ಮೈಸೂರು: ಖಾಲಿ ನಿವೇಶನದಲ್ಲಿ ಸುರಿದಿದ್ದ ಕಸದಲ್ಲಿನ ಬೆಂಕಿ ಹಾಕಿ ಸ್ಥಳೀಯ ನಿವಾಸಿಗಳನ್ನು ಉಸಿರುಗಟ್ಟಿಸುವಂತೆ ಮಾಡಿದ್ದ ಇಲವಾಲ ಗ್ರಾಮ ಪಂಚಾಯ್ತಿ, ಇದೀಗ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿದೆ.
“ಕಸಕ್ಕೆ ಬೆಂಕಿ: ಸಹಿಸದಷ್ಟು ದಟ್ಟ ಹೊಗೆ, ದುರ್ವಾಸನೆ’ ಶೀರ್ಷಿಕೆಯಡಿ ಶುಕ್ರವಾರ ಉದಯವಾಣಿ ವರದಿ ಪ್ರಕಟಿಸಿ, ಅಲ್ಲಿನ ನಿವಾಸಿಗಳು ಅನುಭವಿಸುತ್ತಿದ್ದ ಯಾತನೆಯನ್ನು ತೆರೆದಿಟ್ಟಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಇಲವಾಲ ಗ್ರಾಪಂ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಕಸ ಹಾಕುವುದನ್ನು ನಿಲ್ಲಿಸಿದ್ದಾರೆ.
ಚಿಕ್ಕೇಗೌಡನ ಕೊಪ್ಪಲು ಗ್ರಾಮದ ಬಳಿಯ ನಾಗವಾಲ ರಸ್ತೆ ಜಂಕ್ಷನ್ ಬಳಿ ಇರುವ ಖಾಲಿ ನಿವೇಶನದಲ್ಲಿ ಕಸದ ರಾಶಿಗೆ ಹಾಕಲಾಗಿದ್ದ ಬೆಂಕಿಯನ್ನು ಆರಿಸಿದ್ದಾರೆ. ಬಳಿಕ ಕಸದ ರಾಶಿಯ ಮೇಲೆ ಮೂರು ಟ್ರ್ಯಾಕ್ಟರ್‌ನಷ್ಟು ಮಣ್ಣನ್ನು ಸುರಿದಿದ್ದಾರೆ. ಇದರಿಂದ ಸ್ಥಳೀಯರು ನೆಮ್ಮದಿಯ ಇದೀಗ ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ:ಗ್ರಾಪಂ ಗದ್ದುಗೆಗೆ ಇನ್ನಿಲ್ಲದ ಪೈಪೋಟಿ: ತಂತ್ರ-ಪ್ರತಿತಂತ್ರ