Advertisement
ಒಮ್ಮೆ ಆಕೆ ಕೆಲಸ ಮಾಡುತ್ತಿದ್ದ ಗಣಕದಲ್ಲಿ ಸಮಸ್ಯೆಗಳು ಕಾಣಿಸಿಕೊಂಡವಂತೆ. ಕ್ರಮವಿಧಿ (Algorithm) ಗಳೆಲ್ಲ ಸರಿಯಾಗೇ ಇದ್ದರೂ ಗಣಕ ಮಾತ್ರ ತಪ್ಪುತಪ್ಪಾದ ಉತ್ತರ ತೋರಿಸುತ್ತಿತ್ತು. ತಂತ್ರಾಂಶದಲ್ಲೇನೂ ಸಮಸ್ಯೆಯಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಮೇಲೆ ಗಣಕದ ಒಂದೊಂದೇ ಬಿಡಿಭಾಗಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತ ಹೋದಾಗ, ಅದರ ಒಂದು ಸರ್ಕ್ನೂಟ್‌ನ ಮೂಲೆಯಲ್ಲಿ ಎರಡಿಂಚು ಉದ್ದದ ಒಂದು ಹಾತೆ ಸಿಕ್ಕಿಕೊಂಡಿದ್ದದ್ದು ಕಾಣಿಸಿತು. ಇದರಿಂದ ವಿದ್ಯುತ್ ಸರಬರಾಜು ಸರಿಯಾಗಿ ನಡೆಯದೆ, ಸಿಗ್ನಲ್‌ಗಳಲ್ಲಿ ಏರುಪೇರಾಗಿತ್ತು. ಗಣಕ ತಪ್ಪು ಫಲಿತಾಂಶಗಳನ್ನು ಕೊಡುತ್ತಿದ್ದದ್ದಕ್ಕೆ ಹಾತೆಯೇ ಕಾರಣ ಎಂದು ಕೊನೆಗೂ ತಿಳಿಯಿತು. ಅದನ್ನು ತೆಗೆದ ಮೇಲೆ ಗಣಕದ ಆರೋಗ್ಯ ಸುಧಾರಿಸಿತು!
Advertisement
ಪದ ಹುಟ್ಟಿದ ಕತೆ
10:12 AM Jan 15, 2020 | mahesh |
Advertisement
Udayavani is now on Telegram. Click here to join our channel and stay updated with the latest news.