Advertisement

ಸಂವಿಧಾನ ಬದಲಾವಣೆ ಕುರಿತ ಅಭಿಪ್ರಾಯ ಖಂಡನೀಯ

11:00 AM Nov 29, 2017 | Team Udayavani |

ಬೆಂಗಳೂರು: “ಧರ್ಮ ಸಂಸದ್‌ನಲ್ಲಿ ಸಂವಿಧಾನ ಬದಲಾವಣೆ ಕುರಿತು ಸ್ವತಃ ಧರ್ಮಗುರುಗಳಿಂದ ಅಭಿಪ್ರಾಯ ವ್ಯಕ್ತವಾಗಿರುವುದು ಖಂಡನೀಯ’ ಎಂದು ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಭಾರತದ ಸಂವಿಧಾನವನ್ನು
ವಿಶ್ವವೇ ಒಪ್ಪಿಕೊಂಡಿದೆ. ಆದರೆ, ಧರ್ಮ ಸಂಸದ್‌ನಲ್ಲಿ ಧರ್ಮಪೀಠದವರಿಂದ ಸಂವಿ ಧಾನ ಬದಲಾವಣೆ ಕೂಗು ಕೇಳಿಬಂದಿರುವುದು
ದುರಂತ. ಅದರಲೂ ಸಂವಿಧಾನ ಸಮರ್ಪಣಾ ದಿನವೇ ಇಂತಹ ಅಭಿಪ್ರಾಯಗಳು ವ್ಯಕ್ತವಾಗಿರುವುದು ಖಂಡನೀಯ’ ಎಂದರು. ಯಾವುದೇ ಧರ್ಮದ ಸಭೆಗಳನ್ನ ನಡೆಸಲು ನಮ್ಮ ತಕರಾರು ಇಲ್ಲ. ಆದರೆ, ಆ ಧರ್ಮ ಸಂಸತ್‌ಲ್ಲಿ ಸಂವಿಧಾನ ಬದಲಾವಣೆ ಮಾತುಗಳು ಕೇಳಿಬಂದಿದ್ದು ಸರಿ ಅಲ್ಲ. ಇನ್ನೂ ದುರಂತವೆಂದರೆ ಧರ್ಮ ಪ್ರಚಾರಕರು ಕತ್ತಿ ಹಿಡಿದು ಯುದ್ಧ ಮಾಡಿ ಎಂದು ಕರೆ ನೀಡುತ್ತಿರುವುದು. ಇದೇ ರೀತಿ ಮುಂದುವರಿದರೆ, ರಾಜ್ಯ ಮತ್ತು ರಾಷ್ಟ್ರದಲ್ಲಿ ಸೌಹಾರ್ದತೆ ಉಳಿಯಲು ಸಾಧ್ಯವೇ ಎಂದು 
ಪ್ರಶ್ನಿಸಿದರು.

“ನಾಲಿಗೆ ಮೇಲೆ ಹಿಡಿತವಿರಲಿ’: ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ)  ಭಾಷಣಕ್ಕೆ ಕೇಳಿಬರುತ್ತಿರುವ ಪ್ರತಿರೋಧಗಳಿಗೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, “ಸಾರ್ವಜನಿಕ ಜೀವನದಲ್ಲಿರುವ ಒಬ್ಬ ಕೇಂದ್ರ ಸಚಿವರು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು’ ಎಂದು ಹರಿಹಾಯ್ದರು. ಹೀಗೆ ಬೇಕಾಬಿಟ್ಟಿ ಮಾತನಾಡುವುದರಲ್ಲಿ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಕೂಡ ಹಿಂದೆ ಬಿದ್ದಿಲ್ಲ. ಇದಕ್ಕೆ ಈ ಹಿಂದಿನ ಹಲವಾರು ಉದಾಹರಣೆಗಳನ್ನು ಕೊಡಬಹುದು. ಜೆ.ಎಚ್‌. ಪಟೇಲ್‌ ಸೇರಿ ಅನೇಕ ರಾಜಕಾರಣಿಗಳೂ ವ್ಯಂಗ್ಯ, ಮೊನಚಾದ ಮಾತುಗಳಿಗೆ ಹೆಸರಾದವರು ನಮ್ಮ ಮುಂದೆ ಇದ್ದಾರೆ .ಅವರನ್ನು
ನೋಡಿ ನಾವು ಕಲಿಯಬೇಕು ಎಂದು ಸೂಚ್ಯವಾಗಿ ಹೇಳಿದರು. ಅಷ್ಟಕ್ಕೂ ಈ ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ದಲಿತ ಸಂಘಟನೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ನಡೆದಿವೆ. ಈ ರೀತಿಯ ಚರ್ಚೆ ಇದೇ ಮೊದಲಲ್ಲ ಎಂದು ಪ್ರೊ.ಚಂದ್ರಶೇಖರ ಪಾಟೀಲ ಅವರ ಭಾಷಣವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next