Advertisement
ಯಾದಗಿರಿಯ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಯಿಂದ ರೈತರ ಬಾಳು ಬಂಗಾರವಾಗಲಿದೆ. ಆದರೆ ಅದನ್ನು ವಿರೋಧಿಸಿ 8-9 ತಿಂಗಳಿಂದ ನಿಜವಾದ ರೈತರಲ್ಲದ ದಲ್ಲಾಳಿಗಳು ಪ್ರತಿಭಟನೆ ನಡೆಸುತ್ತಿದ್ದು, ಎಲ್ಲಿಯೂ ಸಮರ್ಥನೆ ಸಿಕ್ಕಿಲ್ಲ ಎಂದರು.
Related Articles
Advertisement
ಯಾದಗಿರಿ ಜಿಲ್ಲೆಯ ಸಮರ್ಪಕ ನೀರಾವರಿ ಸೌಕರ್ಯ ದೊರೆತರೆ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೇಕ್ ಪಾಯಿಂಟ್ ನಿರ್ಮಾಣ ಅಗತ್ಯವಾಗಿದೆ ಎಂದು ಬೇಡಿಕೆ ಮುಂದಿಟ್ಟಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಇದಕ್ಕು ಮೊದಲು ಜನಾಶೀರ್ವಾದ ಯಾತ್ರೆಯ ಸಂಚಾಲಕ ರಾಜ್ಯ ಬಿಜೆಪಿ ನಾಯಕ ಜಗದೀಶ ಹಿರೇಮನಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರೆಡ್ಡಿ ನಾಯ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕುರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಶಶೀಲ್ ಜಿ.ನಮೋಶಿ, ಶರಣಪ್ಪ ತಳವಾರ, ಅಮಾತೆಪ್ಪ ಕಂದಕೂರ, ಡಾ|ವೀರಬಸವಂತರೆಡ್ಡಿ ಮುದ್ನಾಳ, ಗುರು ಶಿರವಾಳ, ಚಂದ್ರಶೇಖರಗೌಡ ಮಾಗನೂರ, ಲಲಿತಾ ಅನಪೂರ, ದೇವಿಂದ್ರನಾಥ ನಾದ, ಬಸವರಾಜ ಚಂಡರಕಿ, ವಿಲಾಸ್ ಬಿ.ಪಾಟೀಲ್, ಪ್ರಭಾವತಿ ಎಂ.ಕಲಾಲ್, ಅಮೀನರೆಡ್ಡಿ ಯಾಳಗಿ, ಭೀಮರೆಡ್ಡಿ ಮುದ್ನಾಳ ಇನ್ನಿತರರು ಇದ್ದರು.
ಭವ್ಯ ಸ್ವಾಗತ-ಪ್ರತಿಮೆಗೆ ಮಾಲಾರ್ಪಣೆಕಾರ್ಯಕ್ರಮಕ್ಕು ಮೊದಲು ಸಚಿವ ಖೂಬಾರನ್ನು ನಗರಸಭೆ ಅಧ್ಯಕ್ಷರು, ಪಕ್ಷದ ಪ್ರಮುಖರ ನಿಯೋಗ ಸ್ವಾಗತಿಸಿತು. ಬಳಿಕ ಹತ್ತಿಕುಣಿ ಕ್ರಾಸ್ ಮಾರ್ಗವಾಗಿ ವಾಹನದಲ್ಲಿ ಮೆರವಣಿಗೆ ಮೂಲಕ ಗಾಂಧಿ ವೃತ್ತಕ್ಕೆ ತೆರಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ, ಕನಕ ವೃತ್ತದಲ್ಲಿ ಕನಕದಾಸ, ಅಂಬೇಡ್ಕರ್ ವೃತ್ತದಲ್ಲಿ ಡಾ| ಬಾಬಾ ಸಾಹೇಬ ಅಂಬೇಡ್ಕರ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.