Advertisement

ಪೈಕಾ ದಂಗೆಯೇ ದೇಶದ ಮೊದಲ ಸ್ವಾತಂತ್ರ್ಯ ಚಳವಳಿ

07:20 AM Oct 24, 2017 | Harsha Rao |

ಹೊಸದಿಲ್ಲಿ: 1817ರಲ್ಲಿ ಬ್ರಿಟಿಷ್‌ ಆಡಳಿತದ ವಿರುದ್ಧ ನಡೆದ ಪೈಕಾ ದಂಗೆಯೇ ದೇಶದ ಮೊದಲ ಸ್ವಾತಂತ್ರ್ಯ ಹೋರಾಟವಾಗಿದ್ದು, ಇದನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ. ದಂಗೆ ನಡೆದು 200 ವರ್ಷಗಳಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪಠ್ಯದಲ್ಲಿ ಇದನ್ನು ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

1857ರ ಸಿಪಾಯಿ ದಂಗೆಗಿಂತ 40 ವರ್ಷ ಮೊದಲೇ ಈ ದಂಗೆ ನಡೆದಿತ್ತು. ಆದರೆ ಒಡಿಶಾದ ಹೊರಗೆ ಈ ವಿಚಾರ ಹೆಚ್ಚು ಚರ್ಚೆಗೆ ಒಳ ಪಟ್ಟಿಲ್ಲ. ಹೀಗಾಗಿ ಸಿಪಾಯಿ ದಂಗೆಯನ್ನೇ ಬ್ರಿಟಿಷರ ವಿರುದ್ಧ ನಡೆದ ಮೊದಲ ದಂಗೆ ಎಂದು ಪರಿಗಣಿಸಲಾಗಿದೆ.

ಒಡಿಶಾದ ಗಜಪತಿ ರಾಜನನ್ನು ಬೆಂಬಲಿಸಿ ಪೈಕಾ ಜನರು ಹೋರಾಟ ನಡೆಸಿದ್ದರು. ಪೈಕಾ ದಂಗೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವಂತೆ ಒಡಿಶಾ ಸಿಎಂ ನವೀನ್‌ ಪಾಟ್ನಾಯಕ್‌ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next