Advertisement

Malpe ಸ್ಕೂಟಿ ಸಮೇತ ನೀರಿಗೆ ಬಿದ್ದ ವ್ಯಕ್ತಿ ನಾಪತ್ತೆ

10:28 PM Jan 01, 2024 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಆಕಸ್ಮಿಕವಾಗಿ ಓರ್ವ ಸ್ಕೂಟಿ ಸಮೇತನಾಗಿ ದಕ್ಕೆ ಬಳಿಯ ನೀರಿಗೆ ಬಿದ್ದು ಮುಳುಗಡೆಗೊಂಡು ಕಣ್ಮರೆಯಾಗಿದ್ದಾರೆ. ಆತ ತಮಿಳುನಾಡು ಮೂಲದ ಮೀನುಗಾರನಾಗಿದ್ದು ಮಲ್ಪೆಯ ಬೋಟು ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ.

Advertisement

ನೀರಿಗೆ ಬಿದ್ದ ಮಾಹಿತಿ ತಿಳಿದು ತತ್‌ಕ್ಷಣ ಈಶ್ವರ್‌ ಮಲ್ಪೆ ಅವರು ಧಾವಿಸಿ ಬಂದು ನೀರಿಗೆ ಧುಮುಕಿ ಎಲ್ಲ ಕಡೆ ಜಾಲಾಡಿದರೂ ಆತನ ದೇಹ ಸಿಗಲಿಲ್ಲ. ಅದರೆ ಅತನ ಸ್ಕೂಟರ್‌ನ್ನು ಮಾತ್ರ ಪತ್ತೆಯಾಗಿದ್ದು ಹಗ್ಗದ ಸಹಾಯದಿಂದ ಮೇಲಕ್ಕೆ ತಂದರು.

 

 

Advertisement

Udayavani is now on Telegram. Click here to join our channel and stay updated with the latest news.

Next