Advertisement

ರಸ್ತೆಗೆ ಹೂ ಸುರಿದು ಬೆಳೆಗಾರರ ಆಕ್ರೋಶ

09:15 AM May 11, 2020 | mahesh |

ದೊಡ್ಡಬಳ್ಳಾಪುರ: ಕೋವಿಡ್ ದಿಂದಾಗಿ ಪಾಲಿಹೌಸ್‌ಗಳಲ್ಲಿ ಹೂ ಬೆಳೆದಿರುವ ರೈತರು, ಮಾರುಕಟ್ಟೆ ವ್ಯವಸ್ಥೆಯಿಲ್ಲದೇ ಸಂಕಷ್ಟದಲ್ಲಿದ್ದು, ಕೂಡಲೇ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿ, ರೈತರು ಹೂ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹೂಗಳನ್ನು ರಸ್ತೆಗೆ ಸುರಿದು ಪ್ರತಿಭಟಿಸಿದರು.

Advertisement

ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ನಿರ್ದೇಶಕ ಅರವಿಂದ್‌ ಮಾತನಾಡಿ, ರಾಜ್ಯದಲ್ಲಿ ಸುಮಾರು 2.5 ಸಾವಿರ ಎಕರೆ ಪ್ರದೇಶದಲ್ಲಿ ಪಾಲಿಹೌಸ್‌ಗಳಲ್ಲಿ ಹೂ ಬೆಳೆಯಾಗುತ್ತಿದೆ.
ತಾಲೂಕಿನಲ್ಲಿ 600 ಎಕರೆ ಪ್ರದೇಶದಲ್ಲಿ ಹೂ ಬೆಳೆಯಲಾಗುತ್ತಿದೆ. ಕೋವಿಡ್ ಪರಿಣಾಮದಿಂದಾಗಿ ಪಾಲಿಹೌಸ್‌ಗಳಲ್ಲಿ ಹೂ ಬೆಳೆದಿರುವ ರೈತರು ಹೂಗಳ ಮಾರಾಟ ವ್ಯವಸ್ಥೆಯಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ ಹೆಕ್ಟೇರ್‌ಗೆ 25 ಸಾವಿರ ರೂ. ನಿರ್ವಹಣೆ ವೆಚ್ಚ ನೀಡುತ್ತಿದ್ದು, ನಿರ್ವಹಣೆಗೆ ರೈತರು ಎಕರೆಗೆ 1.25 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ರೈತರಿಗೆ ಹೆಚ್ಚಿನ ನಿರ್ವಹಣೆ ವೆಚ್ಚ ನೀಡಬೇಕು. ಬ್ಯಾಂಕ್‌ಗಳಲ್ಲಿ ಪಡೆದ ಸಾಲದ 6 ತಿಂಗಳ ಬಡ್ಡಿ ಮನ್ನಾ ಮಾಡಬೇಕು. ಉಚಿತ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ಸಿಎಂಯಡಿ ಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ಆದರೆ ಸರ್ಕಾರ ದಿಂದ ಭರವಸೆ ದೊರೆತಿಲ್ಲ ಎಂದರು.

ತಾಲೂಕು ಹಸಿರು ಮನೆ ಹೂವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ವೆಂಕಟೇಶ್‌ ಮಾತನಾಡಿ, ಲಾಕ್‌ಡೌನ್‌ ಈಗ ಮುಕ್ತಾಯವಾದರೂ ಹೂವಿನ ವ್ಯಾಪಾರ ಬೇಗ
ಆರಂಭವಾಗುತ್ತದೆ ಎನ್ನುವ ನಂಬಿಕೆ ಇಲ್ಲದಾಗಿದೆ. ರಸಗೊಬ್ಬರ, ಕ್ರಿಮಿನಾಶಕದ ಮೇಲಿನ ಜಿಎಸ್‌ಟಿ 6 ತಿಂಗಳ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಶಾಮಸುಂದರ್‌ ಮಾತನಾಡಿ, ಹೂವು ಮಾರಾಟವಾಗದೇ ಕಂಗಾಲಾಗಿದ್ದ ಬೆಳೆಗಾರರಿಗೆ ಈಗ ಬೆಸ್ಕಾಂ ವಿದ್ಯುತ್‌ ಶುಲ್ಕ ಪಾವತಿ ಮಾಡಲು ಬಿಲ್‌ ನೀಡಿ, ಶುಲ್ಕ ಪಾವತಿಗೆ ಮೇ 18 ಕೊನೆಯ ದಿನ ಎಂದು ಗಡುವು ನೀಡುವ ಮೂಲಕ ಶಾಕ್‌ ನೀಡಿದೆ. ಆರು ತಿಂಗಳವರೆಗೆ ವಿದ್ಯುತ್‌ ಶುಲ್ಕ ಮನ್ನಾ ಮಾಡಬೇಕು ಎಂದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್‌.ಚನ್ನರಾ ಮಯ್ಯ, ದಕ್ಷಿಣ ಭಾರತ ಹೂ ಬೆಳೆ ಗಾರರ ಸಂಘದ ನಿರ್ದೇಶಕ ಶ್ರೀಕಾಂತ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಟಿ.ವಿ.ಲಕ್ಷ್ಮೀ ನಾರಾಯಣ್‌, ಜಿಪಂ ಮಾಜಿ ಅಧ್ಯಕ್ಷ
ಸಿ.ಡಿ. ಸತ್ಯನಾರಾಯಣ ಗೌಡ, ಮುಖಂಡ ಬಿ.ಸಿ.ನಾರಾಯಣ ಸ್ವಾಮಿ, ತಾಲೂಕು ಸಂಘದ ಸದಸ್ಯ ಸತೀಶ್‌, ನಾಗರಾಜ್‌, ಶಿವಾನಂದರೆಡ್ಡಿ, ಶ್ರೀನಿವಾಸ್‌, ಮಲ್ಲೇಶ್‌, ಮುದ್ದುಕೃಷ್ಣಪ್ಪ,
ಹನುಮಂತಯ್ಯ, ರವಿಕುಮಾರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next