Advertisement

ಶ್ರೀಕೃಷ್ಣನ ಸತ್ಯದ ಮಾರ್ಗಗಳು ಸಮಾಜಕ್ಕೆ ಮಾದರಿ

03:04 PM Aug 15, 2017 | |

ವಿಜಯಪುರ: ಎಲ್ಲ ವರ್ಗದ ವಯೋಮಾನದವರ ಆರಾಧ್ಯದೈವ ಶ್ರೀಕೃಷ್ಣ ತುಂಟಾಟದಿಂದಲೇ ಪ್ರಸಿದ್ಧಿ ಪಡೆದಿದ್ಧಾನೆ. ಆತನ ಲೋಕೋದ್ದಾರ, ಸತ್ಯದ ಮಾರ್ಗದಿಂದ ನಮಗೆಲ್ಲ ಮಾದರಿ ಎನಿಸಿದ್ದಾನೆ ಎಂದು ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಆಝಾದ್‌ ಪಟೇಲ್‌ ಹೇಳಿದರು. ಸೋಮವಾರ ನಗರದಲ್ಲಿ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ
ನೀಡಿ ಮಾತನಾಡಿದ ಅವರು, ಕೃಷ್ಣ ಸಂದೇಶಗಳು ಇಂದಿಗೂ ಸಮಾಜಕ್ಕೆ ಅನುಕರಣೀಯ ಎಂದರು. ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ವೇದನಿ ಆಚಾರ್ಯ ಒಳ್ಳೆಯ ನಾಗರಿಕನಾಗಲು ಪ್ರಾಮಾಣಿಕತೆ, ಮಾನವೀಯತೆ, ಸತ್ಯ, ಸೇರಿದಂತೆ ಇತರರ ಏಳ್ಗೆಗೆ ಸಂತಸ ಅನುಭವಿಸುವುದನ್ನು ಕಲಿಯಬೇಕು. ಇಂಥ ಸದ್ಗುಣ ಶ್ರೀಕೃಷ್ಣ ಪರಮಾತ್ಮನಿಂದ ಮಾತ್ರ ಕಲಿಯಲು ಸಾಧ್ಯ. ಶ್ರೀಕೃಷ್ಣ
ಕಳ್ಳ-ಚೋರನೆಂದು ಹೆಸರಾದರೂ ಎಲ್ಲರ ಪಾಪಗಳನ್ನು ತೊಳೆಯುವ ಪರಮಾತ್ಮ. ಗೋಪಾಲನಾಗಿ ಗೋವಿನ ರಕ್ಷಣೆ ಮಾಡಿದ, ತಂದೆ ತಾಯಿಗಳ ಸೇವೆ ಮಾಡುವುದನ್ನು ಗೌರವಿಸುವುದನ್ನು ಕಲಿಸಿದ, ಈ ಎಲ್ಲ ಸದ್ಗುಣಗಳು ಅವನ ತಾಯಿಯಿಂದ ಕಲಿತ ಎಂದು ಹೇಳಿದರು. 5 ವರ್ಷದೊಳಗಿನ ಮಕ್ಕಳಿಗೆ ಪಾಲಕರು ಅವರ ಬೆಳವಣಿಗೆಗೆ ಸಂಪೂರ್ಣ ಸಮಯ ಕೊಡಬೇಕು. ಬಿಳಿ ಹಾಳೆಯಂತ ಮಕ್ಕಳ ನಿರ್ಮಲ ಮನಸ್ಸಿನಲ್ಲಿ ಉತ್ತಮ ಸಂಸ್ಕಾರದ ಸಂಗತಿಗಳನ್ನು ಬಿತ್ತಿ ಮನಸುಗಳನ್ನು ಅರಳಿಸಬೇಕು. ಮಾನವೀಯ ಮೌಲ್ಯದ ಗುಣಗಳನ್ನು ಕಲಿಸಬೇಕು. ಆಗಲೇ ಭವಿಷ್ಯದ ಸಮಾಜಕ್ಕೆ, ದೇಶಕ್ಕೆ ಸತøಜೆಗಳಾಗಲು ಅವಕಾಶ ಮಾಡಿಕೊಟ್ಟು, ತಾಯಿಯೇ ಮೊದಲ ಗುರು ಎಂಬ ಅಭಿಮಾನದ ಮಾತನ್ನು ಸತ್ಯವಾಗಿಸಬೇಕು ಎಂದು ಸಲಹೆ ನೀಡಿದರು. ದಾಸ ಸಾಹಿತ್ಯ, ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳ್ಳಿದ್ದಂತೆ. ಉತ್ತಮ ಸಮಾಜದ ನಿರ್ಮಾಣದಲ್ಲಿ ಈ ಎರಡೂ ಸಾಹಿತ್ಯ ಪ್ರಕಾರಗಳು ಕೃಷ್ಣನ ಲೀಲೆಗಳ ಕುರಿತು ಹೇಳುತ್ತವೆ. ಶ್ರೀಕೃಷ್ಣ ನೀಡಿದ ಭಗವದ್ಗಿತೆಯ ಸಂದೇಶ ಸಾರ್ವಕಾಲಿಕವಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ ಮಾತನಾಡಿ, ನಮ್ಮ ತಪ್ಪು ನಡವಳಿಕೆಯಿಂದ ವೈಯಕ್ತಿಕ ಜೀವನಕ್ಕೂ ದೇಶಕ್ಕೂ ಎಂದಿಗೂ ಒಳ್ಳೆಯದಾಗುವುದಿಲ್ಲ. ಆದ್ದರಂದ ತಪ್ಪು ಮಾರ್ಗ ಬಿಟ್ಟು ಸತ್ಯ ಮಾರ್ಗದಲ್ಲಿ ನಡೆಯಬೇಕು. ಪ್ರಾಮಾಣಿಕ ಜೀವನ ಎಂಬುವುದು ಕೂಡ
ಪ್ರಸಕ್ತ ಸಂದರ್ಭದಲ್ಲಿ ಸುಲಭವಾಗಿ ಅನುಷ್ಠಾನ ಅಸಾಧ್ಯ ಎಂಬುದು ವಾಸ್ತವಿಕ ಸತ್ಯ ಎಂದರು. ಮೇಯರ್‌ ಸಂಗೀತಾ ಪೋಳ, ಜಿಪಂ ಸಿಇಒ ಎಂ.ಸುಂದರೇಶಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್‌. ಪೂಜೇರಿ, ತಹಶೀಲ್ದಾರ್‌
ಎಂ.ಎನ್‌. ಬಳಿಗಾರ ಇದ್ದರು. ಭರತ ಕಲಾ ಸಂಸ್ಥೆಯ ತಂಡದವರಿಂದ ಶ್ರೀಕೃಷ್ಣ ಲೀಲೆ ನೃತ್ಯರೂಪಕ ಪ್ರದರ್ಶನ ನಡೆಯಿತು. ಹುಮಾಯುನ ಮಮದಾಪುರ ನಿರೂಪಿಸಿದರು. ಇದಕ್ಕೂ ಮುನ್ನ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆವರಣದಿಂದ ಹೊರಟ ಶ್ರೀಕೃಷ್ಣ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಧಿಕಾರಿ ಶಿವಕುಮಾರ ಚಾಲನೆ ನೀಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next