬಿಡದೇ ಸಾಹಿತ್ಯ ಕೃಷಿ ಮಾಡಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಮಾತನಾಡಿ, 20ನೇ ಶತಮಾನದ ಸುಪ್ರಸಿದ್ಧ ಇಂಗ್ಲಿಷ್ ಕವಿಯಾದ ಏಟ್ಸ್ ಐರ್ಲೆಂಡ್‌ನವರಾಗಿದ್ದು, ಅವರ ಬಹುತೇಕ ಕಾವ್ಯಗಳು ಪ್ರೇಮ ಕವಿತೆಗಳಾಗಿವೆ. ಇಂದಿನ ನಿಜವಾದ ಕವಿಗಳು ತಮ್ಮ ಆಂತರಿಕ ನೋವುಗಳನ್ನು ಕಲಾತ್ಮಕವಾಗಿ ಕಾವ್ಯಗಳ ಮೂಲಕ ಪರಿಚಯ ಮಾಡಿಕೊಳ್ಳಬೇಕು.ಆಗ ಮಾತ್ರ ಉತ್ತಮ ಕವಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಪ್ರಗತಿಪರ ಸಂಘಟಕ ಎನ್.ಪಿ. ನಾಗರಾಜ್ ಉಪಸ್ಥಿತರಿದ್ದರು. ಕೆ.ಎನ್. ಸ್ವಾಮಿ ನಿರೂಪಿಸಿದರು. ಯು. ಅರುಣಾದೇವಿ ಆಯ್ದ ಕವಿತೆಗಳ ಗೀತಗಾಯನ ನಡೆಸಿಕೊಟ್ಟರು.