Advertisement
ಆ ಗೊಂದಲಗಳಿಗೆ ಪರಿಹಾರ ಇಲ್ಲಿದ್ದು ಯಾವ ಎಲ್ಲಾ ನೋಂದವಣಿ ಪ್ರಕ್ರಿಯೆಗಳಿಗೆ ಪಾನ್‌ಕಾರ್ಡ್ ನಂಬರ್‌ನ್ನು ಲಿಂಕ್ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
Related Articles
Advertisement
– ಡಿಮ್ಯಾಟ್ ಖಾತೆ ತೆರೆಯಲು ಪಾನ್‌ಕಾರ್ಡ್ ಅತ್ಯವಶ್ಯಕ.
– ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳ ಬಿಲ್ 50 ಸಾವಿರ ಗಡಿ ದಾಟಿದ್ದರೆ, ಬಿಲ್ ಮೊತ್ತವನ್ನು ಪಾವತಿಸಲು ಪಾನ್‌ಕಾರ್ಡ್ ಬೇಕಾಗುತ್ತದೆ.
– 50 ಸಾವಿರ ಮೀರಿ ವಿದೇಶಿ ಪ್ರಯಾಣ ಅಥವಾ ವಿದೇಶಿ ಕರೆನ್ಸಿಯನ್ನು ಖರೀದಿಸಲು ಪಾನ್‌ಕಾರ್ಡ್‌ನ ಅವಶ್ಯವಿದೆ.
– 50 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಮ್ಯೂಚುಯಲ್ ಫಂಡ್, ಡಿಬೆಂಚರ್‌ಗಳು ಹಾಗೂ ಬಾಂಡ್‌ಗಳ ಖರೀದಿ ಪ್ರಕ್ರಿಯೆಯಲ್ಲಿ ಪಾನ್‌ಕಾರ್ಡ್ ನಂಬರ್ ಅಗತ್ಯವಾಗುತ್ತದೆ.
– ಏಕಕಾಲಕ್ಕೆ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವುದಾದರೆ ಪಾನ್‌ಕಾರ್ಡ್‌ನ ಅವಶ್ಯವಿದೆ.
– ನಿಮ್ಮ ಸ್ಥಿರ ಠೇವಣಿ(ಫಿಕ್ಸ್‌ಡ್ ಡೆಪಾಸಿಟಿ) ಒಂದೇ ವರ್ಷಕ್ಕೆ 50 ಸಾವಿರದ ಗಡಿ ದಾಟಿದ್ದರೆ ಅಥವಾ ಹಣಕಾಸು ವರ್ಷಗಳಲ್ಲಿ 5 ಲಕ್ಷದ ಮಿತಿ ಮೀರಿದ್ದರೆ ಪಾನ್‌ಕಾರ್ಡ್ ನಂಬರ್ ಲಿಂಕ್ ಮಾಡುವುದು ಅಗತ್ಯ.
– 50 ಸಾವಿರಕ್ಕಿಂತ ಹೆಚ್ಚು ಜೀವ ವಿಮೆ ಯೋಜನೆಯ ಕಾರ್ಯನಿರ್ವಹಣೆಗೆ ಪಾನ್‌ಕಾರ್ಡ್ ಬೇಕಾಗುತ್ತದೆ.
– ಸ್ಟಾಕ್ ಎಕ್ಸೇಚೆಂಜ್ ಪಟ್ಟಿಯಲ್ಲಿ ಮಾನ್ಯತೆ ಪಡೆದ ಕಂಪೆನಿಯ ಮಾಲೀಕರಿಂದ ಷೇರುಗಳನ್ನು ಖರೀದಿಸುವಾಗ ಅದರ ಮೊತ್ತ 1 ಲಕ್ಷ ಮೀರಿದ್ದರೆ ಪಾನ್‌ಕಾರ್ಡ್ ನಂಬರ್ ಅನ್ನು ನಮೂದಿಸುವುದು ಅಗತ್ಯ.
– ಸ್ಥಿರ ಆಸ್ತಿಯನ್ನು 10 ಲಕ್ಷ ಮೀರಿದ ಮೊತ್ತಕ್ಕೆ ಮಾರಾಟ ಮಾಡುವಾಗ ಅಥವಾ ಖರೀದಿಸುವಾಗ ಅಥವಾ ಸ್ಟ್ಯಾಂಪ್ ಮೌಲ್ಯಮಾಪನ ಪ್ರಾಧಿಕಾರದ ಸೆಕ್ಷನ್ 50ಸಿ ಯ ಅನ್ವಯ 10 ಲಕ್ಷ ಮೀರಿದ ಮೌಲ್ಯಯುತವಾದ ಆಸ್ತಿಯ ಖರೀದಿಗೆ ಪಾನ್‌ಕಾರ್ಡ್ ಬೇಕಾಗುತ್ತದೆ.