ಹಟ್ಟಿ ಚಿನ್ನದ ಗಣಿ: ತೀವ್ರ ಅಸ್ವಸ್ಥವಾಗಿದ್ದ ಚಿನ್ನದ ಗಣಿ ಕಂಪನಿ ಉದ್ಯೋಗಿಯ ಚಿಕಿತ್ಸಾ ವೆಚ್ಚ ಭರಿಸದ ಚಿನ್ನದ ಗಣಿ ಕಂಪನಿ ಕ್ರಮ ಖಂಡಿಸಿ ಪತ್ನಿ ಆ್ಯಂಬುಲೆನ್ಸ್‌ನಲ್ಲಿ ಪತಿಯನ್ನು ಇರಿಸಿಕೊಂಡು ಚಿನ್ನದ ಗಣಿ ಕಂಪನಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಪ್ರಸಂಗ ಬುಧವಾರ ನಡೆಯಿತು.
ಚಿನ್ನದ ಗಣಿ ಕಂಪನಿ ಉದ್ಯೋಗಿ ಶಿವಲಿಂಗಪ್ಪನವರಿಗೆ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಎದುರಾಗಿತ್ತು. ಚಿನ್ನದ ಗಣಿ ಕಂಪನಿ ಆಸ್ಪತ್ರೆ ವೈದ್ಯರು ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಯನ್ನು ರವಾನಿಸಿದ್ದಾರೆ. ಕಂಪನಿ ಆಡಳಿತ ವರ್ಗ ಚಿಕಿತ್ಸಾ ವೆಚ್ಚ ಭರಿಸದ್ದರಿಂದ ರೋಗಿಯನ್ನು ವಾಪಸ್ಸು
ಕರೆದುಕೊಂಡು ಹೋಗಿ ಎಂದು ಬಳ್ಳಾರಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಅಲ್ಲಿಂದ ಪತಿಯನ್ನು ಆ್ಯಂಬುಲೆನ್ಸ್‌ನಲ್ಲೇ ಕರೆತಂದ ಮಹಿಳೆ ಚಿನ್ನದ ಗಣಿ ಆಸ್ಪತ್ರೆ ಎದುರು ಆ್ಯಂಬುಲೆನ್ಸ್‌ನು° ಆಸ್ಪತ್ರೆ ಒಳಗೆ ಬಿಡದೇ ಪ್ರತಿಭಟನೆ ನಡೆಸಿದರು. ಚಿನ್ನದ ಗಣಿ ಕಂಪನಿ ಹಾಗೂ ಆಸ್ಪತ್ರೆ ವೈದ್ಯರು ಗಂಡನಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ನಿರ್ಲಕ್ಷ ವಹಿಸಿದೆ. ಇದರಿಂದ ಪತಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದಕ್ಕೆ ಚಿನ್ನದ ಗಣಿ ಆಸ್ಪತ್ರೆ ವೈದ್ಯರು ಹಾಗೂ ಅಧಿ ಕಾರಿಗಳೇ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಚಿನ್ನದ ಗಣಿ ಕಂಪನಿ ಅಧಿಕಾರಿ ಹನುಮಂತಪ್ಪ ಸ್ಥಳಕ್ಕೆ ಬಂದು ಗಣಿ ಆಸ್ಪತ್ರೆಯಲ್ಲಿಯೇ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ರೋಗಿಯ ಚಿಕಿತ್ಸೆಗೆ ಅವಕಾಶ ನೀಡುವಂತೆ ಕೋರಿದರು. ಆದರೆ ಆಕ್ರೋಶಗೊಂಡ ಮಹಿಳೆ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ನನ್ನ ಪತಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ಕಂಪನಿ ಅಧಿಕಾರಿ, ಆಸ್ಪತ್ರೆ ವೈದ್ಯರೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಆ್ಯಂಬುಲನ್ಸ್‌ನು° ಆಸ್ಪತ್ರೆ ಒಳಗೆ ಹೋಗಲು ಬಿಡಲಿಲ್ಲ. ಪತಿಯ ಆರೋಗ್ಯ ವಿಷಮ ಸ್ಥಿತಿಗೆ ತಲುಪಿದೆ. ಈಗಾಗಲೇ ಚಕಿತ್ಸೆಗಾಗಿ 4 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಹಿಳೆ ಅಳಲು ತೋಡಿಕೊಂಡಳು.
ಸ್ಥಳಕ್ಕೆ ಬಂದ ಪಿಎಸ್‌ಐ ಶೈಲಾ ಪ್ಯಾಟಿಶೆಟ್ಟರ್, ಕಂಪನಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ನಿಮ್ಮ ಸಂಕಷ್ಟ ಪರಿಹಾರಕ್ಕೆ ಸಾಥ್ ನೀಡುತ್ತೇವೆ. ಮೊದಲು ರೋಗಿಯನ್ನು ಆ್ಯಂಬುಲೆನ್ಸ್‌ನಿಂದ ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗಲು ಅವಕಾಶ ನೀಡಬೇಕೆಂದು ಮನವಿ ಮಾಡಿದ ನಂತರ ರೋಗಿಯ ಪತ್ನಿ ಆ್ಯಂಬುಲನ್ಸ್ ಆಸ್ಪತ್ರೆ ಒಳಕ್ಕೆ ಹೋಗಲು ಅವಕಾಶ ನೀಡಿದರು.