Advertisement
ನೆರೆಯಿಂದಾಗಿ ಚಿಕ್ಕಮಗಳೂರು, ಉತ್ತ¤ರ ಕರ್ನಾಟಕ, ಹೊರ ರಾಜ್ಯಗಳಲ್ಲಿ ಈರುಳ್ಳಿ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಕಳೆದೊಂದು ಎರಡು ವಾರದಿಂದ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. 60 ರೂ.ಗಳಿದ್ದ ದೊಡ್ಡ ಈರುಳ್ಳಿ ಬೆಲೆ ಪ್ರಸ್ತುತ 90-100 ರೂ. ತಲುಪಿದೆ. 40 ರೂ.ಗಳಿದ್ದ ಸಣ್ಣ ಈರುಳ್ಳಿ ಬೆಲೆ 120 ರೂ.ಗಳ ತನಕವೂ ಏರಿಕೆ ಕಂಡಿದೆ. ಇದರಿಂದ ಈರುಳ್ಳಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದ್ದು, ಇದರಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ. ಮೂಟೆ ಮೂಟೆ ಖರೀದಿಸುತ್ತಿದ್ದ ಹೊಟೇಲ್‌ನವರು ಪ್ರಸ್ತುತ ಕೆಜಿ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದಾರೆ. ಶೇ. 25 ವ್ಯಾಪಾರ ಪ್ರಸ್ತುತ ಇದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥ ಡೇವಿಡ್.
ಮಂಗಳೂರಿಗೆ ಚಿಕ್ಕಮಗಳೂರು, ಹುಬ್ಬಳ್ಳಿ, ಬಳ್ಳಾರಿ ಮುಂತಾದೆಡೆಗಳಿಂದ ಈರುಳ್ಳಿ ಪೂರೈಕೆಯಾಗುತ್ತಿತ್ತು. ಪ್ರಸ್ತುತ ಪೂನಾದಿಂದ ಮಾತ್ರ ಈರುಳ್ಳಿ ಸರಬರಾಜಾಗುತ್ತಿದೆ. 40-45 ಟನ್‌ಗಳಷ್ಟು ಪೂರೈಕೆಯಾಗುತ್ತಿದ್ದ ಈರುಳ್ಳಿ ಪ್ರಸ್ತುತ ಅಂದಾಜು 20 ಟನ್‌ಗಳಿಗೆ ಇಳಿದಿದೆ. ಅದನ್ನು ಮಾರಾಟ ಮಾಡಲೂ ಆಗದೇ, ಇರಿಸಿಕೊಳ್ಳಲೂ ಆಗದೆ ಹಾಳಾಗುತ್ತಿದೆ ಎನ್ನುತ್ತಾರೆ ವ್ಯಾಪಾರಸ್ಥರು. ಈರುಳ್ಳಿ ದೋಸೆ, ಈರುಳ್ಳಿ ಬಜೆ ಸಿಗಲ್ಲ!
ಹೊಟೇಲ್‌ಗಳಲ್ಲಿ ಈರುಳ್ಳಿಯಿಂದ ಮಾಡುವ ತಿಂಡಿಗಳನ್ನು ಸದ್ಯ ತಯಾರು ಮಾಡುತ್ತಿಲ್ಲ. ಬಹುತೇಕ ಹೊಟೇಲ್‌ಗಳಲ್ಲಿ ಈರುಳ್ಳಿ ದೋಸೆ, ಈರುಳ್ಳಿ ಬಜೆ ಮತ್ತಿತರ ಈರುಳ್ಳಿ ಖಾದ್ಯಗಳನ್ನು ನಿಲ್ಲಿಸಲಾಗಿದೆ. ಪದಾರ್ಥಕ್ಕೂ ಈರುಳ್ಳಿ ಹಾಕುವುದನ್ನು ನಿಲ್ಲಿಸಲಾಗಿದೆ ಎನ್ನುತ್ತಾರೆ ಹೊಟೇಲ್ ಮಾಲಕರ ಸಂಘದ ಪ್ರಮುಖರು.
Related Articles
ಕಳೆದೊಂದು ವಾರದ ಹಿಂದೆ ನಗರಕ್ಕೆ ಈಜಿಪ್ಟ್ ಈರುಳ್ಳಿಯನ್ನು ಪರಿಚಯಿಸಲಾಗಿದ್ದರೂ ಜನ ಈಜಿಪ್ಟ್ ಈರುಳ್ಳಿ ಖರೀದಿಯಿಂದ ದೂರವೇ ಉಳಿದಿದ್ದಾರೆ. ದೇಶೀಯ ಈರುಳ್ಳಿಯಷ್ಟು ರುಚಿ ಇಲ್ಲದಿರುವುದು, ದೊಡ್ಡ ಗಾತ್ರ ಮತ್ತು ಗಟ್ಟಿಯಾಗಿರುವುದರಿಂದ ಜನ ಅದರ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಸ್ಥರು.
Advertisement
ಪೂರೈಕೆ, ಬೇಡಿಕೆ ಕಡಿಮೆಈರುಳ್ಳಿಯ ಪೂರೈಕೆ ಮತ್ತು ಬೇಡಿಕೆ ಪ್ರಸ್ತುತ ಕಡಿಮೆಯಾಗಿದೆ. ಇರುವ ಈರುಳ್ಳಿ ಬೇಡಿಕೆ ಕಳೆದು ಕೊಂಡಿರುವುದರಿಂದ ವ್ಯಾಪಾ ರಸ್ಥರಲ್ಲೇ ಬಾಕಿಯಾಗಿ ಹಾಳಾ ಗುತ್ತಿದೆ. ವ್ಯಾಪಾರಸ್ಥರಿಗೆ ನಷ್ಟವಾಗುತ್ತಿದೆ.
- ಮುತ್ತಪ್ಪ, ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪದಾರ್ಥಕ್ಕೂ ಈರುಳ್ಳಿ ಬಳಸುತ್ತಿಲ್ಲ
ಸಸ್ಯಾಹಾರಿ ಹೊಟೇಲ್‌ಗಳಿಗಿಂತ ಮಾಂಸಾಹಾರಿ ಹೊಟೇಲ್‌ಗಳಲ್ಲಿ ಈರುಳ್ಳಿ ಹೆಚ್ಚು ಬೇಕಾಗುತ್ತದೆ. ಸದ್ಯ ಈರುಳ್ಳಿ ಬೆಲೆ ಏರಿಕೆಯಾಗಿರುವುದರಿಂದ ಈರುಳ್ಳಿಯಿಂದ ಮಾಡಲಾಗುವ ತಿಂಡಿಗಳನ್ನು ನಿಲ್ಲಿಸಲಾಗಿದೆ. ಪದಾರ್ಥಕ್ಕೂ ಈರುಳ್ಳಿ ಬಳಕೆ ಮಾಡುತ್ತಿಲ್ಲ.
- ಕುಡಿ³ ಜಗದೀಶ ಶೆಣೈ, ಅಧ್ಯಕ್ಷರು,
ದ.ಕ. ಹೊಟೇಲ್ ಮಾಲಕರ ಸಂಘ