Advertisement
ನಿಮ್ಮ ಮನೆತನಕ್ಕೂ ಮುದ್ರಣ ಕ್ಷೇತ್ರಕ್ಕೂ ನಂಟು ಹೇಗೆ?
Related Articles
Advertisement
ನಿಮ್ಮ ಲ್ಯಾಮಿನೇಶನ್ ಉದ್ಯಮ ವ್ಯಾಪಕವಾಗಿದ್ದು ಹೇಗೆ?
ಸಾಲ ಮಾಡಿ ಲ್ಯಾಮಿನೇಶನ್ ಯಂತ್ರವನ್ನೇನೋ ತಂದೆ. ಉದ್ಯಮ ಆರಂಭಿಸಿದೆ. ಆದರೆ, ಗ್ರಾಹಕರು ಬೇಕಲ್ಲ. ಅದಕ್ಕಾಗಿ ಪ್ರತಿದಿನ ಅಗರಬತ್ತಿ ಸೇರಿ ವಿವಿಧ ಪ್ಯಾಕೇಜಿಂಗ್ ಇಂಡಸ್ಟ್ರಿ, ಮುದ್ರಣಾಲಯ, ಮುದ್ರಕರು, ಪ್ರಕಾಶಕರ ಬಳಿ ಹೋಗುತ್ತಿದ್ದೆ. ನಮ್ಮ ಬಳಿ ಲ್ಯಾಮಿನೇಶನ್ ಯಂತ್ರವಿದೆ. ನಿಮ್ಮ ಪುಸ್ತಕ, ಲೇಬಲ್‌ಗಳಿಗೆ ಲ್ಯಾಮಿನೇಶನ್ ಮಾಡಿ ಕೊಡುತ್ತೇವೆ ಎಂದು ಗ್ರಾಹಕರಿಗೆ ಮನವರಿಕೆ ಮಾಡುತ್ತಿದ್ದೆ. ಪ್ರತಿದಿನ 4 ಗಂಟೆಯಂತೆ ಸುಮಾರು 1 ವರ್ಷ ಗ್ರಾಹಕರಿಗಾಗಿ ಓಡಾಡಿದ್ದೇನೆ.
ಪರ್ಫೆಕ್ಟ್ ಬೈಂಡಿಂಗ್ ಅಂದರೆ ಏನು? ಅದರ ವಿಶೇಷತೆ ಏನು?
ಮೊದಲೆಲ್ಲ ಪುಸ್ತಕಗಳನ್ನು ಪಿನ್ ಮಾಡಿ ಇಲ್ಲವೇ ಹೊಲೆಯುವ ಮೂಲಕ ಬೈಂಡ್ ಮಾಡುತ್ತಿದ್ದರು. ಆದರೆ, ಅದು ಬಾಳಿಕೆ ಕಡಿಮೆ. ಪುಸ್ತಕದ ಹಾಳೆಗಳು ಬಹುಬೇಗ ಕಿತ್ತುಕೊಳ್ಳುತ್ತಿದ್ದವು. ಆಗ ಕರ್ನಾಟಕದಲ್ಲಿ ಕೆಲವು ಕಡೆ ಮಾತ್ರ ಸೂಕ್ತ ಅಂಟು ಬಳಸಿ ದೀರ್ಘಕಾಲ ಬಾಳಿಕೆ ಬರುವ ಪರ್ಫೆಕ್ಟ್ ಬೈಂಡಿಂಗ್ ಮಾಡಲಾಗುತ್ತಿತ್ತು. ನಾವೂ ಅದನ್ನು ಆರಂಭಿಸಿದೆವು. ಮೊದಲೆಲ್ಲ ಗ್ರಾಹಕರಿಗೆ ಅಂಟಿನಿಂದ ಪುಸ್ತಕ ಹಾಳಾಗಿ, ಬೇಗ ಹರಿಯುತ್ತದೆ ಎಂಬ ಅನುಮಾನಗಳಿದ್ದವು. ಆದರೆ, ನಮ್ಮ ಕೆಲಸ ನೋಡಿದ ಮುದ್ರಕರು, ಪುಸ್ತಕಗಳನ್ನು ಪರ್ಫೆಕ್ಟ್ ಬೈಂಡಿಂಗ್ ಮಾಡಿಸಲು ಮುಂದಾದರು.
ಲ್ಯಾಮಿನೇಶನ್ ಕಾರ್ಯಕ್ಕೆ ಗ್ರಾಹಕರ ಪ್ರತಿಕ್ರಿಯೆ ಹೇಗಿದೆ? ನಿಮ್ಮ ಸಂಸ್ಥೆಯಲ್ಲಿ ಎಷ್ಟು ಜನ ನೌಕರರಿದ್ದಾರೆ?
ಪುಸ್ತಕ ಪ್ರಕಾಶಕರು, ಮುದ್ರಕರೇ ನಮಗೆ ಮುಖ್ಯ ಗ್ರಾಹಕರು. ಮೊದಲೆಲ್ಲ ಹುಬ್ಬಳ್ಳಿ, ಧಾರವಾಡ, ಮಂಗಳೂರು, ದಾವಣಗೆರೆ, ಮೈಸೂರು, ಮಂಗಳೂರು ಹಾಗೂ ತಮಿಳುನಾಡಿನಿಂದಲೂ ಬಂದು ಲ್ಯಾಮಿನೇಶನ್ ಮಾಡಿಸಿಕೊಂಡು ಹೋಗುತ್ತಿದ್ದರು. ಈಗ ಲ್ಯಾಮಿನೇಶನ್ ಎಲ್ಲ ಕಡೆ ಇರುವುದರಿಂದ ಬಹುತೇಕ ನಮ್ಮ ಗ್ರಾಹಕರು ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಕೇವಲ 3 ಕೆಲಸಗಾರರೊಂದಿಗೆ ಬಾಡಿಗೆ ಕಟ್ಟಡದಲ್ಲಿ ಗೌರಿ ಲ್ಯಾಮಿನೇಟರ್ಸ್ ಆರಂಭಿಸಿದೆ. 2007ರಲ್ಲಿ ಚಾಮರಾಜಪೇಟೆಯಲ್ಲಿ ಸ್ವಂತ ಕಟ್ಟಡ ನಿರ್ಮಿಸಿದೆ. ಈಗ 16 ಜನರಿಗೆ ಉದ್ಯೋಗ ನೀಡಿದ್ದೇನೆ. ಮಗಳು ಗೌರಿ ಹಾಗೂ ಮಗ ವಿನಾಯಕ ಕೂಡ ನನ್ನ ಜತೆ ಕೈಜೋಡಿಸಿ ದ್ದಾರೆ. ಇದರಿಂದ ಈ ಉದ್ಯಮ 5ನೇ ತಲೆಮಾರಿಗೆ ಮುಂದುವರೆದಂತಾಗಿದೆ. ಮೈಸೂರು ಮಹಾರಾಜರು ಬಿರುದು ನೀಡಿದರು!
ಅದು 1890ರ ಅವಧಿ, ನಮ್ಮ ಮುತ್ತಾತ ನಾರಾಯಣ ಶೆಟ್ಟಿ ಅವರು ಮೈಸೂರು ಮಹಾರಾಜರ ಖಜಾನೆ, ಟಂಕಸಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಖಜಾನೆಯ ಹಣ ಸಾಗಿಸುವಾಗ, ದರೋಡೆಯಾಯಿತಂತೆ. ಆಗ ತಮ್ಮ ವೈಯಕ್ತಿಕ ಹಣವನ್ನು ಖಜಾನೆಗೆ ಸೇರಿಸಿ ಅದನ್ನು ಮಹಾರಾಜರಿಗೆ ಒಪ್ಪಿಸಿದ ಬಳಿಕ, ಈ ಕೆಲಸಕ್ಕೆ ನಾನು ಸೂಕ್ತನಲ್ಲ ಎಂದು ರಾಜೀನಾಮೆ ನೀಡಿದರಂತೆ. ಅವರ ಪ್ರಾಮಾಣಿಕತೆಗೆ ಮೆಚ್ಚಿದ ಮಹಾರಾಜರು ಅವರಿಗೆ “ಟಂಕಸಾಲ’ ಎಂಬ ಬಿರುದು ನೀಡಿದರು. ಆ ಬಿರುದು ಕ್ರಮೇಣ ನಮ್ಮ ಮನೆತನದ ಹೆಸರಾಯಿತು.
ವಾರದ ಅತಿಥಿ: ಟಿ.ಎಸ್. ನಾಗರಾಜ, ಮುದ್ರಕರು
ಸಂದರ್ಶನ: ನಿತೀಶ ಡಂಬಳ