Advertisement
ನಗರದ ತರಳಬಾಳು ಕೇಂದ್ರದಲ್ಲಿ ಭಾನುವಾರ ಶಿವರಾಮ ಕಾರಂತ ವೇದಿಕೆ ಮತ್ತು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಹಮ್ಮಿಕೊಂಡಿದ್ದ ಶಿವರಾಮ ಕಾರಂತರ 117ನೇ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಎಲ್ಲರೂ ಗಾಸಿಪ್ ಕಾಲಂಗಳನ್ನು ಓದುತ್ತೇವೆ. ವಿಮರ್ಶೆ, ಲಘು ಹರಟೆಗಳನ್ನು ಮಾಡುತ್ತೇವೆ. ಆದರೆ, ಸಿನಿಮಾ ಒಂದು ಭಾಷೆಯಾಗಿ ಏನು ಮಾಡುತ್ತಿದೆ?
Related Articles
Advertisement
ವ್ಯಕ್ತಿತ್ವ ರೂಪಿಸಿದ ಶಕ್ತಿ: “ಬಾಲ್ಯದಲ್ಲಿ ನನಗೆ ಕಾರಂತರು ದೊಡ್ಡ ಆದರ್ಶವಾಗಿದ್ದರು. ಅವರ ಕಾದಂಬರಿಗಳನ್ನು ಓದಿಯೇ ನಾನು ಬೆಳೆದೆ. ನನ್ನ ವೃತ್ತಿ ಜೀವನ ಕೂಡ ಆರಂಭವಾಗಿದ್ದು ಅವರ ಕೃತಿ ಆಧರಿಸಿದ ಚಿತ್ರದ ಮೂಲಕ. ಹಾಗಾಗಿ, ಅವರು ವ್ಯಕ್ತಿಯಷ್ಟೇ ಅಲ್ಲ, ನನ್ನ ವ್ಯಕ್ತಿತ್ವ ರೂಪಿಸಿದ ಶಕ್ತಿಯಾದರು’ ಎಂದು ಮೆಲುಕುಹಾಕಿದ ಗಿರೀಶ್ ಕಾಸರವಳ್ಳಿ, ಜಾತಿಯ ಅಥವಾ ರಾಷ್ಟ್ರೀಯ ನೆಲೆಯಲ್ಲಿ ತುಳಿತದ ಸಮಗ್ರ ನೋಟವನ್ನು ಕತೆಗಳಲ್ಲಿ ಕಟ್ಟಿಕೊಟ್ಟರು ಎಂದು ಬಣ್ಣಿಸಿದರು.
ಲೇಖಕಿ ಡಾ.ವಿಜಯಾ ಸುಬ್ಬರಾಜ್ ಮಾತನಾಡಿ, ಶಿವರಾಮ ಕಾರಂತರನ್ನು ಕಾದಂಬರಿಕಾರ ಎನ್ನುವುದಕ್ಕೆ ಸೀಮಿತಗೊಳಿಸಲಾಗಿದೆ. ಹಾಗಾಗಿ, ಅದರಾಚೆಗೆ ಏನು ಬರೆದಿದ್ದಾರೆ ಎನ್ನುವುದನ್ನು ಬಹುತೇಕರು ಹುಡುಕಲು ಹೋಗುವುದೇ ಇಲ್ಲ. ಆದರೆ, ಗೀತ ನಾಟಕದಲ್ಲಿ ಕಾರಂತರು ಮತ್ತು ಪುತಿನ ಎರಡು ಶೃಂಗಗಳು ಎಂದು ವಿಶ್ಲೇಷಿಸಿದರು. ಲೇಖಕ ಕೆ. ರಾಜಕುಮಾರ್ ಮಾತನಾಡಿದರು.