Advertisement
ಸಾಹಿತ್ಯ ಸಾಂಸ್ಕೃತಿಕ ಸಂಘಟನೆ ಯಾದ ಪೆರ್ಲದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಪೆರ್ಲದ ಗುಲಾಬಿ ನಿವಾಸದಲ್ಲಿ ಆಯೋಜಿಸಲಾಗಿದ್ದ ಮುಂಗಾರ ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅನುಭವ, ವಿಶ್ಲೇಷಣೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಕಲೆ ಬಹುಮುಖೀ ಆಯಾಮದ್ದಾಗಿದ್ದು, ಮುಗಿಯದೆ ನಿತ್ಯ ಕಾಡುವ ಕಥೆಗಳು ಜನಮಾನಸದಲ್ಲಿ ಬೇರೂರಿ ಹೊಸ ಸೃಷ್ಟಿಗೆ ಕಾರಣವಾಗುತ್ತವೆ ಎಂದ ಅವರು ಹೊಸತೊಂದರ ಶಿಲ್ಪಿಯಾಗುವ ಕಥೆಗಾರ ಪಾತ್ರಗಳ ಸೃಷ್ಟಿಯ ಮೂಲಕ ಬ್ರಹ್ಮ ಸದೃಶದಿಂದ ರೂಪಕಗಳನ್ನು ಸೃಜಿಸಿ ಹೊಸ ಲೋಕವನ್ನು ಸೃಷ್ಟಿಸಿ ಆರಿವಿನ ವಿಸ್ತಾರತೆಗೆ ಕಾರಣನಾಗುತ್ತಾನೆ ಎಂದು ತಿಳಿಸಿದರು.
Related Articles
Advertisement
ಬಳಿಕ ನಡೆದ ಕಥಾಗೋಷ್ಠಿಯಲ್ಲಿ ಉದಯೋನ್ಮುಖ ಕತೆಗಾರರಾದ ಪ್ರಭಾವತಿ ಕೆದಿಲಾಯ, ಸುಶೀಲಾ ಪದ್ಯಾಣ, ಜ್ಯೋಸ್ನಾ ಎಂ.ಕಡಂದೇಲು, ನಿರ್ಮಲಾ ಸೇಸಪ್ಪ ಖಂಡಿಗೆ, ಸೀತಾಲಕ್ಷ್ಮೀ ವರ್ಮ ವಿಟ್ಲ, ಅಭಿಲಾಷ್ ಎಸ್.ಬಿ., ಶ್ರೀಧರ ಭಟ್ ನಲ್ಕ ಬನಾರಿ, ಶ್ವೇತಾ ಕಜೆ, ರಾಮ ವೈ.ಬಿ. ಏದಾರ್, ಚಿತ್ತರಂಜನ್ ಕಡಂದೇಲು, ಗೋಪಾಲಕೃಷ್ಣ ಭಟ್ ವಾಟೆ ಸ್ವರಚಿತ ಕಥೆಗಳನ್ನು ವಾಚಿಸಿದರು.
ಕವಿಗಳಾದ ಶಿವ ಪಡ್ರೆ, ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಟಿ.ಎ.ಎನ್. ಖಂಡಿಗೆ, ಡಾ| ಎಸ್.ಎನ್. ಭಟ್ ಪೆರ್ಲ, ರಿತೇಶ್ ಕಿರಣ್, ಪಾಂಡುರಂಗ ಶೆಣೈ ಪೆರ್ಲ, ಸತ್ಯನಾರಾಯಣ ಹೆಗ್ಡೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದರ್ಶಿ ಅಖೀಲೇಶ್, ಮೀಡಿಯಾ ಕ್ಲಾಸಿಕಲ್ಸ್ ನ ಕಾರ್ಯದರ್ಶಿ ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ, ಕವಯಿತ್ರಿ ಚೇತನಾ ಕುಂಬಳೆ, ಗೀತಾ ಜಿ. ನಾಯಕ್, ವಿಜಯಲಕ್ಷ್ಮೀ ಶೆಣೈ ಉಪಸ್ಥಿತರಿದ್ದು ಸಹಕರಿಸಿದರು. ಆನಂದ ರೈ ಅಡ್ಕಸ್ಥಳ ಗೋಷ್ಠಿ ನಿರ್ವಹಿಸಿದರು.