Advertisement

ಕಾವ್ಯ ಕಮ್ಮಟದಲ್ಲಿ ಕಾಯ್ಕಿಣಿ ಕತೆಗಳ ರಸಗವಳ

08:13 AM Nov 27, 2017 | |

ರಾಷ್ಟ್ರಕವಿ ಕುವೆಂಪು ಪ್ರಧಾನವೇದಿಕೆ: ಅದು ಕವಿಗೋಷ್ಠಿಯೇ. ಆದರೆ, ಅಲ್ಲಿ ಕೇಳಿಬಂದಿದ್ದು ಕಾವ್ಯದ ಪಾಠ. ಬದುಕಿನ ರಸಗುಟ್ಟುಗಳ ಕಮ್ಮಟ. ಕಾವ್ಯದ ಮೇಷ್ಟ್ರಾಗಿ ಮಾತು ಪೋಣಿಸುತ್ತಿದ್ದರು ಕತೆಗಾರ ಜಯಂತ್‌ ಕಾಯ್ಕಿಣಿ. ಅಲ್ಲಿ ಕೇಳಿ ಬಂದ ಕತೆಗಳ ಮಿಡಿತ, ಕೇಳುಗರನ್ನು ಮಂತ್ರಮುಗ್ಧವಾಗಿಸಿದವು.

Advertisement

ಗೋಷ್ಠಿಗೆ ಚಾಲನೆ ನೀಡಿ ಮಾತಿಗಿಳಿದ ಕಾಯ್ಕಿಣಿ. ಕವಿ ಎಸ್‌.ಮಂಜುನಾಥ್‌ ಅವರನ್ನು ನೆನೆದರು. ಕಾವ್ಯಗಳಿಗೆ ಸ್ಫೂರ್ತಿ ಬರುವುದು ಪುಸ್ತಕ ಕಪಾಟುಗಳಿಂದಲ್ಲ. ಆ ಸ್ಫೂರ್ತಿ ಬದುಕಿನಿಂದ ಬರಬೇಕು ಎನ್ನುತ್ತಾ ಶಿರಸಿಯ ಪ್ರಸೂತಿ ಗೃಹದ ಕತೆಯೊಂದನ್ನು ಎಲ್ಲರ ಮುಂದಿಟ್ಟರು. ಬದುಕಿನ ನೆರಳು ಬೆಳಕಿನಾಟದಲ್ಲಿ ಸಾಹಿತ್ಯದ ಚಲನಶೀಲತೆಯಿದೆ ಅದೇ ಕಾವ್ಯ ಎಂದರು. ಸಾಹಿತ್ಯ,ಕಲೆ, ಇವೇ ಈ ದಿನಗಳ ಅಧ್ಯಾತ್ಮ ಎನ್ನುತ್ತಾ ಕಾವ್ಯವನ್ನು ವೈದ್ಯಕೀಯಕ್ಕೆ ಹೋಲಿಸಿದರು. ಕ್ಯಾನ್ಸರ್‌ ರೋಗಿಯ ಬಗ್ಗೆ ತಳಿಸಿ ಸಾವಿನ ಸಮ್ಮುಖದಲ್ಲಿ ಬದುಕಿನ ನೋವನ್ನು ಮರೆಸುವಂಥ ಸಂಗತಿಗಳಲ್ಲಿ ಮುಳುಗುವ ಮಾಯೆಯೇ ಕಾವ್ಯ ಅದು ಬದುಕಿನೊಂದಿಗೆ ಬೆರೆತಿದೆ ಎಂದು
ಮಂಡಿಸಿದರು.

ಚಿತ್ತಾಲರಿಗೆ ಕಾಡುವ ದಾದರ್‌ ಸ್ಟೇಶನ್‌..: ಚಿತ್ತಾಲರನ್ನು ನೆನೆದ ಕಾಯ್ಕಿಣಿ “ದಾದರ್‌ ಸ್ಟೇಶನ್‌ ಅಂದಾಗ ನನಗೆ ಬೇಜಾರಾಗುತ್ತದೆ, ಮನಸ್ಸು ತುಂಬಾ ನೊಂದು ವಿಷಾದ ಉಕ್ಕುತ್ತದೆ ಎಂದು, ತಮ್ಮ ಮೂರು ದಾರಿಗಳು ಕಾದಂಬರಿಯ ನಿರ್ಮಲಾ ರೈಲಿನಲ್ಲಿಯೇ ಅಸುನೀಗಿದ ಸಂಗತಿಗಳನ್ನು ಬಿಚ್ಚಿಟ್ಟರು ಎಂದರು. ಶಿವರಾಜ… ಕುಮಾರ್‌ ನಟನೆಯ -ಕನಸು-ಸಿನಿಮಾಕ್ಕೆ ಚಿತ್ರಕತೆ-ಸಂಭಾಷಣೆ
ಕಲ್ಪಿತ ಕತೆಗಳ ವಿಚಾರವಾಗಿ ರಾಜ… ಕುಮಾರ್‌ ಮನಸ್ಸಿನ ಮಿಡಿತವನ್ನು ತಿಳಿಸಿದರು. ಜೊತೆಗೆ ಒಂದು ಕಲ್ಪಿತ ಕತೆಗೆ, ಕಲ್ಪಿತ ಪಾತ್ರಕ್ಕೆ ನಾವು ಮಿಡಿಯುವ ರೀತಿಯೇ ಕಾವ್ಯ ಎಂದು ಬಣ್ಣಿಸಿದರು.

ಕಾವ್ಯವಾಚನ: ಮಾಂಸ ತಿಂದು ಮಂಜುನಾಥನ ಗುಡಿಗೆ ಹೋದ ಭಕ್ತನ ಎಳೆ ಇಟ್ಟುಕೊಂಡು ಪ್ರತಿಭಾ  ನಂದಕುಮಾರ್‌ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಕವನ ವಾಚಿಸಿದರೆ, ಮಿಕ್ಕ ಬಹುತೇಕರ ಕವಿತೆಗಳಲ್ಲಿ ಜಿಎಸ್‌ಟಿ, ಹಳೇ ನೋಟು ನಿಷೇಧ, ಕಪ್ಪು$ಹಣ-ಇವೇ
ತುಂಬಿಕೊಂಡಿದ್ದವು ಎಂಬ ಕವಿತೆಗಳ ವಾಚನ ಗೋಷ್ಠಿಯಲ್ಲಿ ಹೊರಹೊಮ್ಮಿದವು. 

Advertisement

Udayavani is now on Telegram. Click here to join our channel and stay updated with the latest news.

Next