Advertisement
ಸಮಯ ಎಂಬುವುದು ಮಾನವನಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಸಸ್ಯಗಳಲ್ಲೂ ನಾವು ಕಾಣಬಹುದು. ಬೆಳಗ್ಗೆ ಬೇಗನೆ ಏಳುವುದು, ಸಂಜೆಯಾದಂತೆ ಗೂಡು ಸೇರುವುದು ಪ್ರಾಣಿಪಕ್ಷಿಗಳಲ್ಲಾದರೆ, ಸಮಯಕ್ಕೆ ಸರಿಯಾಗಿ ಬೆಳೆ ಕೊಡುವುದು ಸಸ್ಯಗಳಲ್ಲಿ ನಾವು ಕಾಣಬಹುದು. ನಿತ್ಯ ಜೀವನದಲ್ಲಿ ನಾವು ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ. ಈ ಜಗತ್ತೇ ಸಮಯಕ್ಕೆ ಶರಣಾಗಿದೆ. ಸೂರ್ಯೋ ದಯ, ಸೂರ್ಯಾಸ್ತ ಸಮಯಕ್ಕೆ ಸರಿಯಾಗಿಯೇ ಆಗುತ್ತದೆ. ನಮ್ಮಲ್ಲಿ ಕೆಲವರಿಗೆ ಸಮಯ ಸಾಕಾಗು ವುದಿಲ್ಲ. ಕೆಲವರಿಗೆ ಸಮಯವೇ ಹೋಗು ವುದಿಲ್ಲ. ಇನ್ನೂ ಕೆಲವರು ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ. ಕಳೆದ ಸಮಯ, ಬಿಟ್ಟ ಬಾಣ, ಆಡಿದ ಮಾತು ಎಂದಿಗೂ ಹಿಂದಿರುಗಿ ಬರುವುದಿಲ್ಲ. ಈ ದಿನ ಹೋಯಿತೆಂದರೆ ನಮ್ಮ ಆಯುಷ್ಯದ ಒಂದು ದಿನ ಕಡಿಮೆಯಾಯಿತು ಎಂದು ಲೆಕ್ಕ ಹಾಕಬೇಕು. ಆದ್ದರಿಂದ ನಮ್ಮ ಸಮಯವನ್ನು ವ್ಯರ್ಥವಾಗಿ ಕಳೆಯ ಬಾರದು. ಸದಾ ಕ್ರೀಯಾ ಶೀಲರಾ ಗಿರಬೇಕು. ವಿದ್ಯಾರ್ಥಿ ಯಾದವನಂತೂ ನಿರ್ದಿಷ್ಟವಾದ ಗುರಿ ಹೊಂದಿರಬೇಕು. ನಾಳೆ ಬರೆಯುವ, ನಾಳೆ ಓದುವ ಎಂದು ಸಮಯ ವ್ಯರ್ಥವಾಗಿ ಕಳೆಯಬಾರದು. ಇಂದಿನ ದಿನ ಸುದಿನ, ನಾಳೆಯ ದಿನ ಕಠಿನ ಎಂದು ತಿಳಿದಿರಬೇಕು. ವಿದ್ಯಾರ್ಥಿ ಜೀವನದಲ್ಲಿ ವಿಶ್ರಾಂತಿ ಬೇಕಾದರೆ ಅವನ ಕೆಲಸದಲ್ಲಿ ಬದಲಾವಣೆ ಮಾಡುವುದು. ಓದುವುದು ಸಾಕಾದರೆ ಬರೆಯುವುದು, ಇಲ್ಲವೇ ಕಲಿತದ್ದನ್ನು ನೆನಪಿಸಿಕೊಳ್ಳುವುದು ಹೀಗೆ ಸಮಯ ವ್ಯರ್ಥ ಮಾಡದೆ ಸದಾ ಕ್ರಿಯಾಶೀಲರಾಗಿರಬೇಕು. ಬಿಡುವಿನ ವೇಳೆಯಲ್ಲಿ ವೇಳೆಯಲ್ಲಿ ಸಮಯವನ್ನು ವ್ಯರ್ಥ ಮಾಡದೆ ಕೆಲವು ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಪುಸ್ತಕ ಓದುವುದು, ಚಿತ್ರಕಲೆ, ಸಂಗೀತ, ಆಟೋಟಗಳ ಹವ್ಯಾಸ ಬೆಳೇಸಿಕೊಳ್ಳಬಹುದು. ಯದ್ಧಶಾಲೆ ಶಸ್ತ್ರ ಅಭ್ಯಾಸವಾಗಬಾರದು. ಅಂದರೆ ಯುದ್ಧ ಆರಂಭವಾದ ಬಳಿಕ ಶಸ್ತ್ರ ಅಭ್ಯಾಸ ಮಾಡುವುದಲ್ಲ. ಮೊದಲೇ ಕಲಿತಿರಬೇಕು. ಹಾಗೆಯೇ ಪರೀಕ್ಷೆ ಆರಂಭವಾದ ಬಳಿಕ ಓದುವುದಲ್ಲ. ದಿನಾ ಸಮಯವನ್ನು ಹಾಳು ಮಾಡದೆ ಓದಬೇಕು, ಕಷ್ಟಪಡ ಬೇಕು. ಸಮಯ ಓಡುತ್ತದೆ. ನಾವು ಸಮಯಕ್ಕೆ ಸರಿಯಾಗಿ ಅದೇ ಗತಿಯಲ್ಲಿ ಓಡುವುದನ್ನು ಅಭ್ಯಾಸ ಮಾಡಿ ಕೊಳ್ಳಬೇಕು.
Related Articles
Advertisement