Advertisement
ಹಿನ್ನೀರು ಪ್ರದೇಶಕ್ಕೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಮೂಲಕ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಅಷ್ಟೇ ಪ್ರಮಾಣದ ನೀರನ್ನು ಹರಿಬಿಡಲಾಗುತ್ತಿದೆ. ಶನಿವಾರ ಮುಂಜಾನೆ ಜಲಾಶಯಕ್ಕೆ 42,324 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು ಸಾಯಂಕಾಲದ ವೇಳೆಗೆ ಒಳಹರಿವಿನಲ್ಲಿ ಏರಿಕೆಯಾಗಿ 65 ಸಾವಿರ ಕ್ಯೂಸೆಕ್ ತಲುಪಿರುವುದರಿಂದ ಜಲಾಶಯದ 12 ಗೇಟ್‌ಗಳನ್ನು 0.6 ಮೀ. ಎತ್ತರದಲ್ಲಿ 30 ಸಾವಿರ ಕ್ಯೂಸೆಕ್ ಹಾಗೂ ಜಲಾಶಯದ ಬಲಭಾಗದಲ್ಲಿರುವ ಕೆಪಿಸಿಎಲ್‌ನ ಆಲಮಟ್ಟಿ ಜಲವಿದ್ಯುದಾಗಾರದ ಎಲ್ಲ 6 ಘಟಕಗಳ ಮೂಲಕ ನದಿಪಾತ್ರಕ್ಕೆ ಹಾಗೂ ವಿವಿಧ ಕುಡಿಯುವ ನೀರು, ಜಲಾಶಯ ವ್ಯಾಪ್ತಿಯ ಕೆಲ ಕಾಲುವೆಗಳು, ಕೂಡಗಿ ರಾಷ್ಟ್ರೀಯ ಶಾಖೋತ್ಪನ್ನ ಘಟಕಗಳಿಗೆ ನೀರು ಹರಿಸಲಾಗುತ್ತಿದೆ. ಗರಿಷ್ಠ 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ ಸಂಜೆಯ ವೇಳೆಗೆ 123.081 ಟಿಎಂಸಿ ಅಡಿ ಸಂಗ್ರಹವಾಗಿದ್ದು, ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. Advertisement
ಆಲಮಟ್ಟಿ ಜಲಾಶಯದಿಂದ ಮತ್ತೆ ಹೊರ ಹರಿವು ಆರಂಭ
10:38 AM Oct 13, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.