ಸ್ಥಳಾಂತರಿಸಲಾಗಿತ್ತು. ರಾಂಪುರ ಆನೆ ಶಿಬಿರದಲ್ಲಿ ಮೇವು ಮೇಯಲು ಜಯಪ್ರಕಾಶ ಎಂಬ ಸಾಕಾನೆಯು ಕಾಡಿನೊಳಗೆ ಹೋಗಿದ್ದಾಗ ಕಾಡಾನೆ ದಾಳಿ ನಡೆಸಿದ್ದರಿಂದ ಜಯಪ್ರಕಾಶ್ ಕಾಲಿನ ಭಾಗಕ್ಕೆ ಬಲವಾದ ಏಟಾಗಿತ್ತು. ಸದ್ಯಕ್ಕೆ ಸಾಕಾನೆ ಜಯಪ್ರಕಾಶಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಗುಣಮುಖವಾಗುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ.
Advertisement
ಎರಡನೇ ಬಾರಿ ದಾಳಿ: ಜಯಪ್ರಕಾಶ್ ಆನೆ ರಾಂಪುರ ಶಿಬಿರಕ್ಕೆ ಸ್ಥಳಾಂತರ ಗೊಂಡು ಎರಡು ತಿಂಗಳಾಗಿದ್ದು ಕಳೆದ ತಿಂಗಳು ಕೂಡ ರಾಂಪುರ ಆನೆ ಶಿಬಿರದ ಬಳಿಯಲ್ಲಿಯೇ ಕಾಡಾನೆ ದಾಳಿ ನಡೆಸಿದ್ದವು. ಇದೇ ರಾಂಪುರ ಆನೆ ಶಿಬಿರದಲ್ಲಿ 2014ರಲ್ಲಿ ಕಾಂತಿ ಎಂಬ ಸಾಕಾನೆ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾಂತಿ ಸಾವನ್ನಪ್ಪಿತ್ತು. ಹಾಗಾಗಿ ಸಾಕಾನೆಗಳಿಗೆ ರಾಂಪುರ ಕ್ಯಾಂಪ್ ಸೂಕ್ತ ಸ್ಥಳವಲ್ಲ. ಇಂತಹ ಪ್ರದೇಶದಲ್ಲಿ ಸಾಕಾನೆಗಳು ವಾಸ ಮಾಡಿದರೆ ರಕ್ಷಣೆ ಇಲ್ಲ. ಇದೀಗ ಸಾಕಾನೆ ಗಾಯಗೊಂಡಿದೆ ಮುಂದೆ ಅನಾಹುತ ಆಗಬಹುದು. ಹಾಗಾಗಿ ಸಾಕಾನೆಗಳ ವಾಸಕ್ಕೆ ಸೂಕ್ತವಾದ ಶಿಬಿರವನ್ನು ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.