Advertisement

ಪಕ್ಷೀಯರೇ ಆರಂಭಿಸಿದ್ದಾರೆ ಶೋಭಾ ಗೋ ಬ್ಯಾಕ್‌ ಟ್ವೀಟ್‌ ಚಳವಳಿ

12:30 AM Feb 22, 2019 | Team Udayavani |

ಕುಂದಾಪುರ: ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅಭ್ಯರ್ಥಿಯಾಗಿ ಪುನರಾಯ್ಕೆಯಾಗುವ ಸಂಭವವಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಟ್ವಿಟರ್‌ನಲ್ಲಿ ಗೋ ಬ್ಯಾಕ್‌ ಶೋಭಾ ಟ್ವೀಟ್‌ ಅಭಿಯಾನ ನಡೆಸಿದ್ದಾರೆ.

Advertisement

ಶೋಭಾ ಗೋ ಬ್ಯಾಕ್‌ ಹ್ಯಾಶ್‌ಟ್ಯಾಗ್‌ ಮೂಲಕ ಟ್ವೀಟ್‌ ಆರಂಭಿಸಿ ಎರಡು ಗಂಟೆ ಅವಧಿಯಲ್ಲಿ ಒಂದೂವರೆ ಸಾವಿರಕ್ಕಿಂತ ಹೆಚ್ಚು ಟ್ವೀಟ್‌ಗಳಾಗಿವೆ. ಕಳೆದ ಬಾರಿ ಮೋದಿ ಅಲೆಯಲ್ಲಿ ಮತ ಚಲಾಯಿಸಿದೆವು. ಈ ಬಾರಿ ಸ್ಥಳೀಯ ಬಿಜೆಪಿ ಅಭ್ಯರ್ಥಿಗಳೇ ಸಂಸದರಾಗಬೇಕು. ಶೊಭಾ ಕರಂದ್ಲಾಜೆ ಅವರು ಕ್ಷೇತ್ರದ ಕಡೆಗೆ ಬಂದಿಲ್ಲ, ಮತದಾರರ ಸಂಕಷ್ಟ ಕೇಳಿಲ್ಲ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಸಿಲ್ಲ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಟ್ವಿಟರ್‌ ಟ್ರೆಂಡ್‌ ಅಭಿಯಾನ ಆರಂಭಿಸಿದ್ದರು. 

ಸ್ಥಳೀಯ ಅಭ್ಯರ್ಥಿ ಯಾರೇ ಆದರೂ ತೊಂದರೆಯಿಲ್ಲ, ಅವರಿಗೆ ಬೆಂಬಲವಿದೆ. ಶೋಭಾ ಆದರೆ ಖಂಡಿತ ಬೆಂಬಲಿಸುವುದಿಲ್ಲ. ಸ್ಥಳೀಯರಾದರೆ ಮಾತ್ರ ನಮ್ಮ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ. ಐದು ವರ್ಷ ನಾವು ಸಂಸದರು ಇದ್ದೂ ಇಲ್ಲದಂತೆ ಅನುಭವಿಸಿದ್ದೇವೆ ಎಂದು ಆರೋಪಿಸಿದ್ದಾರೆ. 

ಗುರುವಾರ ಅಭ್ಯರ್ಥಿ ಆಯ್ಕೆ ಸಂಬಂಧಿಸಿದ ಸಭೆಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಬೆಂಗಳೂರಿಗೆ ಭೇಟಿ ಎಂದು ಟ್ವಿಟರ್‌ ಮೂಲಕ ಗಮನ ಸೆಳೆಯಲಾಯಿತು. ಸ್ವತಃ ಬಿಜೆಪಿ ಕಾರ್ಯಕರ್ತರೇ ಬಿಜೆಪಿ ಸಂಸದರನ್ನು ವಿರೋಧಿಸುತ್ತಿರುವುದರಿಂದ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳಲಿದೆ, ಕಾರ್ಯಕರ್ತರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಮೂಡಿದೆ.

ಸಂಸದೆ ಶೋಭಾ ವಿರುದ್ಧ ನಿಂದನೆ: ಖಂಡನೆ
ಉಡುಪಿ
: ಸಾಮಾಜಿಕ ಜಾಲ ತಾಣದ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತಿರುವುದನ್ನು ರಾಜ್ಯ ಬಿಜೆಪಿ ಖಂಡಿ ಸುತ್ತದೆ. ಅಲ್ಲದೆ ಇಂತಹ ದುಷ್ಕೃತ್ಯಗಳಲ್ಲಿ ಪಾಲ್ಗೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.

Advertisement

ಸಾಮಾಜಿಕ ಜಾಲ ತಾಣಗಳಲ್ಲಿ ಸಂಸದೆ ಯವರನ್ನು ಹೀನಾಯ ಮತ್ತು ಅಶ್ಲೀಲವಾಗಿ ಬಿಂಬಿಸುತ್ತಿರುವ ವ್ಯಕ್ತಿಯ ವಿರುದ್ಧ ಉಡು ಪಿಯ ಸೆನ್‌ ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ದೂರು ದಾಖಲಿಸಲಾಗಿದೆ. ಆರೋಪಿಯನ್ನು ತತ್‌ಕ್ಷಣ ಬಂಧಿಸುವಂತೆ ಎಸ್‌ಪಿಯವರನ್ನು ಆಗ್ರಹಿಸಲಾಗಿದೆ. ಸಂಸದೆಯವರ ವಿರುದ್ಧ ಮಾಡಲಾಗುತ್ತಿರುವ ನಿಂದನೆಗಳ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು, ಸಂಘಟನ ಕಾರ್ಯದರ್ಶಿಗಳ ಗಮನಕ್ಕೂ ತರಲಾಗಿದೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next