ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ವೃತ್ತಿ ರಂಗಭೂಮಿ ನಾಟಕಗಳು ಅಂದೇ ಹುಟ್ಟಿ ಅಂದೇ ತನ್ನ ಜೀವ ಕಳೆದುಕೊಳ್ಳುವುದರಿಂದ ರಂಗಕರ್ಮಿಗೆ ಯಾವುದೇ ಪ್ರಶಸ್ತಿ ಪುರಸ್ಕಾರಗಳು ದೊರೆಯದಂತಾಗಿದೆ ಎಂದು ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆ ಪ್ರಾದೇಶಿಕ ನಿರ್ದೇಶಕ ಸುರೇಶ್ ಆನಗಹಳ್ಳಿ ಬೇಸರ ವ್ಯಕ್ತಪಡಿಸಿದರು.
ನಗರದ ಕದಂಬ ರಂಗವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಕಲಾಮಂದಿರದಲ್ಲಿ ಆಯೋಜಿಸಿರುವ ಮೂರು ದಿನಗಳ ಕದಂಬ- ರಂಗಾವಳಿ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವೃತ್ತಿ ನಾಟಕಗಳು ಬಹುಬೇಗ ತನ್ನ ಜೀವ ಕಳೆದುಕೊಳ್ಳಲಿದ್ದು, ಇದರ ಜತೆಗೆ ರಂಗಭೂಮಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ದಾಖಲೆಯಾಗಿ ಉಳಿದಿಲ್ಲ.
ಇದರಿಂದಾಗಿ ರಂಗಭೂಮಿಗೆ ಜಾnನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಪಂಡಿತರು ಇಲ್ಲದಂತಾಗಿದೆ. ಇನ್ನೂ ರಂಗಭೂಮಿಯಲ್ಲಿರುವ ವಿಮರ್ಶೆಗಳು ಶೂನ್ಯವಾಗಿದ್ದು, ರಂಗಭೂಮಿಯಲ್ಲಿ ವಿಮರ್ಶೆಗಿಂತಲೂ ಹೆಚ್ಚಾಗಿ ಮೀಮಾಂಸೆ ಹೊಂದಿರಬೇಕು. ಇದು ಸಾಧ್ಯವಾಗದಿದ್ದಲ್ಲಿ ರಂಗಕರ್ಮಿಗಳ ಕೆಲಸ ಹಾಗೂ ಕೃತಿಗಳಿಗೆ ಯಾವುದೇ ಬೆಲೆ ಇರುವುದಿಲ್ಲ ಎಂದು ಹೇಳಿದರು.
ಬಹುತೇಕ ಕಡೆಗಳಲ್ಲಿ ಕಥೆಯಾಧಾರಿತ ರಂಗಭೂಮಿ ಬದಲಿಗೆ ಪ್ರಸ್ತುತತೆಯನ್ನು ಅಭಿವ್ಯಕ್ತಿಗೊಳಿಸುವ ಘಟನೆ ಆಧಾರಿತ ರಂಗಭೂಮಿಗಳು ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಮಾತ್ರ ಕಥೆಯಾಧಾರಿತ ರಂಗಭೂಮಿ ಇಂದಿಗೂ ಜೀವಂತವಾಗಿದೆ. ಆದರೆ ಈ ರಂಗಭೂಮಿ ಹಾಗೂ ಅಲ್ಲಿನ ರಂಗಕರ್ಮಿಗಳು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ.
ರಂಗಕರ್ಮಿಗಳು ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದು, ಸಾಹಿತ್ಯದಲ್ಲಿರುವ ಬರಹ ಕೇಂದ್ರಿತ, ನವ್ಯ ಹಾಗೂ ಕೃತಿ ಕೇಂದ್ರಿತ ಎಂಬ ಮೂರು ಕಾಲಘಟ್ಟಗಳಿಂದ ಭಾಷಾ ಸಾಹಿತ್ಯ ಬೆಳೆಯಲು ಸಹಾಯವಾಗುತ್ತದೆ. ಜತೆಗೆ ಸಾಹಿತ್ಯದ ಭಾಷೆ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಓದುವ ಕೇಂದ್ರಿತ ಸಾಹಿತ್ಯದಲ್ಲಿ ಹೆಚ್ಚು ಬೆಳವಣಿಗೆಯಾಗಲಿದ್ದು, ಇದರಿಂದ ವಿಮರ್ಶೆಯಲ್ಲಿ ಹೆಚ್ಚಿನ ಬದಲಾವಣೆ ಆಗಲಿದೆ.
ಹೀಗಿದ್ದರೂ ರಂಗಭೂಮಿ ತನ್ನ ಆರಂಭದಿಂದಲೂ ವಿಮಶಾì ಸಮಸ್ಯೆಯನ್ನು ಎದುರಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಡಾ.ನ.ರತ್ನ, ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ಸುರೇಶ್‌ಬಾಬು, ವೇದಿಕೆ ಕಾರ್ಯದರ್ಶಿ ಜಿ.ಸುಬ್ಬನರಸಿಂಹ, ಕೋಶಾಧ್ಯಕ್ಷ ಡಿ.ತಿಪ್ಪಣ್ಣ ಹಾಜರಿದ್ದರು.