Advertisement

ಸಾವಯವ ಪದಾರ್ಥಗಳ ಮಾರುಕಟ್ಟೆ ಶೀಘ್ರ ಆರಂಭ

04:18 PM Jul 13, 2018 | |

ಹೊನ್ನಾಳಿ: ಸಾವಯವ ವಸ್ತುಗಳ ಬಳಕೆ ಮತ್ತು ಉತ್ತೇಜನಕ್ಕಾಗಿ ಪಟ್ಟಣದ ಹೊಸಕೇರಿ ಮಹಾಲಕ್ಷ್ಮಿ ದೇವಸ್ಥಾನದ ಪ್ರಾಂಗಣದಲ್ಲಿ ಸಾವಯವ ಪದಾರ್ಥಗಳ ಮಾರುಕಟ್ಟೆಯನ್ನು ಪ್ರಾರಂಭಿಸಲಾಗುವುದು ಎಂದು ಪಿಎಸ್‌ಐ ಕಾಡದೇವರಮಠ ಹೇಳಿದರು.

Advertisement

ಗುರುವಾರ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್‌ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆಗಳು, ಪಟ್ಟಣ ಪಂಚಾಯತ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜನ ಜಾಗೃತಿ ಸಂಸ್ಥೆ ಪದಾಧಿಕಾರಿಗಳು, ಸಮಾನ ಮನಸ್ಕರು ಸೇರಿಕೊಂಡು ಭಾವೈಕ್ಯತೆ ಸಮಿತಿ ರಚಿಸಲಾಗುತ್ತದೆ. ಸಾವಯವ ಪದಾರ್ಥಗಳ ಬಳಕೆಗಾಗಿ ಪ್ರತಿ ಭಾನುವಾರ ಸಾವಯವ ಆಹಾರ ಪದಾರ್ಥಗಳು, ತರಕಾರಿ ಸೇರಿದಂತೆ ಇತರ ಪದಾರ್ಥಗಳ ಸಂತೆಯನ್ನು ಮಧ್ಯಾಹ್ನ 3 ಗಂಟೆಯಿಂದ ನಡೆಸಲಾಗುವುದು. ಗ್ರಾಹಕರು ಸಹಕರಿಸಬೇಕು ಎಂದರು.

ಸಾವಯವ ಮಾರುಕಟ್ಟೆಯಲ್ಲಿ ಮಾರಾಟವಾಗುವಂತಹ ಪದಾರ್ಥಗಳು ಕೇವಲ ಸಾವಯವ ಗೊಬ್ಬರದಿಂದ ಮಾತ್ರ
ಉತ್ಪನ್ನವಾಗಿರುವಂತವುಗಳು. ಆಹಾರ ಪದಾರ್ಥಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಬೇಳೆ ಕಾಳುಗಳು ಸೇರಿದಂತೆ ಎಲ್ಲ ಪಾದಾರ್ಥಗಳು ಹಾಗೂ ತರಕಾರಿ, ಸೊಪ್ಪುಗಳ ಮಾರಾಟ ನಡೆಯುತ್ತದೆ. ಈಗಾಗಲೇ ಸಾವಯವ ಕೃಷಿಯಿಂದ ಬೆಳೆದಂತಹ ತಾಲೂಕಿನ ಕೆಲ ಹಳ್ಳಿಗಳ ರೈತರನ್ನು ಸಂಪರ್ಕಿಸಿ ಭಾನುವಾರದ ಸಾವಯವ ಪದಾರ್ಥಗಳ ಸಂತೆಗೆ ಬರುವಂತೆ ಆಹ್ವಾನ ಕೊಡಲಾಗಿದೆ ಎಂದು ಹೇಳಿದರು. ಜುಲೈ 15ರ ಭಾನುವಾರ ಮೊದಲ ಭಾನುವಾರದ ವಾರದ ಸಂತೆಯಾಗಿವುದರಿಂದ ಅಂದೇ ಸಾವಯವ ಆಹಾರ ಪದಾರ್ಥಗಳ ಮಾರಾಟ ಸಂತೆ ದಿನದ
ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ಸಾವಯವ ಆಹಾರ ಪದಾರ್ಥಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೆಳಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ| ಎಚ್‌.ಕೆ. ರೇವಣಸಿದ್ದನಗೌಡ, ತೋಟಗಾರಿಕೆ ಇಲಾಖಾಧಿಕಾರಿ ರೇಖಾನಾಯ್ಕ, ಪಶು ವೈದ್ಯಾಧಿಕಾರಿ ಡಾ| ವಿಶ್ವನಟೇಶ್‌, ಜನ ಜಾಗೃತಿ ಜಿಲ್ಲಾಧ್ಯಕ್ಷ ಸುರೇಶ್‌ಹೊಸಕೇರಿ, ಮಹಾಲಕ್ಷ್ಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಶ್‌, ಪಪಂ ಸದಸ್ಯ ಸರಳಿನಮನೆ ಮಂಜುನಾಥ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ನಾಗರಾಜ್‌, ಮುಖಂಡರಾದ ಕುಮಾರಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next