Advertisement

ಕಾಂಗ್ರೆಸ್‌, ಬಿಜೆಪಿಗೆ ರಾಜ್ಯದ ಜನತೆ ಪಾಠ ಕಲಿಸುತ್ತಾರೆ

12:40 PM Mar 28, 2018 | Team Udayavani |

ಮೈಸೂರು: ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಂಹಕಾರವೇ ಅವರಿಗೆ ಮುಳುವಾಗಲಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌-ಬಿಜೆಪಿಗೆ ಈ ರಾಜ್ಯದ ಜನತೆ ಪಾಠ ಕಲಿಸುತ್ತಾರೆ ಎಂದು ಜೆಡಿಎಸ್‌ ರಾಜಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಅಳೆದು ಸುರಿದು, ನಾನು ನಂಜುಂಡೇಶ್ವರನ ದರ್ಶನಕ್ಕೆ ಹೋಗುವ ದಿನವೇ ಚುನಾವಣಾ ದಿನಾಂಕ ನಿಗದಿ ಮಾಡಿದೆ. ಆ ನಂಜುಂಡೇಶ್ವರ ಚುನಾವಣಾ ಆಯೋಗದವರಿಗೆ ಜಾnನೋದಯ ಮಾಡಿದ್ದಾನೆ. ಹೀಗಾಗಿ ಈ ಬಾರಿ ರಾಜ್ಯದ ಜನತೆ ಆಶೀರ್ವಾದ ಮಾಡಲಿದ್ದು,

ಈ ಭಾರಿ 113 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಮತಯಂತ್ರದ ಬಗ್ಗೆ ನಾನು ಯಾವುದೇ ಆರೋಪ ಮಾಡುವುದಿಲ್ಲ. ರಾಷ್ಟ್ರೀಯ ಪಕ್ಷಗಳು ಏನೇ ಗಿಮಿಕ್‌ ಮಾಡಿದರೂ ರಾಜ್ಯದ ಜನತೆ ಜೆಡಿಎಸ್‌ಗೆ ಮತ ಹಾಕಲಿದ್ದಾರೆ. ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸುವುದು ನಮ್ಮನ್ನೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರೆದಿಟ್ಟುಕೊಳ್ಳಿ ಸಿಎಂ: ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್‌ 128 ಸ್ಥಾನ ಗೆಲ್ಲಲಿದ್ದು, ಜೆಡಿಎಸ್‌ 25ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಬರೆದಿಟ್ಟುಕೊಳ್ಳಿ ಸಿದ್ದರಾಮಯ್ಯ ಅವರ ಈ ಮಾತು ಫ‌ಲಿತಾಂಶ ಬಂದಾಗ ಉಲ್ಟಾ ಆಗಲಿದ್ದು, ಜೆಡಿಎಸ್‌ 128 ಸ್ಥಾನ ಬಂದರೆ, ಕಾಂಗ್ರೆಸ್‌ 28 ಸ್ಥಾನಕ್ಕೆ ಕುಸಿಯಲಿದೆ ಎಂದು ತಿರುಗೇಟು ನೀಡಿದರು.

ಜೆಡಿಎಸ್‌ ಅವಕಾಶವಾದಿ ಸಿದ್ಧಾಂತ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ. ಒಂದೇ ವೇದಿಕೆಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಅವರು, ರಾಜ್ಯದ ಜನರ ಕಷ್ಟಗಳಿಗೆ ನನ್ನ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ, ಅದೇ ಜೆಡಿಎಸ್‌ ಸಿದ್ಧಾಂತ ಎಂದ ಅವರು, ನಮ್ಮ ಪಕ್ಷಕ್ಕೆ ಯಾವುದೇ ಮಿಷನ್‌ ಇಲ್ಲ. ಇರುವುದು ವಿಷನ್‌ ಮಾತ್ರ. ಈ ಕಾಂಗ್ರೆಸ್‌-ಬಿಜೆಪಿಯವರಿಗೆ ರಾಜ್ಯದ ಜನರೇ ಬುದ್ಧಿ ಕಲಿಸುತ್ತಾರೆ ಎಂದರು.

Advertisement

ತಪ್ಪಾಗಿ ಅಥ್ಯೆಸಲಾಗಿದೆ: ಕಾಂಗ್ರೆಸ್‌ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಎಚ್‌.ಡಿ.ದೇವೇಗೌಡರ ಹೇಳಿಕೆಯನ್ನು ತಪ್ಪಾಗಿ ಅಥ್ಯೆìಸಲಾಗಿದೆ. ದೇವೇಗೌಡರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್‌ ಎಷ್ಟು ಸ್ಥಾನ ಗೆಲ್ಲುತ್ತೆ ಎಂದು ಕಾಂಗ್ರೆಸ್ಸಿಗರನ್ನು ಕೇಳಿ ಎಂದಿದ್ದಾರೆ. ಅದನ್ನು ತಪ್ಪಾಗಿ ಅಥ್ಯೆìಸಲಾಗಿದೆ ಎಂದರು.

ನೈಸ್‌ ಕಂಪನಿ ಮಾಲೀಕರನ್ನು ಕಾಂಗ್ರೆಸ್‌ ಅಪ್ಪಿಕೊಂಡಿದೆ. ನೈಸ್‌ ವಿರುದ್ಧ ಜೆಡಿಎಸ್‌ ಹೋರಾಟ ಮಾಡುತ್ತಿದೆ. ಇನ್ನು ದೇವೇಗೌಡರು ಅಶೋಕ್‌ ಖೇಣಿ ವಿರುದ್ಧ 20 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಅಂತವರು ಕಾಂಗ್ರೆಸ್‌ ಜತೆಗೆ ಹೊಂದಾಣಿಕೆ ಮಾಡಿಕೊಳುತ್ತಾರಾ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ದೇವೇಗೌಡರು ವ್ಯಂಗ್ಯವಾಗಿ ಹೇಳಿದ್ದಾರೆಯೇ ಹೊರತು ಅವರ ಹೇಳಿಕೆಯ ಉದ್ದೇಶ ಕಾಂಗ್ರೆಸ್‌ ಜತೆಗೆ ಹೊಂದಾಣಿಕೆ ಎಂಬುದಲ್ಲ ಎಂದು ಸ್ಪಷ್ಟಪಡಿಸಿದರು.

ಈ ಚುನಾವಣೆಯಲ್ಲಿ ಸತ್ವ ಪರೀಕ್ಷೆ ಆಗಬೇಕು. ನಾನು ಸಿದ್ದರಾಮಯ್ಯ ಅವರ ಎದುರಾಳಿಯಾಗಿದ್ದೇನೆ. 25 ವರ್ಷಗಳಿಂದ ನಾನು ಜನರಿಗಾಗಿ  ಕೆಲಸ ಮಾಡಿದ್ದೇನೆ. ಅದನ್ನು ದೇವರು ಪರೀಕ್ಷೆ ಮಾಡುತ್ತಿದ್ದಾರೆ. ನಾನು ಅವರಿಗೆ ಕೆಲಸ ಮಾಡಿದ್ದರೆ ಗೆಲ್ತಿàನಿ, ಇಲ್ಲವಾದರೆ ಸಿದ್ದರಾಮಯ್ಯ ಗೆಲ್ತಾರೆ.
-ಜಿ.ಟಿ.ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next