Advertisement

ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌ ಜಗತ್ತಿಗೇ ತಲೆನೋವು!

10:34 AM Sep 09, 2019 | sudhir |

ಖರೀದಿಗೆಂದು ಎಲ್ಲೇ ಹೋಗಿ ಈಗ ಪ್ಲಾಸ್ಟಿಕ್‌ನಲ್ಲಿ ಕೊಡುವುದು ಸಾಮಾನ್ಯ. ಅಷ್ಟೇ ಅಲ್ಲ, ಪ್ರತಿ ವಸ್ತುವಿಗೂ ಪ್ಲಾಸ್ಟಿಕ್‌ ರ್ಯಾಪರ್‌. ಇಂತಹ ಪ್ಲಾಸ್ಟಿಕ್‌ನಿಂದ ಆಗುವ ಸಮಸ್ಯೆ ಅಷ್ಟಿಷ್ಟಲ್ಲ. ನಿಧಾನಕ್ಕೆ ಇದು ಜಗತ್ತನ್ನೇ ನುಂಗುತ್ತಿದೆ. ಅಪಾಯಕ್ಕೊಳಗಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

Advertisement

ಪ್ಲಾಸ್ಟಿಕ್‌ ನಿಷೇಧ ಎಲ್ಲೆಲ್ಲಿ?
ಮಣಿಪಾಲ: ಪ್ಲಾಸ್ಟಿಕ್‌ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪಣತೊಟ್ಟಿರುವ ಕೇಂದ್ರ ಸರಕಾರ ಅ.2ರ ಬಳಿಕ ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸಲಿದೆ. ಈ ವರ್ಷ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಈಗಾಗಲೆ ತಾಜ್‌ಮಹಲ್‌ ಮೀರಿಸುವ ತ್ಯಾಜ್ಯದ ರಾಶಿ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಹಾಗಾದರೆ ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌ ಅಂದರೇನು? ಯಾವ ದೇಶಗಳಲ್ಲಿ ಇವುಗಳಿಗೆ ನಿಷೇಧ? ಇಲ್ಲಿದೆ ಮಾಹಿತಿ.

ಏನಿದು ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌?
ಸಿಂಗಲ್‌ ಅಥವಾ ಕೇವಲ ಒಂದೇ ಬಾರಿ ಬಳಕೆ ಮಾಡಿ ಬಳಿಕ ಎಸೆಯುವ, ತ್ಯಾಜ್ಯವಾಗುವ ಪ್ಲಾಸ್ಟಿಕ್‌. ಇವುಗಳನ್ನು ಒಮ್ಮೆ ಬಳಸಿದ ಬಳಿಕ ಪುನರ್ಬಳಕೆ ಸಾಧ್ಯವಿಲ್ಲ. ಇದರಿಂದ ಇವುಗಳು ತ್ಯಾಜ್ಯವಾಗಿ ಪರಿವರ್ತನೆಗೊಂಡು ಪರಿಸರವನ್ನು ಸೇರುತ್ತವೆೆ. ಇದು ಅತ್ಯಂತ ಹಾನಿಕರವಾಗಿದೆ.

4 ಮೌಂಟ್‌ ಎವರೆಸ್ಟ್‌
1950ರ ಬಳಿಕ ಜಾಗತಿಕವಾಗಿ 9 ಬಿಲಿಯನ್‌ ಟನ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗಿದೆ. ಈ ಪ್ರಮಾಣ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ನ
ಎತ್ತರಕ್ಕೆ ಸಮವಾಗಿದೆ. ಈಗಾಗಲೇ 4 ಎವರೆಸ್ಟ್‌ಗಳಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಯಾಗಿದೆ.

ಭಾರತದಲ್ಲಿ ಎಷ್ಟು?
ಭಾರತದಲ್ಲಿ ಪ್ರತಿದಿನ 25,940 ಟನ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿದೆ. ಇವುಗಳ ತೂಕ ಏಷ್ಯಾದ 9,000 ಆನೆಗಳಿಗೆ ಸಮ. ಆದರೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವೇ ಕಡಿಮೆ ಪ್ಲಾಸ್ಟಿಕ್‌ ಬಳಸುತ್ತಿದೆ. 2014-15ರ ಮಾಹಿತಿ ಇಲ್ಲಿ ಒಬ್ಬರು ಪ್ರತಿದಿನ ಸರಾಸರಿ 11 ಕೆ.ಜಿ. ಪ್ಲಾಸ್ಟಿಕ್‌ ಬಳಸುತ್ತಾರೆ. ಜಗತ್ತಿನ ಸರಾಸರಿ ಬರೋಬ್ಬರಿ 28 ಕೆ.ಜಿ. ಆಗಿದೆ.

Advertisement

ಏಕ ಬಳಕೆ ಪ್ಲಾಸ್ಟಿಕ್‌ ಯಾವುದು?
· ಪ್ಯಾಕೆಟ್‌ ರೂಪದಲ್ಲಿ ಬರುವ ಆಹಾರ, ದಿನಸಿ ಸಾಮಗ್ರಿ.
· ಜ್ಯೂಸ್‌, ದಿನಸಿ ಎಣ್ಣೆ, ಬಾಟಲಿಗಳು.
· ಸ್ಟ್ರಾಗಳು, ಪ್ಲಾಸ್ಟಿಕ್‌ ಪಾತ್ರೆಗಳು, ಕಪ್‌ಗ್ಳು, ಆಹಾರದ ಡಬ್ಬಗಳು

ಶೇ. 44ರಷ್ಟು ಹೆಚ್ಚಳ
ಆಧುನಿಕ ಕಾಲದಲ್ಲಿ ಅರ್ಥಾತ್‌, 21ನೇ ಶತಮಾನದಲ್ಲಿ 44 ಶೇ. ಪ್ಲಾಸ್ಟಿಕ್‌ ಉತ್ಪಾದನೆ ಅಧಿಕಗೊಂಡಿದೆ. ಇವುಗಳಲ್ಲಿ ಬಹುತೇಕ ಪ್ಲಾಸ್ಟಿಕ್‌ಗಳು ತ್ಯಾಜ್ಯವಾಗಿವೆ.

5 ಲಕ್ಷ ಕೋಟಿ ಚೀಲಗಳು
ವಿಶ್ವಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 5 ಲಕ್ಷ ಕೋಟಿ ಪ್ಲಾಸ್ಟಿಕ್‌ ಬ್ಯಾಗು ಗಳನ್ನು ಬಳಸ ಲಾಗುತ್ತದೆ. ಇದು ಪರಿಸರ
ಮತ್ತು ಜೀವಿಗಳಿಗೆ ಮಾರಕವಾಗಿದೆ. ಈ ಅಂಶವನ್ನು ಅರಿತುಕೊಂಡ ನೆರೆಯ ಬಾಂಗ್ಲಾ ದೇಶ 2002ರಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವೊಂದು ಕೈಗೊಂಡ ಮೊದಲ ತೀರ್ಮಾನ ಇದು.

127 ದೇಶಗಳಲ್ಲಿ ನಿಷೇಧ
ಜಗತ್ತಿನ ಹಲವು ರಾಷ್ಟ್ರಗಳು ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಲು ಆರಂಭಿಸಿದವು. ಕೆಲವು ರಾಷ್ಟ್ರಗಳು ಮತ್ತು ಅಲ್ಲಿನ ಎನ್‌ಜಿಒ
ಗಳು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಲು ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದವು. ಅಮೆರಿಕದಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳಿಗೆ ನಿಷೇಧವಿಲ್ಲದಿದ್ದರೂ ಅಲ್ಲಿನ ಕೆಲವು ರಾಜ್ಯಗಳು ನಿಷೇಧ ಹೇರಿವೆೆ. ಜಗತ್ತಿನ 127 ದೇಶಗಳು ಪ್ಲಾಸ್ಟಿಕ್‌ ಬಳಕೆಗೆ ನಿರ್ಬಂಧ ವಿಧಿಸಿವೆ. ಇನ್ನು 27 ದೇಶಗಳು ಏಕ ಬಳಕೆಯ ಪ್ಲಾಸ್ಟಿಕ್‌ ಮೇಲೆ ನಿಷೇಧ ಹೇರಿವೆೆ.

ಯಾವ ರಾಷ್ಟ್ರಗಳಲ್ಲಿ ಸಂಪೂರ್ಣ ನಿಷೇಧ?
- ಆ್ಯಂಟಿಗುವಾ ಮತ್ತು ಬಬುìಡ
- ಚೀನ
- ಕೊಲಂಬಿಯಾ
- ರೊಮಾನಿಯಾ
- ಸೆನೆಗಲ್‌
- ರುವಾಂಡಾ
- ದಕ್ಷಿಣ ಕೊರಿಯಾ
- ಜಿಂಬಾಬ್ವೆ
- ಟ್ಯುನೀಶಿಯಾ
- ಸಮೋಹ
- ಬಾಂಗ್ಲಾದೇಶ
- ಕ್ಯಾಮರೂನ್‌
- ಅಲೆºàನಿಯಾ
- ಜಾರ್ಜಿಯಾ

2ನೇ ಮಹಾಯುದ್ಧದ ವೇಳೆ ಅತಿ ಹೆಚ್ಚು
2ನೇ ವಿಶ್ವ ಯುದ್ಧ ನಡೆದ 1939-45ರಲ್ಲಿ ಸಂದರ್ಭ ಪ್ಲಾಸ್ಟಿಕ್‌ ಅನಿವಾರ್ಯವಾಗಿ ಬದಲಾಯಿತು. ಈ 4 ವರ್ಷಗಳ ಅವಧಿಯಲ್ಲಿಯೇ ಅಮೆರಿಕದಲ್ಲಿ ಪ್ಲಾಸ್ಟಿಕ್‌ ಉತ್ಪಾದನೆ ಬರೋಬ್ಬರಿ 3 ಪಟ್ಟು ಹೆಚ್ಚಾಗಿತ್ತು. ಬಳಿಕ ದಿನ ಬಳಕೆಯ ವಸ್ತುಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗಿತ್ತು.

ಪರಿಸರದಲ್ಲಿ ಎಷ್ಟಿದೆ ಗೊತ್ತಾ?
ಜಗತ್ತಿನಲ್ಲಿ ಪ್ರಸ್ತುತ ಇರುವ ಪ್ಲಾಸ್ಟಿಕ್‌ಗಳ ಪೈಕಿ ಶೇ. 40 ಪ್ಲಾಸ್ಟಿಕ್‌ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಆಗಿದೆ. ಇಂತಹ ಪ್ಲಾಸ್ಟಿಕ್‌ಗಳು ಒಮ್ಮೆ ಬಳಕೆಯಾದ ಬಳಿಕ ಅವುಗಳು ತ್ಯಾಜ್ಯವಾಗಿ ಬದಲಾಗುತ್ತವೆ. ಸಂಶೋಧನೆಯ ಪ್ರಕಾರ 20ನೇ ಶತಮಾನದ ಉತ್ತರಾರ್ಧದ ಬಳಿಕ ಉತ್ಪಾದನೆಯಾದ ಒಟ್ಟು ಪ್ಲಾಸ್ಟಿಕ್‌ಗಳ ಪೈಕಿ ಶೇ. 79 ಪ್ಲಾಸ್ಟಿಕ್‌ ಪರಿಸರವನ್ನು ಸೇರಿವೆ. ಇವುಗಳು ಇಂದು ಪರಿಸರಕ್ಕೆ ಮಾರಕವಾಗಿ ಬದಲಾಗುತ್ತಿವೆೆ.

ಉತ್ಪಾದನೆ
1950ರ ಬಳಿಕ 5,800 ಮಿಲಿಯನ್‌ ಟನ್‌ ಅಂದರೆ 58 ಕೋಟಿ ಟನ್‌ ಸಿಂಗಲ್‌ ಯ್ಯೂಸ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗಿದೆ. ಅವುಗಳಲ್ಲಿ 46 ಕೋಟಿ ಟನ್‌ ನೇರವಾಗಿ ಭೂಮಿಯ ಒಡಲನ್ನು ಸೇರಿಕೊಂಡಿವೆ.

ಇತಿಹಾಸ ಏನು?
2 ಶತಮಾನಗಳ ಹಿಂದೆ ಗ್ರಾಹಕ ಬಳಕೆಯ ವಸ್ತುಗಳನ್ನು ಕೊಂಡೊಯ್ಯಲು ಪ್ಲಾಸ್ಟಿಕ್‌ ಪಾತ್ರೆ (ಸೆಲ್ಯುಲಾಯx… ಪ್ಲಾಸ್ಟಿಕ್‌ಗಳನ್ನು) ಬಳಕೆಗೆ ತರಲಾಯಿತು. ಇದು ಪ್ಲಾಸ್ಟಿಕ್‌ ಮಾರಿಯಂತೆ ಹರಡಲು ಅವಕಾಶ ಮಾಡಿಕೊಟ್ಟಿತ್ತು.

ಮಾಡರ್ನ್ ಟಚ್‌ ಕೊಟ್ಟಿದ್ದ ದೊಡ್ಡಣ್ಣ
ಅಮೆರಿಕ 1907ರಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಪರಿಚಯಿಸಿತು. ನ್ಯೂಯಾರ್ಕ್‌ನ ಲಿಯೋ ಹೆಂಡ್ರಿಕ್‌ ಬೇಕೆಲ್ಯಾಂಡ್‌ ಎಂಬವರು ಈ ಸಿಂಥೆಸಿಸ್‌ ಪ್ಲಾಸ್ಟಿಕ್‌ ಅನ್ನು ಆವಿಷ್ಕರಿಸಿದ್ದರು. ಇಂತಹ ಪ್ಲಾಸ್ಟಿಕ್‌ಗಳನ್ನು ಮತ್ತೆ ಮತ್ತೆ ಬಳಸಬಹುದಾಗಿತ್ತು.

ಪ್ಲಾಸ್ಟಿಕ್‌ನಲ್ಲಿ ಆಹಾರ
ಸಾಫ್ಟ್ಡ್ರಿಂಕ್ಸ್‌ ಕಂಪನಿಗಳು ಬಾಟಲಿಯ ಬದಲಿಗೆ ಪ್ಲಾಸ್ಟಿಕ್‌ ಬಳಕೆಗೆ 1970ರಲ್ಲಿ ಮುಂದಡಿಯಿಟ್ಟವು. ಬಳಿಕ ಇದರ ನಿರ್ವಹಣೆಯ ಪ್ರಶ್ನೆ ಎದುರಾದಾಗ ಅಮೆರಿಕ ಸರಕಾರ ಪ್ಲಾಸ್ಟಿಕ್‌ ಬಾಟಲಿಗಳನ್ನು ನಿಷೇಧಿಸಲು ಕ್ರಮಕೈಗೊಂಡಿತು. ಆದರೆ ನಿರುದ್ಯೋಗ ಹೆಚ್ಚಾಗುವ ಬೀತಿಯಿಂದ ನಿಷೇಧ ಹಿಂದೆಗೆಯಿತು.

1 ಕೋಟಿ ಟನ್‌ ಪ್ಲಾಸ್ಟಿಕ್‌ ಸಮುದ್ರಕ್ಕೆ
ಪ್ರತಿ ವರ್ಷ ಸಮುದ್ರಕ್ಕೆ 48 ಲಕ್ಷದಿಂದ 1 ಕೋಟಿ ಟನ್‌ ಪ್ಲಾಸ್ಟಿಕ್‌ ಸೇರುತ್ತವೆ. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣದಲ್ಲಿ ಶೇ. 10 ಹೆಚ್ಚಾಗುತ್ತಿದೆ. ಸಮುದ್ರಕ್ಕೆ ಪ್ಲಾಸ್ಟಿಕ್‌ ಸೇರಿದರೆ ಸಮುದ್ರ ಜೀವಿಗಳಿಗೆ ತೀರಾ‌ ಅಪಾಯಕಾರಿ.

Advertisement

Udayavani is now on Telegram. Click here to join our channel and stay updated with the latest news.

Next