Advertisement
ಅಫ್ಘಾನಿಸ್ಥಾನಬಂದೂಕುಧಾರಿ ಉಗ್ರ, ಹಸಿವೆಂಬ ಉಗ್ರ- ಇವೆರಡೂ ಸದ್ಯಕ್ಕೆ ಅಫ್ಘಾನಿಸ್ಥಾನದ ಶ್ರೀಸಾಮಾನ್ಯನ ಜೀವ ಹಿಂಡುತ್ತಿವೆ. ತಾಲಿಬಾನ್ ಉಗ್ರರ ಕಪಿಮುಷ್ಟಿಗೆ ಸಿಲುಕಿದ ಮೇಲೆ ಅಫ್ಘಾನಿಸ್ಥಾನದಲ್ಲಿ ವಲಸೆ ತೀವ್ರಗೊಂಡು, ಆಹಾರ ಸಿಗದೆ, ಹಸಿವಿನಿಂದ ಸತ್ತವರು ಲೆಕ್ಕವೇ ಇಲ್ಲ. ಈಗಲೂ ಅಲ್ಲಿ ಶೇ.71 ಮಂದಿಗೆ ಸೂಕ್ತ ಆಹಾರ ಲಭಿಸದೆ, ಪಾಕಿಸ್ಥಾನದ ಗಡಿಯಲ್ಲಿ ದುಬಾರಿ ಬೆಲೆಗೆ ಅಕ್ಕಿ- ಬೇಳೆ, ಗೋಧಿ ಕೊಳ್ಳುವ ದುಃಸ್ಥಿತಿ ಇದೆ. ಅಗತ್ಯ ವಸ್ತುಗಳನ್ನು ಅಮೆರಿಕನ್ ಡಾಲರ್‌ಗಳಲ್ಲಿ ಕೊಂಡು, ಅದನ್ನು ಅಫ್ಘಾನ್ ಅಫ್ಘಾನಿ ಕರೆನ್ಸಿಯ ದರದಲ್ಲಿ ಮಾರುವ ಕಾರಣ, ಸ್ಥಳೀಯ ವಸ್ತುಗಳ ಹೊರತಾಗಿ ಬೇರೆಲ್ಲ ಉತ್ಪನ್ನಗಳೂ ದುಬಾರಿ. ಹಸಿವಿನಿಂದ ದಿನೇದಿನೆ ಮಕ್ಕಳು ಸಾಯುತ್ತಿರುವ ಘೋರ ಸನ್ನಿವೇಶದ ಬಗ್ಗೆ ಮಾನವ ಹಕ್ಕು ಸಂಘಟನೆಗಳು, ತಾಲಿಬಾನ್ ನೇತೃತ್ವದ ಸರಕಾರವನ್ನು ಎಚ್ಚರಿಸುತ್ತಿದ್ದರೂ ಅದನ್ನು ಕೇಳುವ ಹೃದಯಗಳಿಲ್ಲ. ಅಲ್ಪಮಟ್ಟಿಗೆ ಆಹಾರಭದ್ರತೆ ಹೊಂದಿದ್ದ ಅಫ್ಘಾನಿಸ್ಥಾನದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ಶ್ರೀಮಂತರ, ಉಗ್ರರ ಕುಟುಂಬಗಳಿಗಷ್ಟೇ ಆಹಾರ ಪೂರೈಕೆ ಆಗುತ್ತಿದೆ. ಸತತ ಬರದಿಂದಲೂ ದೇಶ ಕಂಗೆಟ್ಟಿದೆ.
ಹತ್ತು ಕಟ್ಟು ನೋಟು ಕೊಟ್ಟರೂ, ಇಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಸಿಗು ವುದೂ ಅನು ಮಾ ನ. ರೆಸ್ಟೋರೆಂಟ್‌ನಲ್ಲಿ ಹೊಟ್ಟೆ ಭರ್ತಿ ಒಪ್ಪೊತ್ತಿನ ಊಟ ಮಾಡಲು ಮೈಮೇಲಿದ್ದ ಬಂಗಾರ ಮಾರಿದರೂ ಅದು ಕಡಿಮೆ. ಇಲ್ಲಿನ ಶೌಚಾಲಯಗಳಲ್ಲಿ ಟಾಯ್ಲೆಟ್ ಪೇಪರ್ ಬದಲು ಕರೆನ್ಸಿ ನೋಟ್ ಇಟ್ಟರೂ, ಅದನ್ನು ನೋಡಿ ಯಾವ ಪ್ರಜೆಗೂ ಅಚ್ಚರಿ ಆಗದು… 1950ರಲ್ಲಿ ವಿಶ್ವದ 4ನೇ ಅತೀ ಶ್ರೀಮಂತ ರಾಷ್ಟ್ರವಾಗಿದ್ದ, ಜಗತ್ತಿನ ತೈಲಪೂರೈಕೆ ರಾಷ್ಟ್ರಗಳಲ್ಲಿ ಒಂದಾಗಿದ್ದ ವೆನೆಝುವೆಲಾ ದೇಶದ ದುಃಸ್ಥಿತಿ ಇದು. ದಶಕಗಳಿಂದ ಹಣದುಬ್ಬರ ಸುನಾಮಿಗೆ ಸಿಕ್ಕಿ ತತ್ತರಿಸಿರುವ ವೆನೆಝುವೆಲಾ, ಪ್ರಸ್ತುತ ಜಗತ್ತಿನ “ಹೈಪರ್ ದಿವಾಳಿ ರಾಷ್ಟ್ರ’. ಭಾರತದ ಆರ್ಥಿಕ ಹಿಂಜರಿತ ಶೇ.6.7ರಷ್ಟಿದ್ದರೆ, ವೆನೆಝುವೆಲಾದಲ್ಲಿ ಈ ಪ್ರಮಾಣ ಶೇ.2000ದಷ್ಟು. ಸೋಶಿಯಲಿಸ್ಟ್ ಪಾರ್ಟಿಯ ನಿಕೋಲಸ್ ಮಾಡ್ಯುರೋನ ಅವರ ಕೆಟ್ಟ ಆಡಳಿತ, ದೇಶವನ್ನು ವಿಪತ್ತಿನ ತುತ್ತತುದಿಗೆ ತಂದು ನಿಲ್ಲಿಸಿದೆ. ಇಂಧನ ಕೊರತೆ, ವಿದ್ಯುತ್ ಅಲಭ್ಯತೆ, ಶುದ್ಧ ಕುಡಿಯುವ ನೀರಿನ ಅಭಾವ- ದೇಶದೆಲ್ಲೆಡೆ ಸಾಮಾನ್ಯ. ಕಾಳದಂಧೆ ವ್ಯಾಪಾರವೇ ಧರ್ಮ. ಅಮೆರಿಕನ್ ಡಾಲರ್ ಮುಂದೆ ಇಲ್ಲಿನ ಬೊಲೈವರ್ ಕರೆನ್ಸಿಯ ನೋಟುಗಳು ಕೇವಲ ಕಾಗದಗಳಾಗಿವೆ. ಶ್ರೀಲಂಕಾ
ಅರ್ಧ ಕರ್ನಾಟಕ ಗಾತ್ರದ, ದ್ವೀಪರಾಷ್ಟ್ರ ಶ್ರೀಲಂಕಾ ತನ್ನ ತಪ್ಪು ಆರ್ಥಿಕ ನೀತಿಗಳಿಂದಾಗಿ ಸಂಕಷ್ಟದ ಚಕ್ರ ವ್ಯೂಹದಲ್ಲಿ ಸಿಲುಕಿದೆ. ವಿದೇಶಿ ವಿನಿಮಯ ಸಂಗ್ರಹ ಶೇ.80ರಷ್ಟು ಖಾಲಿಯಾಗಿದೆ. ಒಂದು ಲೀಟರ್ ಪೆಟ್ರೋಲ್ ತುಂಬಿಸಿಕೊಳ್ಳಲು ಬಂಕ್‌ನ ಮುಂಭಾಗ ಸಾವಿರಾರು ಜನರ ಗಂಟೆಗಟ್ಟಲೆ ಕ್ಯೂ.. ಮನೆಗಳಲ್ಲಿ ಮಿಕ್ಸಿ, ಗೆùಂಡರ್ ಹಾಕಲು ಕನಿಷ್ಠ ನಿಮಿಷಗಳ ಕರೆಂಟ್ ಸಿಕ್ಕರೂ ಖುಷಿಪಡುವಂಥ ದೃಶ್ಯಗಳು ಇಲ್ಲಿ ಸಾಮಾನ್ಯ.
Related Articles
Advertisement
ಪಾಕಿಸ್ಥಾನ2018ರಲ್ಲಿ ಇಮ್ರಾನ್ ಖಾನ್ ಪಾಕ್ ಪ್ರಧಾನಿ ಹುದ್ದೆ ಸ್ವೀಕರಿಸುವಾಗ, “ಬಡತನವನ್ನು ತೊಲ ಗಿಸಿ, ಭ್ರಷ್ಟಾಚಾರ ಮುಕ್ತ ಪಾಕಿಸ್ಥಾನ ಕಟ್ಟುತ್ತೇನೆ’ ಎಂದು ಶಪಥಗೈದಿದ್ದರು. 2022ರ ಹೊತ್ತಿಗೆ ಪಾಕ್, ಜಗತ್ತಿನ ಮುಂದೆ ಭಿಕ್ಷಾಪಾತ್ರೆ ಹಿಡಿಯುವ ಸ್ಥಿತಿಗೆ ತಲುಪಿದೆ. ಸೌದಿ, ಚೀನ ರಾಷ್ಟ್ರಗಳಿಂದ ಬೆಟ್ಟದಷ್ಟು ಸಾಲ ಪಡೆದು ಮೊದಲೇ ಈ ರಾಷ್ಟ್ರ ಕಂಗೆಟ್ಟಿತ್ತು. ಇಮ್ರಾನ್‌ನ ಅಸಮರ್ಥ ನಾಯಕತ್ವ ಸಿಕ್ಕಮೇಲೆ ಅಲ್ಲಿನ ಶ್ರೀಸಾಮಾನ್ಯನ ಬದುಕು ಮೂರಾಬಟ್ಟೆಯಾಗಿದೆ. ಆರ್ಥಿಕ ದಿವಾಳಿತನವೇ ಇಮ್ರಾನ್ ಖಾನ್ ಸರಕಾರದ ಅಸ್ತಿತ್ವಕ್ಕೆ ಕಂಟಕವಾಗಿದೆ. ಜನರ ಕನಿಷ್ಠ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಲಾಹೋರ್- ಇಸ್ಲಾಮಾಬಾದ್‌ನ ಹೆದ್ದಾರಿಯ ಭೂಭಾಗವನ್ನೇ 1 ಶತಕೋಟಿ ಅಮೆರಿಕನ್ ಡಾಲರ್‌ಗೆ ಸರಕಾರ ಅಡ ಇಟ್ಟಿದೆ. ತಪ್ಪು ಆರ್ಥಿಕ ನೀತಿ, ಪೆಟ್ರೋಲ್ ಬೆಲೆಯಲ್ಲಿ ನಿರಂತರ ಏರಿಕೆಯು ಅಗತ್ಯ ವಸ್ತುಗಳು ದುಬಾರಿಯಾಗಲು ಪ್ರಮುಖ ಕಾರಣ. ಆಹಾರ ಹಣದುಬ್ಬರವೇ ಇಲ್ಲಿ ಶೇ.15.1 ತಲುಪಿದೆ! ಜಾಗ ತಿ ಕ ಮಾರುಕಟ್ಟೆಯಲ್ಲಿ ದುಬಾರಿ ದರಕ್ಕೆ ಸಕ್ಕರೆ ಖರೀದಿಸಿ, ಕೈಸುಟ್ಟುಕೊಂಡಿದ್ದ ಪಾಕ್, ಪ್ರಸ್ತುತ ಭಾರತದ ಗುಣಮಟ್ಟದ ಹಾಗೂ ಕಡಿಮೆ ದರದ ಸಕ್ಕರೆ ಯನ್ನು ಚಹಾದಲ್ಲಿ ಕರಗಿಸಿಕೊಳ್ಳಬೇಕಾದ ಅನಿವಾರ್ಯತೆಗೆ ತಲುಪಿದೆ. ಸೂಡಾನ್
ಸರಕಾರ ವಿಸರ್ಜನೆಗೊಂಡು, ಮಿಲಿಟರಿ ದಂಗೆಯಿಂದ ಕಂಗೆಟ್ಟಿರುವ ಆಫ್ರಿಕಾ ಖಂಡದ ಸೂಡಾನ್‌ನ ಹಸಿವಿನ ನರಳಾಟ ಮುಗಿಯುವಂಥದ್ದಲ್ಲ. ಕೆಲವು ದಿನಗಳ ಹಿಂದಷ್ಟೇ ಸೆಂಟ್ರಲ್ ಬ್ಯಾಂಕ್ ಆಫ್ ಸೂಡನ್ ಒಂದು ಹೇಳಿಕೆ ನೀಡಿತ್ತು- “ಬ್ಯಾಂಕ್‌ಗಳು ಮತ್ತು ವಿನಿಮಯ ಸಂಸ್ಥೆಗಳು ಸೂಡಾನೀಸ್ ಪೌಂಡ್‌ನ ಮೌಲ್ಯದ ಆಧಾರದ ಮೇಲೆ ದೇಶದಲ್ಲಿನ ಪೂರೈಕೆ ಮತ್ತು ಬೇಡಿಕೆಯನ್ನು ನಿರ್ಧರಿಸುತ್ತವೆ’ ಎಂದಿತ್ತು. ಈ ಹೇಳಿಕೆ ಪ್ರಕಟಗೊಂಡ ಮರುವಾರವೇ, ಮಾರುಕಟ್ಟೆಯಲ್ಲಿನ ಅತ್ಯಲ್ಪ ವಸ್ತುಗಳಿಗೆ ದಂಗಲ್ ಶುರುವಾಗಿತ್ತು. ಕನಿಷ್ಠ ವಸ್ತುಗಳಿಗೆ ಕಗ್ಗೊಲೆಗಳು ನಡೆದವು. ಉತ್ಪನ್ನಗಳ ಬೆಲೆ ಗಗನ ಮುಟ್ಟಿದ್ದವು. ಈ ಬಡರಾಷ್ಟ್ರಕ್ಕೆ ಗೋಧಿ ಪೂರೈಸಿ ಹೊಟ್ಟೆ ತುಂಬಿಸುತ್ತಿದ್ದಿದ್ದು ರಷ್ಯಾ (ಶೇ.80) ಮತ್ತು ಉಕ್ರೇನ್ (ಶೇ.7). ಈಗ ಅವೆರಡೂ ರಾಷ್ಟ್ರಗಳು ಕಾದಾಟಕ್ಕಿಳಿದ ಪರಿಣಾಮ ಸೂಡಾನ್‌ನ ಪ್ರಜೆಗಳ ಹಸಿವಿನ ಆಕ್ರಂದನ ಕೇಳುವವರೇ ಇಲ್ಲದಂತಾಗಿದೆ. ಎಲ್ಲ ಆಹಾರಗಳ ಬೆಲೆ ಶೇ.700ರಷ್ಟು ಅಧಿಕಗೊಂಡಿವೆ. ದೇಶದಲ್ಲಿ ಕೃಷಿ ಉತ್ಪಾದನೆ ಶೇ.19 ಕುಸಿತ ಕಂಡಿದೆ. ಅಗತ್ಯ ಉತ್ಪನ್ನಗಳನ್ನು ಹೊರದೇಶಗಳಿಂದ ಖರೀದಿಸಲೂ ಈ ದೇಶದಲ್ಲಿ ದುಡ್ಡಿಲ್ಲ. ಕಾಳದಂಧೆ ವ್ಯಾಪಾರ, ಕ್ರಿಪ್ಟೋಕರೆನ್ಸಿ ಹಾವಳಿ ದೇಶದ ಆರ್ಥಿಕತೆಯನ್ನು ಅಕ್ಷರಶಃ ಮುಳುಗಿಸಿವೆ. ಇವುಗಳ ಸ್ಥಿತಿಯೂ ಚಿಂತಾಜನಕ
ಲೆಬನಾನ್ ,ಸಿರಿಯಾ ,ಇರಾಕ್ ,ಲಿಬಿಯಾ,ಯೆಮೆನ್ ,ಗ್ರೀಸ್ ,ರಷ್ಯಾ ,ಉಕ್ರೇನ್