Advertisement

ಡಿಎಸ್‌ಎಲ್‌ಆರ್‌ ಕೆಮರಾದಲ್ಲಿ ಫೋಟೋ ಸೆರೆ ಹಿಡಿಯುವುದೇ ಆನಂದ

10:09 AM Jan 04, 2020 | mahesh |

ಫೋಟೋ ಕ್ಲಿಕ್ಕಿಸುವುದು ಎಂದರೆ ಎಲ್ಲರಿಗೂ ಆಸಕ್ತಿ. ಇತ್ತೀಚಿನ ದಿನಗಳಲ್ಲಿ ವಿವಿಧ ಕಂಪೆನಿಯ ಮೊಬೈಲ್‌ ಫೋನ್‌ಗಳಲ್ಲಿ ಎಷ್ಟೇ ಮೆಗಾ ಫಿಕ್ಸೆಲ್‌ ಕೆಮರಾ ಬಂದರೂ, ಡಿಎಸ್‌ಎಲ್‌ಆರ್‌ ಕೆಮರಾದಲ್ಲಿ ಫೋಟೋ ಸೆರೆ ಹಿಡಿಯುವುದರಲ್ಲಿ ಇರುವ ವೈಶಿಷ್ಟ್ಯವೇ ಬೇರೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಂಪೆನಿಯ ಕೆಮರಾಗಳು ಮಾರುಕಟ್ಟೆಯಲ್ಲಿದ್ದು, ಕೆಲವೊಂದು ಕೆಮರಾ ಉತ್ಪಾದನ ಕಂಪೆನಿಗಳು ತನ್ನ ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಾಗಿದೆ.

Advertisement

ಕೆಮರಾ ಉತ್ಪಾದನ ಸಂಸ್ಥೆಗಳಲ್ಲಿ ಕೆನಾನ್‌ ಕಂಪೆನಿ ಮುಖ್ಯವಾದುವು. ಈ ಕಂಪೆನಿಯ ಡಿಎಸ್‌ಎಲ್‌ಆರ್‌ ಕೆಮರಾಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೆನಾನ್‌ ಇಒಎಸ್‌-1ಡಿ ಎಕ್ಸ್‌ ಮಾರ್ಕ್‌ 3 ಕೆಮರಾ ಮಾರುಕಟ್ಟೆಗೆ ಸದ್ಯದಲ್ಲೇ ಬರಲಿದೆ. ಈ ಕೆಮರಾದಲ್ಲಿ ಅಟೋಫೋಕಸ್‌ ಟ್ರಾಕಿಂಗ್‌ ಜತೆ ಎಫ್‌ ಸೆನ್ಸಾರ್‌ ತಂತ್ರಜ್ಞಾನ ಇರಲಿದೆ. ಇದರೊಡನೆ ವೈಫೈ, ಜಿಪಿಎಸ್‌, ಬ್ಲೂಟೂತ್‌, ಲೈವ್‌ ವಿವ್‌ ಮೋಡ್‌ ಇರಲಿದೆ.

ಅದೇ ರೀತಿ ಕೆನಾನ್‌ ಇಒಎಸ್‌ ಆರ್‌ ಮಾಡೆಲ್‌ ಕೂಡ ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಕೆಮರಾದಲ್ಲಿ ಕೇವಲ ಒಂದೇ ಮೆಮೋರಿ ಕಾರ್ಡ್‌ ಅಳವಡಿಸುವ ತಂತ್ರಜ್ಞಾನ ಹೊಂದಿರಲಿದೆ ಎಂದು ಹೇಳಲಾಗುತ್ತಿದೆಯಾದರೂ, ಕೆಮರಾ ಬಿಡುಗಡೆಯಾದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಬೇಕಲಿದೆ. ಇದೇ ಕಂಪೆನಿಯ ಇಒಎಸ್‌ ಎಂ50 ಮಾರ್ಕ್‌ 2 ಕೆಮರಾ ಕೂಡ ಬಿಡುಗಡೆಗೆ ತಯಾರಾಗಿದೆ. ಚಿಕ್ಕ ಗಾತ್ರದ ಕೆಮರಾ ಇದಾಗಿದ್ದು, ಲೆನ್ಸ್‌ ಬದಲಾವಣೆ ಮಾಡುವಂತಹ ವೈಶಿಷ್ಟ್ಯತೆಯನ್ನು ಹೊಂದಿದೆ.

ಕೆಮರಾ ಉತ್ಪಾದನ ಸಂಸ್ಥೆಯಲ್ಲಿ ನಿಕಾನ್‌ ಕೂಡ ಹಿಂದೆ ಬಿದ್ದಿಲ್ಲ. 2020ನೇ ವರ್ಷದಲ್ಲಿ ತನ್ನ ನೂತನ ಕೆಮರಾಗಳನ್ನು ಪರಿಚಯಿಸಲು ತಯಾರಿದೆ. ನಿಕಾನ್‌ ಸಂಸ್ಥೆಯ ಡಿ760 ಕೆಮರಾ 2020ಕ್ಕೆ ಮಾರುಕಟ್ಟೆ ಪ್ರವೇಶ ಪಡೆಯಲಿದೆ ಎನ್ನಲಾಗುತ್ತಿದೆ. ನಿಕಾನ್‌ ಡಿ6 ಡಿಎಸ್‌ಎಲ್‌ಆರ್‌ ಕೆಮರಾ ಕೆಲ ತಿಂಗಳಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

ಈ ಕೆಮರಾದಲ್ಲಿ ಪೂರ್ಣ ಪ್ರಮಾಣದ ಫ್ರೇಮ್‌ ಸೆನ್ಸಾರ್‌ ಹೊಂದಿರಲಿದ್ದು, 4ಕೆ ವಿಡಿಯೋ ರೆಕಾರ್ಡ್‌ ಮಾಡುವಂತಹ ಸಾಮರ್ಥ್ಯ ಹೊಂದಿರಲಿದೆ. ಜತೆಗೆ ವೈಫೈ, ಟಚ್‌ ಸ್ಕ್ರೀನ್‌ ಇರಲಿದೆ. ಅದೇ ರೀತಿ ನಿಕಾನ್‌ ಝಡ್‌ 9, ನಿಕಾನ್‌ ಝಡ್‌ 8, ನಿಕಾನ್‌ ಝಡ್‌ 30, ನಿಕಾನ್‌ ಡಿ 5700 ಕೆಮರಾ ಕೂಡ ಈ ವರ್ಷ ಕಮಾಲ್‌ ಮಾಡುವ ಸಾಧ್ಯತೆ ಇದೆ.

Advertisement

ಕೆಮರಾ ಖರೀದಿ ಮುನ್ನ ಎಚ್ಚರ ಇರಲಿ
ಕೆಮರಾ ಖರೀದಿ ಮಾಡುವ ಬದಲು ಕೆಲವೊಂದು ವಿಚಾರಗಳನ್ನು ಗಮನ ಹರಿಸಬೇಕು. ಡಿಎಸ್‌ಎಲ್‌ಆರ್‌ ಕೆಮರಾ ಖರೀದಿ ಮಾಡುವಾಗ ಮೆಗಾ ಪಿಕ್ಸೆಲ್‌ ಮುಖ್ಯವಲ್ಲ. ಏಕೆಂದರೆ, ಡಿಎಸ್‌ಎಲ್‌ಆರ್‌ ಕೆಮರಾ ಅಂದ ಮೇಲೆ ಹೆಚ್ಚಿನ ಮೆಗಾ ಪಿಕ್ಸೆಲ್‌ ಇರುತ್ತದೆ. ಕೆಮರಾ ಖರೀದಿ ವೇಳೆ ಬೇಕಿರುವ ಲೆನ್ಸ್‌ ಯಾವುದು ಎಂಬುವುದನ್ನು ತಿಳಿಯಬೇಕು. ಏಕೆಂದರೆ ಆಯಾ ಕಂಪೆನಿ ಕೆಮರಾದ ಲೆನ್ಸ್‌ ಅದಕ್ಕೆ ಮಾತ್ರ ಉಪಯೋಗಿಸಲು ಸಾಧ್ಯ.

ಕೆಮರಾ ಕೊಳ್ಳುವಾಗ ಅದರ ಜತೆ ಎರಡು ಕಿಟ್‌ ಲೆನ್ಸ್‌ ಗಳನ್ನು ಕೊಡುತ್ತಾರೆ. ವೈಡ್‌ ಆ್ಯಂಗಲ್‌ ಲೆನ್ಸ್‌ (18-55 ಎಂ ಎಂ) ಮತ್ತು ಟೆಲಿ ಫೋಟೋ ಲೆನ್ಸ್‌ / ಜೂಮ್‌ ಲೆನ್ಸ್‌ (55-250/55-300 ಎಂಎಂ). ವೈಡ್‌ ಆ್ಯಂಗಲ್‌ ಲೆನ್ಸ್‌ನಲ್ಲಿ ಜೂಮ್‌ ಕೊಂಚವಷ್ಟೇ ಮಾಡಬಹುದು. ಇದನ್ನು ಬೆಟ್ಟಗುಡ್ಡ, ಮದುವೆ, ಹುಟ್ಟು-ಹಬ್ಬದಂತಹ ಸಮಾರಂಭಗಳಲ್ಲಿ ಮತ್ತು ಕ್ಯಾಂಡಿಡ್‌ ಚಿತ್ರಗಳನ್ನು ಸೆರೆಹಿಡಿಯಲು ಬಳಸುತ್ತೇವೆ. ವನ್ಯಜೀವಿ, ಚಂದಿರನ ಛಾಯಾಗ್ರಹಣ ಮತ್ತು ಇತರೆ ಸಂದರ್ಭಗಳಲ್ಲಿ ಟೆಲಿಫೋಟೋ ಲೆನ್ಸ್‌ಗಳನ್ನು ಬಳಸುತ್ತೇವೆ. ಸೆನ್ಸರ್‌ ಕ್ಲೀನಿಂಗ್‌ ವ್ಯವಸ್ಥೆ, ಕೆಮರಾ ಬ್ಯಾಟರಿ ಬ್ಯಾಕ್‌ಅಪ್‌ ಬಗ್ಗೆ ಕೂಡ ಗಮನ ಹರಿಸಬೇಕು.

ಕೆಮರಾ ಉತ್ಪಾದನ ಸಂಸ್ಥೆಯಲ್ಲಿ ನಿಕಾನ್‌ ಕೂಡ ಹಿಂದೆ ಬಿದ್ದಿಲ್ಲ. 2020ನೇ ವರ್ಷದಲ್ಲಿ ತನ್ನ ನೂತನ ಕೆಮರಾಗಳನ್ನು ಪರಿಚಯಿಸಲು ತಯಾರಿದೆ. ನಿಕಾನ್‌ ಸಂಸ್ಥೆಯ ಡಿ760 ಕೆಮರಾ 2020ಕ್ಕೆ ಮಾರುಕಟ್ಟೆ ಪ್ರವೇಶ ಪಡೆಯಲಿದೆ ಎನ್ನಲಾಗುತ್ತಿದೆ. ನಿಕಾನ್‌ ಡಿ6 ಡಿಎಸ್‌ಎಲ್‌ಆರ್‌ ಕೆಮರಾ ಕೆಲ ತಿಂಗಳಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ. ಈ ಕೆಮರಾದಲ್ಲಿ ಪೂರ್ಣ ಪ್ರಮಾಣದ ಫ್ರೇಮ್‌ ಸೆನ್ಸಾರ್‌ ಹೊಂದಿರಲಿದ್ದು, 4ಕೆ ವಿಡಿಯೋ ರೆಕಾರ್ಡ್‌ ಮಾಡುವಂತಹ ಸಾಮರ್ಥ್ಯ ಹೊಂದಿರಲಿದೆ. ಜತೆಗೆ ವೈಫೈ, ಟಚ್‌ ಸ್ಕ್ರೀನ್‌ ಇರಲಿದೆ.

ಆನ್‌ಲೈನ್‌ ಖರೀದಿ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ಡಿಎಸ್‌ಎಲ್‌ಆರ್‌ ಕೆಮರಾ ಖರೀದಿ ಮಾಡಲು ಆನ್‌ಲೈನ್‌ನಲ್ಲಿ ಹೆಚ್ಚಿನ ಬೇಡಿಕೆ ಇದೆ. ಫ್ಲಿಪ್‌ಕಾರ್ಟ್‌, ಅಮೆಜಾನ್‌ ಸೇರಿ ವಿವಿಧ ಆನ್‌ಲೈನ್‌ ಖರೀದಿ ತಾಣಗಳಲ್ಲಿ ಶೋರೂಂಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ವಿವಿಧ ಆಯ್ಕೆಗಳು ಜತೆಗೆ ವಿವಿಧ ಕಂಪೆನಿಯ ಕೆಮರಾಗಳು ಒಂದೇ ಸೂರಿನಲ್ಲಿ ಸಿಗುತ್ತದೆ. ಅಲ್ಲದೆ, ಇಎಂಐ ಕೂಡ ಲಭ್ಯವಿರುವುದರಿಂದ ಆನ್‌ಲೈನ್‌ ಖರೀದಿಗೆ ಹೆಚ್ಚಿನ ಮಂದಿ ಇಷ್ಟಪಡುತ್ತಾರೆ.

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next