Advertisement
ನಗರದ ಚನ್ನಬಸಪ್ಪ ವೃತ್ತದಲ್ಲಿ ಜಮಾವಣೆಗೊಂಡಿದ್ದ ರೈತ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿ, ರೈತ ಹೋರಾಟಗಾರರು ರಾಜ್ಯದ ಎಲ್ಲ ಡೀಸಿಗಳನ್ನು ನೋಡಿದ್ದೇವೆ. ರೈತರ ಮೇಲೆ ಲಾಠಿ ಪ್ರಹಾರ ಮಾಡಿದವರು, ಕೇಸ್ ಹಾಕಿದವರು ಏನಾಗಿದ್ದಾರೆ ಎಲ್ಲವನ್ನು ಕಂಡಿದ್ದೇವೆ. ರಾಮನಗರ ಬಂಧಿಖಾನೆ ನಮಗೆ ಹೊಸದೇನಲ್ಲ. ಕಾನೂನು ಸುವ್ಯವಸ್ಥೆಗೆ ಭಂಗವಾಗಬಾರದು. ಈ ನೆಲದ ಕಾನೂನಿಗೆ ಗೌರವ ಕೊಡಬೇಕು ಎಂಬ ಉದ್ದೇಶದಿಂದ ಮೇಕೆದಾಟು ಪಾದಯಾತ್ರೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಜಿಲ್ಲಾಡಳಿತ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಪೊಲೀಸರನ್ನು ಛೂ ಬಿಟ್ಟು ನಮ್ಮನ್ನು ಬಂಧಿಸಿದ್ದೀರಿ. ನಿಮಗೆ ಶಕ್ತಿ ಇದ್ದರೆ ನಿಮ್ಮ ಅಧಿಕಾರ ಬಳಸಿಕೊಂಡು ನಮ್ಮನ್ನು ಪರಪ್ಪನ ಆಗ್ರಹಾರ ಜೈಲಿಗೆ ಕಳುಹಿಸಿ ಎಂದು ಸವಾಲು ಹಾಕಿದರು.
Related Articles
Advertisement
ಹೋರಾಟ ನಿರಂತರ: ರೈತ ಸಂಘದ ಸಂಚಾಲಕಿ ಭಾಗ್ಯ ಶ್ರೀ ಮಾತನಾಡಿ, ಸಮಾಜಕ್ಕೆ ರೈತರ ಮೇಲೆ ಸ್ವಲ್ಪವೂ ಕೃತಜ್ಞತೆ ಇಲ್ಲ. ಯಾರ ಋಣವನ್ನು ಬೇಕಾದರೂ ತೀರಸಬಹುದು ಆದರೆ ರೈತರ ಖುಣ ತೀರಿಸಲು ಸಾಧ್ಯವಿಲ್ಲ. ಹುಟ್ಟಿದ 6ತಿಂಗಳ ಮಕ್ಕಳಿಂದ ಹಿಡಿದು ಮನುಷ್ಯ ತನ್ನ ಜೀವಿತಾವದಿಯಲ್ಲಿ ರೈತರು ಬೆಳೆದ ಅನ್ನವನ್ನೇ ತಿನ್ನಬೇಕು. ರೈತರು ಕೃಷಿ ಜೊತೆಗೆ ನಮ್ಮ ನೆಲ-ಜಲಕ್ಕಾಗಿ ಹೋರಾಟ ಮಾಡುವಂತಹ ಸಂದರ್ಭ ಸೃಷ್ಟಿಮಾಡಿರುವ ವ್ಯವಸ್ಥೆ ಬದಲಾಗಬೇಕು. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಅಣೆಕಟ್ಟು ನಿರ್ಮಾಣ ಮಾಡುವವರೆಗೂ ನಮ್ಮ ಹೋರಾಟದ ನಿರಂತರ ಎಂದರು.
ಮೇಕೆದಾಟು ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಸಂಪತ್ ಕುಮಾರ್, ಚಿಕ್ಕಬಳ್ಳಾಪುರ ನಾರಾಯಣಸ್ವಾಮಿ,ಚಲುವಯ್ಯ, ಸಂಚಾಲಕ ಪಯಾಜ್, ಅಶ್ವತ್ಥಗೌಡ, ರೈತ ಸಂಘದ ಗೌರವ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ
ನಾಗರತ್ನಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯ ದರ್ಶಿ ಮುಳ್ಳಳ್ಳಿ ಮಂಜುನಾಥ್ ಸೇರಿದಂತೆ ಮಹಿಳಾ ಮುಖಂಡರು ಉಪಸ್ಥಿತರಿದ್ದರು.