Advertisement

ಪಿಂಕ್‌ ಬಾಲ್‌ ಟೆಸ್ಟ್‌: ವೀಕ್ಷಕರಿಗೆ ಹಣ ವಾಪಸ್‌

12:59 AM Nov 26, 2019 | Team Udayavani |

ಕೋಲ್ಕತಾ: ಕೋಲ್ಕತಾದಲ್ಲಿ ನಡೆದ ಭಾರತ-ಬಾಂಗ್ಲಾದೇಶ ನಡುವಿನ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಮೂರೇ ದಿನಗಳಲ್ಲಿ ಮುಗಿದುದರಿಂದ ಉಳಿದೆರಡು ದಿನಗಳ ಟಿಕೆಟ್‌ ಮೊತ್ತವನ್ನು ವೀಕ್ಷಕರಿಗೆ ಮರಳಿಸಲು ಬಂಗಾಲ ಕ್ರಿಕೆಟ್‌ ಮಂಡಳಿ (ಕ್ಯಾಬ್‌) ನಿರ್ಧರಿಸಿದೆ.

Advertisement

4ನೇ ಹಾಗೂ 5ನೇ ದಿನದಾಟದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದವರಿಗೆ ಈಗಾಗಲೇ ಹಣವನ್ನು ಮರಳಿಸುವ ಪ್ರಕ್ರಿಯೆ ಆರಂಭವಾಗಿದೆ. ಕೌಂಟರ್‌ನಲ್ಲಿ ಟಿಕೆಟ್‌ ಖರೀದಿಸಿದವರಿಗೆ ಮಂಗಳವಾರದಿಂದ ಈಡನ್‌ ಗಾರ್ಡನ್ಸ್‌ ಕೌಂಟರ್‌ನಲ್ಲೇ ಮೊತ್ತವನ್ನು ವಾಪಸ್‌ ಮಾಡಲಾಗುವುದು.

“ವೀಕ್ಷಕರಿಗೆ ಈ ಪಂದ್ಯದ ವೇಳೆ ಉತ್ತಮ ರೀತಿಯ ಸೌಕರ್ಯವನ್ನು ಒದಗಿಸಲಾಗಿದೆ. ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೆ ಪ್ರೇಕ್ಷಕರ ಬೆಂಬಲ ಅಮೋಘ ಮಟ್ಟದಲ್ಲಿತ್ತು. ಇದನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಕೃತಜ್ಞತೆಗಳು. ಪಂದ್ಯ ಬೇಗನೇ ಮುಗಿದುದರಿಂದ ಕೊನೆಯ 2 ದಿನಗಳ ಟಿಕೆಟ್‌ ಮೊತ್ತವನ್ನು ಹಿಂದಿರುಗಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಕ್ಯಾಬ್‌ ಕಾರ್ಯದರ್ಶಿ ಅವಿಷೇಕ್‌ ದಾಲಿ¾ಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next