ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಪರಿಸ್ಥಿತಿ ಕೈಮೀರಿ ಪ್ರಾಣವಾಯುವಿನಹಾಹಾಕಾರ ಎದುರಾಗಲಿದೆಯೇ ಎಂಬ ಪ್ರಶ್ನೆಕಾಡಲಾರಂಭಿಸಿದ್ದು, ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚಳವಾದರೆ ಮುಂದೇನು ಮಾಡಬೇಕೆಂಬ ದೊಡ್ಡಸವಾಲು ಜಿಲ್ಲಾಡಳಿತದ ಮುಂದಿದೆ.ಜಿಲ್ಲೆಯಲ್ಲಿ ಒಂದು ಕಡೆ ಪ್ರಾಣವಾಯುವಿನ ಅಭಾವಎದುರಾಗಿದೆ. ಮತ್ತೂಂದು ಕಡೆ ಕೊರೊನಾ ಸೋಂಕು ಅಬ್ಬರ ಹೆಚ್ಚಳವಾಗುತ್ತಿದೆ.
ಬುಧವಾರ ಒಂದೇ ದಿನಸೋಂಕಿತರ ಸಂಖ್ಯೆ ಸಾವಿರದ ಗಡಿ ಮೀರಿದೆ. ಒಂದುಕಾಲದಲ್ಲಿ ಹಸಿರು ವಲಯದಲ್ಲಿದ್ದ ಇಡೀ ಜಿಲ್ಲೇ ಇಂದುಕೊರೊನಾ ಅಬ್ಬರಕ್ಕೆ ಬೆಚ್ಚಿ ಬಿದ್ದಿದೆ.ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲುವೆಂಟಿಲೇಟರ್ ಮತ್ತು ಐಸಿಯು ಸೇರಿದಂತೆ 224 ಬೆಡ್ ಸಿದ್ಧವಿಟ್ಟುಕೊಳ್ಳಲಾಗಿತ್ತು.
ಗುರುವಾರಕ್ಕೆ ಈ ಬೆಡ್‌ಗಳೆಲ್ಲ ಭರ್ತಿಯಾಗಿವೆ. ಇನ್ನಷ್ಟು ಸೋಂಕಿತರು ಬಂದರೆ ಏನುಮಾಡಬೇಕೆಂದು ಜಿಲ್ಲಾಡಳಿತಕ್ಕೆ ದಿಕ್ಕು ಕಾಣದಂತಾಗಿದೆ.ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ 6 ಸಾವಿರಲೀಟರ್ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಎರಡು ದಿನಕ್ಕೆಖಾಲಿಯಾಗುತ್ತಿದೆ. ಗುರುವಾರ ರಾತ್ರಿಯ ವೇಳೆಗೆಖಾಲಿಯಾಗುವ ಹಂತ ತಲುಪಿದ್ದು, ಬಳ್ಳಾರಿಯಿಂದಆಕ್ಸಿಜನನ್ನು ಟ್ಯಾಂಕರ್ ಮೂಲಕ ತರಿಸಿಕೊಳ್ಳಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಸಿಲಿಂಡರ್ ರೀ μàಲಿಂಗ್‌ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆಆಮ್ಲಜನಕದ ಹಾಹಾಕಾರವನ್ನು ಜಿಲ್ಲೆಯೂಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದುಜಿಲ್ಲಾಸ್ಪತ್ರೆಯ ಕಥೆಯಾದರೆ, ಖಾಸಗಿ ಆಸ್ಪತ್ರೆಗಳಲ್ಲೂಪ್ರಾಣವಾಯುವಿನ ಕೊರತೆ ಎದುರಾಗಿದೆ.
ಜಿಲ್ಲೆಯಲ್ಲಿಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯುಷ್ಮಾನ್‌ಭಾರತ್ ಯೋಜನೆಯಡಿ ನೋಂದಣಿಯಾಗಿರುವನಗರದ ಆಶ್ರಯ, ಹೋಲಿಕ್ರಾಸ್ ಮತ್ತು ಕೆಆರ್‌ಎಸ್ ಮತ್ತು ಕಡೂರು ತಾಲೂಕಿನ ಚೇತನ ಖಾಸಗಿಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗೆ ಗುರುತಿಸಲಾಗಿದೆ.ಶೇ.50 ಬೆಡ್ ಮೀಸಲಿಡಬೇಕೆಂದು ಸರ್ಕಾರ ಆದೇಶಮೀಸಲಿಟ್ಟಿದೆ.ಸರ್ಕಾರ ಗುರುತಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೂ ಆಮ್ಲಜನಕದ ಕೊರತೆ ಎದುರಾಗಿದೆ.
ನಗರದ ಆಶ್ರಯಆಸ್ಪತ್ರೆಯಲ್ಲಿ 46 ಜನ ಕೋವಿಡ್ ಸೋಂಕಿತರು ಚಿಕಿತ್ಸೆಪಡೆಯುತ್ತಿದ್ದು, 7 ಜನ ಕೋವಿಡ್ ಸೋಂಕಿತರುವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರಸಂಜೆಯ ವೇಳೆಗೆ ಆಕ್ಸಿಜನ್ ಖಾಲಿಯಾಗುವಸಂಭವವಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರು ತಿಳಿಸಿದ್ದುಜಿಲ್ಲಾಡಳಿತ ಆಸ್ಪತ್ರೆಗೆ ಆಕ್ಸಿಜನ್ ನೀಡುವಂತೆ ಆಸ್ಪತ್ರೆಯಮುಖ್ಯಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.ಬುಧವಾರ ನಗರದ ಕೆಆರ್‌ಎಸ್ ಆಸ್ಪತ್ರೆಯಲ್ಲಿಆಕ್ಸಿಜನ್ ಕೊರತೆ ಎದುರಾಗಿದ್ದು ಆಕ್ಸಿಜನ್‌ನಲ್ಲಿ ಚಿಕಿತ್ಸೆಪಡೆಯುತ್ತಿದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿ ಆಕ್ಸಿಜನ್ ನೀಡಿದರೂ ಆ ವ್ಯಕ್ತಿ ಉಸಿರು ಚೆಲ್ಲಿದ್ದಾನೆ.
ಇದೇ ರೀತಿ ಸೋಂಕಿತರು ಹೆಚ್ಚಳವಾದರೆಪ್ರಾಣವಾಯುವಿನ ಪೂರೈಕೆಯೇ ಜಿಲ್ಲಾಡಳಿತಕ್ಕೆ ದೊಡ್ಡಸಮಸ್ಯೆಯಾಗಿ ತಲೆದೋರಲಿದ್ದು ಕೊರೊನಾ ಸೋಂಕಿನಇಂದಿನ ಪರಿಸ್ಥಿತಿ ಜಿಲ್ಲೆಯಲ್ಲಿ ಕೈಮೀರಿ ಹೋಗುತ್ತಿದೆಯಾಎಂಬ ಸಂಶಯ ಕಾಡುತ್ತಿದೆ.