Advertisement
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮತ್ತು ಪೆರ್ಲದ ಸವಿ ಹೃದಯದ ಕವಿ ಮಿತ್ರರು ಸಂಘಟನೆಗಳ ಜಂಟಿ ಆಶ್ರಯದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುಟುಕು ಸಂಭ್ರಮ-2019 ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ತಾರಾನಾಥ ಬೋಳಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ಸುಲಾಯ ಒಡ್ಡಂಬೆಟ್ಟು ನಿಕಟಪೂರ್ವ ಅಧ್ಯಕ್ಷ ಇರಾ ನೇಮು ಪೂಜಾರಿ, ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ, ರವಿಶಂಕರ ಜಿ.ಕೆ.ಕೆದಂಬಾಡಿ, ಹರೀಶ್ ಪೆರ್ಲ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ.ಸ್ವಾಗತಿಸಿ, ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. “ಸಾಹಿತ್ಯ ವಲಯವೂ ಪ್ರಭಾವಶಾಲಿ’
ಚುಟುಕು ಸಾಹಿತ್ಯ ಸಂಭ್ರಮದ ಅಂತಿಮ ಭಾಗದಲ್ಲಿ ನಡೆದ ಚುಟುಕು ಗೋಷ್ಠಿಯನ್ನು ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷ ಡಾ| ಸುರೇಶ ನೆಗಳಗುಳಿ ಉದ್ಘಾಟಿಸಿ ಚಾಲನೆ ನೀಡಿದರು. ಅವರು ಈ ಸಂದರ್ಭ ಮಾತನಾಡಿ, ಭೌಗೋಳಿಕರಣದ ಭಾಗವಾಗಿ ಸ್ಥಿತ್ಯಂತರಗೊಳ್ಳುತ್ತಿರುವ ಇಂದು ಸಾಹಿತ್ಯ ವಲಯವೂ ಪ್ರಭಾವಶಾಲಿಯಾಗಿ ವಿವಿಧ ವಿಭಾಗ ಗಳಲ್ಲಿ ಹರಡುತ್ತಿದೆ. ಇತರ ಭಾಷೆಗಳ ಗಾಢ ಪ್ರಭಾವ ಕನ್ನಡದ ಮೇಲೂ ಉಂಟಾಗಿದ್ದು, ಬೆಳವಣಿಗೆ ಪಡೆಯುತ್ತಿರುವ ಗಝಲ್‌ಕಾವ್ಯ ಪ್ರಕಾರ ಜನಪ್ರಿಯವಾಗುತ್ತಿದೆ ಎಂದು ತಿಳಿಸಿದರು. ಸರಳ-ಸುಂದರ ರಚಿಸಲ್ಪಡುವ ಗಜಲ ಕಾವ್ಯ ಪ್ರಕಾರ ಕವಿತೆಗಳ ಆಸ್ವಾದಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದು, ಸಾಹಿತ್ಯ ಸಂಭ್ರಮ ದಂತಹ ಕಾರ್ಯಕ್ರಮಗಳಿಂದ ಕ್ರಿಯಾಶೀಲ ವಾಗಿರಲಿ ಎಂದು ಡಾ| ನೆಗಳಗುಳಿ ವರು ಹಾರೈಸಿದರು.