– ಬೇಡ ಕಣ್ರೋ ನಾವ್ ತಪ್ ಮಾಡ್ತಾ ಇದೀವಿ. ನಮಗ್ಯಾಕೆ ಕಂಡೋರ ದುಡ್ಡು
– ಸಿಕ್ಕಿರೋ ದುಡ್ನಲ್ಲಿ ಎರಡು ಕಾರ್ ಗ್ಯಾರೇಜ್ ಮಾಡೋಣ
– ಕಾರ್ ಗ್ಯಾರೇಜಾ.. ಬೇಡ ಎರಡು ಬಾರ್ ಓಪನ್ ಮಾಡೋಣ…
Advertisement
ಇದು “ಹಾಫ್ ಬಾಯಿಲ್ಡ್ ಹುಡುಗರ ಮಾತುಕತೆ! ಹೌದು, ನಾಲ್ವರು ಗೆಳೆಯರಿಗೆ ಆಕಸ್ಮಿಕವಾಗಿ ಕಾರೊಂದರಲ್ಲಿ ಲಕ್ಷಾಂತರ ರುಪಾಯಿ ತುಂಬಿದ ಬ್ಯಾಗ್‌ವೊಂದು ಸಿಕ್ಕಿಬಿಡುತ್ತೆ. ತಮ್ಮ ಕಾರ್‌ನಲ್ಲಿ ಆ ಹಣದ ಬ್ಯಾಗ್ ಹಿಡಿದು ಹೇಗೆಲ್ಲಾ ಕನಸು ಕಾಣಾ¤ರೆ, ಹೆಂಗೆಲ್ಲಾ ಅಲೆದಾಡ್ತಾರೆ ಅನ್ನೋದೇ ಒನ್‌ಲೈನ್ ಸ್ಟೋರಿ. ಹಣದ ಹಿಂದೆ ಹೋದವರ ಗತಿ ಏನಾಗುತ್ತೆ ಎಂಬುದನ್ನು ಇಲ್ಲಿ ಅಷ್ಟೇ ಸೊಗಸಾಗಿ ತೋರಿಸುವುದರ ಜೊತೆಗೆ ಅಲ್ಲಲ್ಲಿ ಮಾನವೀಯ ಮೌಲ್ಯಕ್ಕೂ ಜಾಗವಿದೆ. ಮಂದಗತಿಯಲ್ಲೇ ಸಾಗುವ ಮೊದಲರ್ಧ ಕಥೆಯಲ್ಲಿ ಹೇಳಿಕೊಳ್ಳುವಂತಹ ವಿಷಯವೇನಿಲ್ಲ.
Related Articles
Advertisement
ಆ ಕನಸಲ್ಲೇ ಖುಷಿಪಡುವ ರಂಗನಿಗೆ ಮಾಲೀಕ ಶಿರಸಿಯಿಂದ ಒಂದು ಕಾರನ್ನು ಇಲ್ಲಿಗೆ ತರಬೇಕು ಅಂತ ಕಳುಹಿಸುತ್ತಾನೆ. ರಂಗನ ಜೊತೆ ಮೂವರು ಗೆಳೆಯರು ಸಾಥ್ ಕೊಡುತ್ತಾರೆ. ಆ ಕಾರು ಒಬ್ಬ ಕಾಮಿಡಿ ರೌಡಿಯದ್ದು. ಆ ಕಾರಲ್ಲಿ ಲಕ್ಷಾಂತರ ರುಪಾಯಿ ಇರುವ ವಿಷಯ ಗೊತ್ತಾಗುತ್ತಿದ್ದಂತೆಯೇ, ನಾಲ್ವರು ಗೆಳೆಯರಲ್ಲಿ ಆಸೆ ಹುಟ್ಟುತ್ತೆ. ಅವರವರಲ್ಲೇ ಗೊಂದಲ ಶುರುವಾಗುತ್ತೆ. ಹಣ ಬೇಡ, ಬೇಕು ಹೀಗೆ ಚರ್ಚೆ ನಡೆದು, ಕೊನೆಗೆ ನಾವೇ ಅನುಭವಿಸಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಆ ಹಣ ಹಿಡಿದು ಕಾರೊಂದಿಗೆ ಸಾಗುವ ನಾಲ್ವರು ಗೆಳೆಯರು ಎಂಜಾಯ್ ಮಾಡ್ತಾರೆ.
ಅಷ್ಟೊತ್ತಿಗೆ ಒಂದು ಟ್ವಿಸ್ಟು ಬರುತ್ತೆ. ಕೊನೆಗೆ ಆ ಹಣ ಅವರ ಕೈ ಸೇರುತ್ತಾ ಇಲ್ಲವಾ, ಅದರ ಹಿಂದೆ ಏನೆಲ್ಲಾ ಇದೆ ಅನ್ನೋದು ಸಸ್ಪೆನ್ಸ್. ಚಿತ್ರದಲ್ಲಿ ವಿಜೇತ್ ಕೃಷ್ಣ ಸಂಗೀತ ಹೈಲೈಟ್. “ಧೂಳಾರೆ ಪಾರ್ಟಿ ಶಿಷ್ಯ..’ ಹಾಡುಗಳು ಚೆನ್ನಾಗಿದೆ. ಹಿನ್ನೆಲೆ ಸಂಗೀತ ಹೊಸತಾಗಿದೆ. ಕುಶೇಂದರ್ ರೆಡ್ಡಿ ಅವರ ಕ್ಯಾಮೆರಾ ಕೆಲಸ ಅಲ್ಲಲ್ಲಿ ಮಬ್ಟಾದಂತೆ ಭಾಸವಾಗುತ್ತದೆ. ಇನ್ನು, ಹೊಸ ಪ್ರತಿಭೆಗಳಾದ ಸುನೀಲ್‌ಕುಮಾರ್, ದೀಪಕ್, ಮಂಜುಬದ್ರೀ, ಹಂಪೇಶ್, ಮಾತಂಗಿ ಪ್ರಸನ್ನ, ವಿನ್ಯಾಶೆಟ್ಟಿ ತಮ್ಮ ಪಾತ್ರವನ್ನು ನೀಟ್ ಆಗಿ ನಿರ್ವಹಿಸಿದ್ದಾರೆ. ದೇವದಾಸ್ ಕಾಪಿಕಾಡು ಸ್ವಲ್ಪ ಸಮಯ ಕಾಣಿಸಿಕೊಂಡರೂ ಕಚಗುಳಿ ಇಡುತ್ತಾರೆ. ಎಂದಿನಂತೆ ತಬಲಾನಾಣಿ ಹಾಸ್ಯ ಇಲ್ಲಿ ಮೇಳೈಸಿದೆ.
ಚಿತ್ರ: ನಾವೆಲ್ರೂ ಹಾಫ್ ಬಾಯಿಲ್ಡ್ನಿರ್ಮಾಣ: ಕೆ.ಅಮೀರ್ ಅಹಮದ್
ನಿರ್ದೇಶನ: ಬಿ.ಶಿವರಾಜ್ ವೆಂಕಟಾಚ್ಚ
ತಾರಾಗಣ: ಸುನೀಲ್‌ಕುಮಾರ್, ದೀಪಕ್, ಮಂಜುಬದ್ರಿ, ಹಂಪೇಶ್, ಮಾತಂಗಿ ಪ್ರಸನ್ನ, ದೇವದಾಸ್ ಕಾಪಿಕಾಡು, ತಬಲಾನಾಣಿ, ವಿನ್ಯಾಶೆಟ್ಟಿ ಇತರರು. * ವಿಭ