Advertisement
ಮೈಸೂರಿನಿಂದ ಪ್ರಯಾಣ ಕೈಗೊಳ್ಳುವ ವಾಹನ ಸವಾರರಿಗೆ, ಪ್ರಯಾಣಿಕರಿಗೆ, ದಾರಿ ಹೋಕರಿಗೆ ನಂಜ ನಗೂಡು, ಬೇಗೂರು, ಗುಂಡ್ಲುಪೇಟೆ ಯಿಂದ ಬಂಡೀ ಪುರ ರಾಷ್ಟ್ರೀಯ ಉದ್ಯಾನದವರೆಗೂ ಅರಳಿ ನಿಂತ ಗುಲ್ಮೊಹರ್ ಹೂವಿನ ಅಂದ ಕಣ್ ಸೆಳೆಯುತ್ತದೆ.
Related Articles
Advertisement
ಕೈಬೀಸಿ ಕರೆಯುವ ಪ್ರವಾಸಿ ತಾಣಗಳು: ಪ್ರಖ್ಯಾತ ಪ್ರವಾಸಿ ತಾಣಗಳಾದ ಊಟಿ (ಉದಕಮಂಡಲ), ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಪ್ರಖ್ಯಾತ ಬಂಡೀ ಪುರ ರಾಷ್ಟ್ರೀಯ ಉದ್ಯಾನಕ್ಕೆ ತೆರಳುವ ಪ್ರವಾಸಿಗರನ್ನು ಇದು ಮತ್ತೂಮ್ಮೆ ಬನ್ನಿ ಎಂಬಂತೆ ಪ್ರವಾಸಿ ಸ್ಥಳಗಳಿಗೆ ಕೈಬೀಸಿ ಕರೆಯುವಂತಿದೆ. ರಾಷ್ಟ್ರೀಯ ಹೆದ್ದಾರಿ ಯಲ್ಲಿರುವ ಗುಲ್ ಮೊಹರ್ ಕೆಂಬಣ್ಣದಿಂದ ಕೂಡಿ ದ್ದರೂ ಯಾವುದೇ ಅಪಾಯವಿಲ್ಲ ಎಂದು ಹೆಡಿಯಾಲ ರಸ್ತೆಯ ನಾಗಲಿಂಗೇಶ್ವರ ಗವಿ ಮತ್ತು ಕನಕಗಿರಿ ರಸ್ತೆಯ ಜೈನರ ದೇವಾಲಯಗಳು ಪ್ರವಾಸಿಗರನ್ನು ಅಪ್ಯಾಯಮಾನವಾಗಿ ಬರಮಾಡಿಕೊಳ್ಳುತ್ತವೆ.
ಗುಲ್ಮೊಹರ್ ಅಂಗಸೌಷ್ಟವ: ಸುಮಾರು 15 ರಿಂದ 18 ಮೀ ಎತ್ತರ ಬೆಳೆಯುವ ನಿಲುವುಳ್ಳ ಮರವು ಫಲವತ್ತಾದ ನೆಲ ಮತ್ತು ನೀರಿದ್ದರೆ ಜಿರಾಫೆಗಿಂತಲೂ ಎತ್ತರ ಬೆಳೆಯುತ್ತದೆ. ಆಕಾರದಲ್ಲಿ ಛತ್ರಿಯಂತಿರುವ ಈ ಮರದ ತೊಗಟೆ ಮಾತ್ರ ಒರಟಾಗಿ ಅಲ್ಲಲ್ಲಿ ಗಂಟುಗಳನ್ನು ಹೊಂದಿದೆ. ಬಣ್ಣ ಮಾಸಲಾಗಿರುವ ಕಂದು ಬಣ್ಣ. ಹೂಗಳು ರೇಸಿಮ್ ಮಾದರಿಯ ಹೂಗೊಂಚಲಂತಿದ್ದರೆ, 15 ರಿಂದ 20 ಜೋಡಿ ಪರ್ಣಿಕೆಗಳನ್ನು ಹೊಂದಿವೆ.
ಐದು ಪುಷ್ಪಪತ್ರ: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೂ ಬಿಡುವ ಮುನ್ನ ಸಂಯುಕ್ತ ಮಾದರಿಯಲ್ಲಿರುವ ಎಲೆಗಳು ಉದುರುತ್ತವೆ. ಸಾಕಷ್ಟು ದೊಡ್ಡದಾಗಿ ಕಿತ್ತಳೆಮಿಶ್ರಿತ ಕೆಂಪುಬಣ್ಣ, ಕಗ್ಗೆಂಪು ಬಣ್ಣ ಹೊಂದಿರುವ ಸುಂದರ ಹೂಗಳು. ಐದು ಪುಷ್ಪಪತ್ರಗಳನ್ನು ಹೊಂದಿದ್ದು, ಹಸಿರನ್ನು ಹೊರಭಾಗದಲ್ಲಿ, ಕೆಂಪನ್ನು ಒಳಭಾಗದಲ್ಲಿ ಹೊಂದಿವೆ. ಹೊಂದಿರುವ ಐದು ದಳಗಳಲ್ಲಿ ನಾಲ್ಕು ಒಂದೇ ರೀತಿಯಿದ್ದರೆ, ಉಳಿದೊ ಂದು ಕೊಂಚ ದೊಡ್ಡದಾಗಿ ಬಿಳಿ ಅಥವಾ ಹಳದಿ ಬಣ್ಣ ಹೊಂದಿದ್ದು, ಮೈ ಮೇಲೆ ಕೆಂಪು ಮಚ್ಚೆಗಳನ್ನು ಹೊಂದಿ ರುತ್ತದೆ. ಎಲ್ಲ ದಳಗಳ ಅಂಚು ಮಡಿಸಿ ದಂತಿದ್ದು, ಕೇಸರಗಳು ಬಿಡಿಯಾಗಿವೆ. 6096 ಮೀ. ಉದ್ದವಾದ ಕತ್ತಿಕಾಯಿಗಳು ಮರದ ಮೇಲೆ ನೇತಾಡುತ್ತಿರುತ್ತವೆ.
ಕುಲಕುಲವೆಂದು ಕೇಳದಿರಿ ಎಂದು: ಫಬಿಯೋಸೆ ಕುಟುಂಬಕ್ಕೆ ಸೇರಿದ ಗುಲ್ಮೊಹರ್ ಡೆಲೋನಿಕ್ಸ್ ರೆಜಿಯಾ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿದೆ. ರಾಯಲ್ ಪೊಯಿನ್ಸಿಯೆನಾ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಗುಲ್ಮೊಹರ್ ಎಂದರೆ ಸ್ಥಳೀಯರು ಕೆಂಪುತುರಾಯಿ, ದೊಡ್ಡರತ್ನಗಂಧಿ, ಸೀಮೆಸಂಕೇಶ್ವರ ಎಂದೂ ಕರೆಯುತ್ತಾರೆ. ಪ್ಲಾಂಟೀ ಸಾಮ್ರಾಜ್ಯದ ಹೂ ಬಿಡುವ ಸಸ್ಯಗಳ ವಿಭಾಗಕ್ಕೆ ಸೇರಿದ್ದು, ಮ್ಯಾಗ್ನೋಲಿಪ್ಸಿಡಾ ವರ್ಗದ್ದಾಗಿರುವ ಗುಲ್ಮೊಹರ್ ಫಾಬಲ್ಸ್ ಗಣಕ್ಕೆ ಸೇರಿದೆ. ಕ್ಯಾಸಾಲ್ಪಿನಿಯಾ ಬುಡಕಟ್ಟಿನ ಫಬಾಸಿಯೇ ಕುಟುಂಬಕ್ಕೆ ಸೇರಿದ್ದು ವೈಜ್ಞಾನಿಕವಾಗಿ ಡೆಲೋನಿಕ್ಸ್ ದ್ವೀದ ಹೆಸರಿನಿಂದ ಡೆಲೋನಿಕ್ಸ್ ರೆಜಿಯ ಎಂದು ಕರೆಸಿಕೊಳ್ಳುತ್ತದೆ.
ಮನು ಶ್ಯಾನುಭೋಗ್. ಎಂ