Advertisement

ಲಾಕ್‌ಡೌನ್‌ ಹಿನ್ನೆಲೆ: ಅಗತ್ಯ ವಸ್ತು ಖರೀದಿಸಿದ ಜನ

06:36 PM May 10, 2021 | Team Udayavani |

ಕೋಲಾರ: ಜನತಾ ಕರ್ಫ್ಯೂ ಮುಂದುವರಿಯುತ್ತಿದ್ದಂತೆ ಸರ್ಕಾರ ಸೋಮವಾರದಿಂದ ಸಂಪೂರ್ಣಲಾಕ್‌ಡೌನ್‌ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜನತೆಭಾನುವಾರ ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದರು.

Advertisement

ಸೋಮವಾರದಿಂದ 14 ದಿನ ಲಾಕ್‌ಡೌನ್‌ ಇರು ತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕರುಭಾನು ವಾರವೇ ಮನೆಗೆ ಅಗತ್ಯವಾದ ದಿನಸಿ,ತರಕಾರಿ ಮತ್ತಿ ತರ ವಸ್ತುಗಳನ್ನು ಖರೀದಿಸಲುನಗರದ ಅಂಗಡಿಗಳ ಮುಂದೆ ಜಮಾಯಿಸಿದರು.

ಮಾಲ್‌ಗ‌ಳಲ್ಲಿ ಜನಜಂಗುಳಿ: ನಗರದ ಪ್ರಮುಖದಿನಸಿ ಮಾಲ್‌, ಸೂಪರ್‌ ಮಾರ್ಕೆಟ್‌ಗಳ ಮುಂದೆಜನರ ಉದ್ದುದ್ದ ಸಾಲು ಕಂಡು ಬಂದವು. ಸಾಮಾಜಿಕ ಅಂತರ ಕಾಪಾಡಬೇಕಾದ ಅನಿವಾರ್ಯತೆಹಿನ್ನೆಲೆಯಲ್ಲಿ ಮಾಲ್‌ಗ‌ಳಿಗೆ ಕೆಲವೇ ಮಂದಿಯನ್ನುಒಳಗೆ ಕಳುಹಿಸಿ ಅವರು ಖರೀದಿಸಿ ಹೊರ ಬಂದನಂತರ ಇನ್ನಷ್ಟು ಮಂದಿಯನ್ನು ಒಳಕಳುಹಿಸುವಪ್ರಕ್ರಿಯೆ ನಡೆದಿತ್ತು.

ಟ್ರಾಫಿಕ್‌ ಜಾಂ: ತರಕಾರಿ ಮಾರುಕಟ್ಟೆಯನ್ನು ನಗರದ ಜೂನಿಯರ್‌ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿಯೂ ಜನಜಂಗುಳಿ ಕಂಡುಬಂತು. ಜನ ಒಂದೇ ಬಾರಿಗೆ ದಿನಸಿ, ಅಗತ್ಯ ವಸ್ತುಗಳ ಖರೀದಿಗೆ ರಸ್ತೆಗಿಳಿದಿದ್ದರಿಂದಾಗಿ ನಗರದದೊಡ್ಡ ಪೇಟೆ, ಎಂ.ಜಿ.ರಸ್ತೆ, ಕಾಳಮ್ಮ ಗುಡಿ ರಸ್ತೆಗಳಲ್ಲಿಟ್ರಾಫಿಕ್‌ ಜಾಮ್‌ ಪರಿಸ್ಥಿತಿ ನಿರ್ಮಾಣವಾಯಿತು.

ಭಾನುವಾರದ ಬಾಡೂಟಕ್ಕೆ ಸಾಲು: ಸೋಮವಾರದಿಂದ ಲಾಕ್‌ಡೌನ್‌ ಘೋಷಣೆ ಹಿನ್ನೆಲೆ ಅದರಹಿಂದಿನ ದಿನವಾದ ಭಾನುವಾರ ಮಾಂಸ ಖರೀದಿಗೆಜನ ಮುಗಿಬಿದ್ದಿದ್ದು ಕಂಡು ಬಂತು. ನಗರದ ಎಲ್ಲಾ ಮಾಂಸದ ಅಂಗಡಿಗಳ ಮುಂದೆ ಉದ್ದೂದ್ದ ಸಾಲುಗಳು ಕಂಡು ಬಂದಿದ್ದು, ಸಾಮಾಜಿಕ ಅಂತರಕಾಪಾಡಿ ಖರೀದಿಸುತ್ತಿದ್ದುದು ವಿಶೇಷವಾಗಿತ್ತು.ನಗರದ ಮಾಂಸ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿದ್ದರಿಂದ ನಗರಸಭೆ ಅಧಿಕಾರಿಗಳು, ಪೊಲೀಸರು ಅಲ್ಲಿಗೆ ತೆರಳಿ ಜನತೆಗೆ ಬುದ್ದಿವಾದ ಹೇಳಿ ಕಳುಹಿಸುತ್ತಿದ್ದುದು ಕಂಡು ಬಂತು.

Advertisement

ನಗರಾದ್ಯಂತ ಬಂದೋಬಸ್ತ್:ಸೋಮವಾರದ ಲಾಕ್‌ಡೌನ್‌ಗೆಸಿದ್ಧತೆ ಎಂಬಂತೆ ಭಾನುವಾರವೇಪೊಲೀ ಸರು ರಸ್ತೆಗಿಳಿದಿದ್ದರು. ನಗರದ ಪ್ರಮುಖ ರಸ್ತೆ ಗಳಲ್ಲಿ ಲಾಠಿಹಿಡಿದ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದವಾಹನ ಗಳನ್ನು ನಿಲ್ಲಿಸಿ ವಾಪಸ್‌ ಕಳುಹಿಸಿದರು. ಈನಡುವೆ ಹೊರ ಜಿಲ್ಲೆಗಳಿಂದ ಬರು ತ್ತಿದ್ದ ವಾಹನಗಳ ತಪಾಸಣೆ ಮುಂದು ವರಿಸಲಾಗಿದ್ದು, ಸೋಮವಾರಮತ್ತಷ್ಟು ಬಿಗಿ ಬಂದೋಬಸ್ತ್ ಮಾಡುವ ಸಾಧ್ಯತೆಕಂಡು ಬಂತು.

ಮದುವೆ ಫಿಕ್ಸ್‌, ಬಟ್ಟೆ ಸಿಗುತ್ತಿಲ್ಲ: ಈ ನಡುವೆಈಗಾ ಗಲೇ ಮದುವೆ ಫಿಕ್ಸ್‌ ಆಗಿದ್ದು, ವರ, ಮಧುಮಗಳಿಗೆ, ಪೋಷಕರಿಗೆ ಬಟ್ಟೆ ಖರೀದಿಗೆ ಅವಕಾಶಸಿಗದೇ ಅನೇಕರು ಪರಿತಪಿಸುತ್ತಿದ್ದುದು ಕಂಡುಬಂತು. ಕೆಲವು ಪರಿಚಯಸ್ಥ ಬಟ್ಟೆ ಅಂಗಡಿಗಳವರುಗ್ರಾಹಕರನ್ನು ಒಳ ಕರೆದುಕೊಂಡು ಅಂಗಡಿ ಮುಚ್ಚಿವಹಿವಾಟು ನಡೆಸುತ್ತಿದ್ದುದು ಸಹಾ ಕಂಡು ಬಂತು.ಇದೇ ಪರಿಸ್ಥಿತಿ ಚಿನ್ನದ ಅಂಗಡಿಗಳದ್ದು ಆಗಿದ್ದು,ಮದುವೆಗೆ ಅಗತ್ಯವಾದ ಆಭರಣ ಖರೀದಿಗೂ ಕರ್ಫ್ಯೂ, ಲಾಕ್‌ಡೌನ್‌ ಅಡ್ಡಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next