Advertisement

ಎರಡು ವರ್ಷಗಳ ಹಿಂದೆಯೇ ಓಪನಿಂಗ್‌ ಸೂಚನೆ ಸಿಕ್ಕಿತ್ತು

11:12 PM Oct 06, 2019 | Team Udayavani |

ಮೊದಲ ಸಲ ಆರಂಭಿಕನಾಗಿ ಬಂದು ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ಮೆರೆದಾಡಿದ ರೋಹಿತ್‌ ಶರ್ಮ, ಒಂದಲ್ಲ ಒಂದು ದಿನ ತನಗೆ ಟೆಸ್ಟ್‌ ಓಪನಿಂಗ್‌ ಜವಾಬ್ದಾರಿ ಸಿಗಲಿದೆ ಎಂಬುದು 2 ವರ್ಷ ಗಳ ಹಿಂದೆಯೇ ತಿಳಿದಿತ್ತು ಎಂದಿದ್ದಾರೆ.

Advertisement

“ಓಪನರ್‌ ಆಗಿ ಆಡುವ ಅವಕಾಶವನ್ನು ಬಾಚಿ ಕೊಳ್ಳಲು ಕಾಯುತ್ತಿದ್ದೆ. ಎರಡು ವರ್ಷಗಳ ಹಿಂದೆಯೇ ಇನ್ನಿಂಗ್ಸ್‌ ಆರಂಭಿ ಸಲು ತಯಾರಾಗಿ ಇರಬೇಕು ಎಂಬ ಸುಳಿವು ಸಿಕ್ಕಿತ್ತು. ನೆಟ್‌ ಪ್ರ್ಯಾಕ್ಟೀಸ್‌ನಲ್ಲೂ ಹೊಸ ಚೆಂಡಿನಿಂದಲೇ ಅಭ್ಯಾಸ ಮಾಡುತ್ತಿದ್ದೆ. ನೀವು ಕೆಂಪು ಚೆಂಡಿನಲ್ಲಿ ಆಡುತ್ತೀರೋ, ಬಿಳಿ ಚೆಂಡಿನಲ್ಲಿ ಆಡುತ್ತೀರೋ ಎನ್ನುವುದು ಮುಖ್ಯವಲ್ಲ. ಆರಂಭದಲ್ಲಿ ನೀವು ಎಚ್ಚರಿಕೆಯಿಂದ ಇದ್ದರಾಯಿತು’ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ರೋಹಿತ್‌ ಹೇಳಿದರು.

“ಆಟದ ಮೂಲಭೂತ ಅಂಶಗಳೆಲ್ಲ ಸಮಾನ ವಾಗಿಯೇ ಇರುತ್ತವೆ. ನಾನು ಇನ್ನಿಂಗ್ಸ್‌ನ ಆರಂಭ ದಲ್ಲಿ ಹೆಚ್ಚು ಎಚ್ಚರಿಕೆಯಿಂದ ಆಡಿದೆ.

ಆಫ್ಸ್ಟಂಪ್‌ನಲ್ಲಿರುವ ಚೆಂಡನ್ನು ಬಿಟ್ಟು ಬಿಡುವುದು, ದೇಹದ ಸಮಕ್ಕೆ ಬಂದ ಚೆಂಡನ್ನು ಬಡಿದಟ್ಟುವುದು… ಹೀಗೆ ಮೂಲ ಅಂಶಗಳೆಲ್ಲ ಒಂದೇ ಆಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next