Advertisement

ಜೇವರ್ಗಿಯಲ್ಲಿ ಕಮಲಜಾತ್ರೆ ಇಂದಿನಿಂದ

11:23 AM Feb 16, 2018 | |

ಜೇವರ್ಗಿ: ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಹೊಸ ಪ್ರಯೋಗವೊಂದನ್ನು ಮಾಡಲು ಹೊರಟ್ಟಿದ್ದು, ಉತ್ತರ ಪ್ರದೇಶ ಮಾದರಿಯಲ್ಲಿ ಕಮಲ ಜಾತ್ರೆ ನಡೆಸುತ್ತಿದೆ.

Advertisement

ಈ ಜಾತ್ರೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಫೆ.16, 17 ಹಾಗೂ 18 ರಂದು ನಡೆಯಲಿದ್ದು, ಪಟ್ಟಣದ ವಿಜಯಪುರ ರಸ್ತೆಯ ಶಿಕ್ಷಕರ ಕಾಲೋನಿ ಹತ್ತಿರದ ಗೋಗಿ ಲೇಔಟ್‌ ಬಡಾವಣೆಯ ಖಾಲಿ ನಿವೇಶನದಲ್ಲಿ ಜಾತ್ರೆಗಾಗಿ 500ಗಿ500 ಅಡಿಯ ಸ್ಥಳದಲ್ಲಿ ವೇದಿಕೆ, ವಿವಿಧ ಮಳಿಗೆಗಳು ಹಾಕಲಾಗಿದೆ. ಗುರುವಾರ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಕಮಲ ಜಾತ್ರೆಯ ಸಿದ್ಧತೆ ವೀಕ್ಷಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಬಾರಿಗೆ ಪಟ್ಟಣದಲ್ಲಿ
ಕಮಲ ಜಾತ್ರೆ ಆಯೋಜನೆಯಿಂದ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು, ಸಂತಸವನ್ನುಂಟು ಮಾಡಿದೆ.

ಈ ಜಾತ್ರೆಯಲ್ಲಿ ಸರ್ವ ಜನಾಂಗದವರೂ ಯಾವುದೇ ಭೇದ-ಭಾವವಿಲ್ಲದೇ ಪ್ರತಿಯೊಬ್ಬರೂ ಭಾಗವಹಿಸಬಹುದು. ಮಹಿಳೆಯರಿಗೆ ಮೆಹಂದಿ, ಮಕ್ಕಳಿಗೆ ಬಲೂನ್‌ ಆಟ ಹಾಗೂ ವೃದ್ಧರಿಗೆ ಚಾಯ್‌ ಪೇ ಚರ್ಚಾ ಸೇರಿದಂತೆ ನಗೆ ಹಬ್ಬ, ಲೇಸರ್‌ ಶೋ, ಮಲ್ಲಗಂಬ, ಆಹಾರ ಮಳಿಗೆ ಸೇರಿದಂತೆ ಹಲವಾರು ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಸರ್ಕಾರದ ಸಾಧನೆಗಳನ್ನು ಇಲ್ಲಿ ಬ್ಯಾನರ್‌, ಕ್ರೀಡೆಗಳ, ಲೇಸರ್‌ ಶೋ ಮೂಲಕ ಪ್ರದರ್ಶಿಸಲಾಗುವುದು. ಈ ಜಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ
ಪುತ್ಥಳಿ ಕೂಡ ಸ್ಥಾಪಿಸಿ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.

ಸೆಲ್ಫಿ ತೆಗೆದುಕೊಂಡ ನಂತರ ಕೆಲವೇ ನಿಮಿಷಗಳಲ್ಲಿಯೇ ಉಚಿತವಾಗಿ ಭಾವಚಿತ್ರ ನೀಡಲಾಗುವುದು. ಈ ಜಾತ್ರೆಯಲ್ಲಿ ಭಾಗವಹಿಸುವವರಿಗೆ ಯಾವುದೇ ಶುಲ್ಕ ಕೂಡ ಇರುವುದಿಲ್ಲ. ಆದರೆ ಅತ್ಯಂತ ಕಡಿಮೆ ದರದಲ್ಲಿ ಆಹಾರ ಮಳಿಗೆ ಕೂಡ ಲಭ್ಯ ಇರುತ್ತದೆ. ಈ ಜಾತ್ರೆಗೆ ಕ್ಷೇತ್ರದ ಸುಮಾರು 40 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ತಾಲೂಕಿನಾದ್ಯಂತ ಐದು ವಾಹನಗಳ ಮೂಲಕ ಪ್ರಚಾರ
ಕಾರ್ಯಕೈಗೊಳ್ಳಲಾಗಿದೆ. ಇದರ ಜೊತೆಗೆ ಬ್ಯಾನರ್‌, ಬಂಟಿಂಗ್ಸ್‌ ಮೂಲಕ ಮನೆ-ಮನೆಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next