Advertisement
ಸೀಬೆ ಅಥವಾ ಪೇರಳೆಹಣ್ಣು ದೋರೆಗಾಯಿಯಾಗಿದ್ದರೂ ಎಳಸಾಗಿದ್ದರೂ ಕಚ್ಚಿ ತಿನ್ನಲು ತುಂಬ ರುಚಿಕರವಾಗಿರುತ್ತದೆ. ಮಾತ್ರವಲ್ಲ, ಅದರೊಳಗೆ ಪುಷ್ಕಳವಾಗಿ ಪೋಷಕಾಂಶಗಳಿವೆ. ಹಲ್ಲು ಮತ್ತು ಎಲುಬಿನ ಬೆಳವಣಿಗೆಗೆ ಅಗತ್ಯವಾದ ಸುಣ್ಣದ ಅಂಶ ಈ ಹಣ್ಣಿನಲ್ಲಿದೆ. ರಕ್ತವರ್ಧಕವಾದ ಕಬ್ಬಿಣಾಂಶವಿದೆ. ಜೀರ್ಣಕಾರಕವಾದ ಸೀಬೆಯನ್ನು ಬೇಯಿಸಿ ಎಳೆಯ ಮಕ್ಕಳಿಗೂ ತಿನ್ನಿಸಬಹುದು.
Related Articles
Advertisement
ಗಿಡ ನೆಟ್ಟ ವರ್ಷ ಬುಡಕ್ಕೆ ನೀರು ಹಾಕಿರುವುದನ್ನು ಬಿಟ್ಟರೆ ಅನಂತರ ನೀರು, ಗೊಬ್ಬರ ಎರಡನ್ನೂ ಕೊಟ್ಟಿಲ್ಲ. ಮಣ್ಣಿನಲ್ಲಿ ಸಹಜವಾಗಿರುವ ಸತ್ತಾ$Ìಂಶವನ್ನೇ ಬಳಸಿಕೊಂಡು ಮರ ಹಣ್ಣುಗಳಿಂದ ಬಾಗುತ್ತದೆ. ಬಾವಲಿಗಳು ಉಗುರುಗಳಿಂದ ಗೀರಿ ಹಾನಿ ಮಾಡುವ ಕಾರಣ ಹೆಚ್ಚು ಹಣ್ಣುಗಳಿರುವಾಗ ತೆಳುವಾದ ಬಲೆ ಹೊದೆಸಬೇಕಾಗುತ್ತದೆಯಂತೆ. ಹೆಚ್ಚು ಬಿಸಿಲಿರುವ ಜಾಗ, ಮಣ್ಣು ಫಲವತ್ತಾಗಿದ್ದು ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲದಂತಿದ್ದರೆ ಎಲ್ಲ ಗುಣದ ಮಣ್ಣಿಗೂ ಹೊಂದಿಕೊಳ್ಳುತ್ತದೆ. ಬೇಸಗೆಯಲ್ಲಿ ಅಧಿಕವಾಗಿ ಹಣ್ಣು ಕೊಡುತ್ತದೆ.
ಇನ್ನು ಪೇರಳೆ ಹಣ್ಣಿಗಿಂತಲೂ ಅದರ ಗಿಡಗಳ ಮಾರಾಟ ಹೆಚ್ಚು ಲಾಭ ತರುತ್ತದೆ ಎನ್ನುತ್ತಾರೆ ಭಟ್ಟರು. ಇದರ ಗಿಡ ತಯಾರಿಸುವುದು ತುಂಬ ಪ್ರಯಾಸಕರವಂತೆ. ಬಲಿತ ಕೊಂಬೆಗಳ ಕೆಳಭಾಗದಲ್ಲಿ ಸಗಣಿ ಗೊಬ್ಬರದ ಹುಡಿ ಮತ್ತು ಸುಡುಮಣ್ಣು ತುಂಬಿದ ಮುದ್ದೆಯನ್ನಿರಿಸಿ ತೆಂಗಿನ ನಾರಿನಿಂದ ಅದಕ್ಕೊಂದು ಆವರಣ ನಿರ್ಮಿಸಬೇಕು. ಹುರಿ ಹಗ್ಗದಿಂದ ಬಿಗಿದು ಕಟ್ಟಬೇಕು. ಕೊಂಬೆಯಿಂದ ಬೇರುಗಳೊಡೆದು ಈ ಆವರಣ ಸೇರಿಕೊಂಡ ಬಳಿಕ ಎಚ್ಚರಿಕೆಯಿಂದ ಕೊಂಬೆಯನ್ನು ಬೇರಿನ ಕೆಳಭಾಗದಿಂದ ಕತ್ತರಿಸಿ ನಾಟಿಗೆ ಬಳಸಬೇಕು. ಹೀಗೆ, ನೂರು ಗಿಡಗಳಿಗೆ ಬೇರು ಬರಿಸುವ ಪ್ರಯತ್ನದಲ್ಲಿ ಹತ್ತು ಗಿಡ ಮಾತ್ರ ಸಿಗುತ್ತದೆ. ಆದಕಾರಣ, ಒಂದು ಗಿಡಕ್ಕೆ ಒಂದರಿಂದ ಒಂದೂವರೆ ಸಾವಿರ ರೂಪಾಯಿ ಬೆಲೆ ಹೇಳುತ್ತೇನೆ. ಆದರೂ ಗಿಡಗಳಿಗೆ ಬೇಡಿಕೆ ಬರುತ್ತಲೇ ಇರುತ್ತದೆ ಎನ್ನುತ್ತಾರೆ ಈ ಕೃಷಿಕರು. ನೂರಕ್ಕಿಂತ ಹೆಚ್ಚು ವರ್ಷ ಬದುಕಿ ಬೆಳೆಸಿದವನ ಪಾಲಿಗೆ ಚಿನ್ನವಾಗುವ ಈ ಹೊಂಬಣ್ಣದ ಹಣ್ಣು ತಿಂದವರ ಮನ ಗೆಲ್ಲುತ್ತದೆ.
– ಪರಾಶರ