Advertisement

ಬಂಟ್ವಾಳ ಎಪಿಎಂಸಿ ಕಾಂಗ್ರೆಸ್‌ ಪಾಲು

12:49 PM Feb 21, 2017 | Team Udayavani |

ಬಂಟ್ವಾಳ: ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸಿಗ, ತಾ.ಪಂ. ಮಾಜಿ ಅಧ್ಯಕ್ಷ ಕೆ. ಪದ್ಮನಾಭ ರೈ ಮತ್ತು ಉಪಾಧ್ಯಕ್ಷರಾಗಿ ಚಂದ್ರಶೇಖರ್‌ ಪೂಜಾರಿ ಕೋರ್ಯ ಚುನಾಯಿತರಾಗಿದ್ದಾರೆ. ಚುನಾಯಿತ 6 ಸದಸ್ಯರಲ್ಲದೆ ನಾಮ ನಿರ್ದೇಶಿತ ಮೂವರು ಸದಸ್ಯರ ಬೆಂಬಲದೊಂದಿಗೆ ಅವರು ಆಯ್ಕೆಯಾದರು.

Advertisement

ಪದ್ಮನಾಭ ರೈ ಅವರು ಬಿಎಸ್ಸಿ, ಎಂಎ ಪದವೀಧರರು, ಉದ್ಯಮಿ, ಸಾಮಾಜಿಕ ಮತ್ತು ಧಾರ್ಮಿಕ, ಸಹಕಾರಿ ಕ್ಷೇತ್ರ
ದಲ್ಲಿ ಗುರುತಿಸಿಕೊಂಡವರು. ಉಪಾಧ್ಯಕ್ಷ ಚಂದ್ರಶೇಖರ್‌ ಪೂಜಾರಿ ಆರಾಧನಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಎಪಿಎಂಸಿ ಸಭಾಂಗಣದಲ್ಲಿ ಫೆ. 20ರಂದು ತಹಶೀಲ್ದಾರ್‌ ಪುರಂದರ ಹೆಗ್ಡೆ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ನೇಮಿರಾಜ ರೈ ಮತ್ತು ಗೀತಾ ತಿಮ್ಮಪ್ಪ ಶೆಟ್ಟಿ ಸ್ಪರ್ಧಿಸಿದ್ದು ಚುನಾಯಿತ 7 ಸದಸ್ಯರ ಬೆಂಬಲ ಹೊಂದಿದ್ದರು. ಎಪಿಎಂಸಿ ಚುನಾಯಿತ ಒಟ್ಟು 13 ಸ್ಥಾನದಲ್ಲಿ ಕಾಂಗ್ರೆಸ್‌ 6, ಬಿಜೆಪಿ 7 ಸ್ಥಾನ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next