Advertisement

ವಿಂಟರ್‌ ಒಲಿಂಪಿಕ್ಸ್‌ಗೆ ಕೋವಿಡ್‌ ಆತಂಕ

10:49 PM Jan 31, 2022 | Team Udayavani |

ಬೀಜಿಂಗ್‌: ಜಗತ್ತಿಗೆ ಕೊರೊನಾ ಮಾರಿಯನ್ನು ಹಬ್ಬಿಸಿದ ಚೀನವೀಗ ವಿಂಟರ್‌ ಒಲಿಂಪಿಕ್ಸ್‌ಗೆ ಅಣಿಯಾಗಿದೆ.

Advertisement

ಇನ್ನು ನಾಲ್ಕೇ ದಿನಗಳಲ್ಲಿ ರಾಜಧಾನಿ ಬೀಜಿಂಗ್‌ನಲ್ಲಿ ಚಳಿಗಾಲದ ಕ್ರೀಡಾಕೂಟ ಆರಂಭವಾಗಲಿದೆ (ಫೆ. 4-20). ಜತೆಗೆ ಕೊರೊನಾ ಸಂಖ್ಯೆಯೂ ಜಾಸ್ತಿ ಆಗುತ್ತಿದೆ.

ಬೀಜಿಂಗ್‌ಗೆ ಆಗಮಿಸಿರುವ ಕ್ರೀಡಾಪಟುಗಳಿಗೆ, ಅಧಿಕಾರಿಗಳಿಗೆ, ಮಾಧ್ಯಮದವರಿಗೆಲ್ಲ ಬಿಗಿಯಾದ ಜೈವಿಕ ಸುರಕ್ಷಾ ವಲಯವನ್ನು ನಿರ್ಮಿಸಲಾಗಿದೆ. ಸಾರ್ವಜನಿಕ ರೊಂದಿಗಿನ ಸಂಪರ್ಕವನ್ನು ನಿರ್ಬಂಧಿಸಲಾಗಿದೆ. ಆದರೆ ಚೀನಕ್ಕೆ ಬಂದಿಳಿಯುತ್ತಲೇ ಪಾಸಿಟಿವ್‌ ಫ‌ಲಿತಾಂಶ ಕಂಡು ಬರುತ್ತಿರುವುದು ಸಂಘಟಕರಲ್ಲಿ ಆತಂಕ ಮೂಡಿಸಿದೆ.

ರವಿವಾರ ದಾಖಲಾದ ಒಟ್ಟು 37 ಪಾಸಿಟೀವ್‌ ಕೇಸ್‌ಗಳಲ್ಲಿ 8 ಕೇಸ್‌ ಬೀಜಿಂಗ್‌ ಒಲಿಂಪಿಕ್ಸ್‌ಗೆ ಆಗಮಿಸಿದ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳದ್ದಾಗಿದೆ.

ಒಲಿಂಪಿಕ್ಸ್‌ ಕನಸು ಛಿದ್ರ
ಸೋಮವಾರ ರಶ್ಯದ ಬೈಆ್ಯತ್ಲೀಟ್‌ ವಲೇರಿಯಾ ವಸ್ನೆತ್ಸೋವಾ ತಮ್ಮ ಒಲಿಂಪಿಕ್ಸ್‌ ಕನಸು ಛಿದ್ರಗೊಂಡ ಬಗ್ಗೆ ದುಃಖದಿಂದ ಹೇಳಿಕೊಂಡರು. ಬೀಜಿಂಗ್‌ಗೆ ಬಂದಿಳಿದ ಬಳಿಕ ಎರಡು ಸಲ ನಡೆಸಲಾದ ಕೋವಿಡ್‌ ಪರೀಕ್ಷೆಯಲ್ಲೂ ಫ‌ಲಿತಾಂಶ ಪಾಸಿಟಿವ್‌ ಬಂದಿದೆ.

Advertisement

ಇದನ್ನೂ ಓದಿ:ಪ್ರೊ ಕಬಡ್ಡಿ: ಗುಜರಾತ್‌, ದಬಾಂಗ್‌ ದಿಲ್ಲಿ ಗೆಲುವಿನ ಆಟ

“ದುರದೃಷ್ಟವಾಶಾತ್‌ ನನ್ನ ಒಲಿಂಪಿಕ್ಸ್‌ ಕನಸು ಕೇವಲ ಕನಸಾಗಿಯೇ ಉಳಿದಿದೆ. ಆದರೆ ಮುಂದೊಂದು ದಿನ ನಾನು ಬಲಿಷ್ಠಳಾಗಿ ಕಣಕ್ಕಿಳಿಯುವೆ; ಬೇರೆಯದೇ ಆದ ಕತೆಗೆ ಸಾಕ್ಷಿಯಾಗಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಬಹುತೇಕ ಅಂತಾರಾಷ್ಟ್ರೀಯ ವಿಮಾನಗಳನ್ನು ಚೀನ ಈಗಾಗಲೇ ನಿಷೇಧಿಸಿರುವುದರಿಂದ ಕ್ರೀಡಾಪಟುಗಳು ವಿಶೇಷ ವಿಮಾನದಲ್ಲಿ ನೇರವಾಗಿ ಬೀಜಿಂಗ್‌ಗೆ ಬಂದಿಳಿಯ ಬೇಕಿದೆ. ದಿನವೂ ಕೋವಿಡ್‌ ಟೆಸ್ಟ್‌ಗೆ ಒಳಗಾಗಬೇಕಿದೆ.
ಈ ನಡುವೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ ಸದಸ್ಯರಾಗಿರುವ ಎಮ್ಮಾ ಟೇರೋ ಅವರ ಫ‌ಲಿತಾಂಶವೂ ಪಾಸಿಟಿವ್‌ ಬಂದಿದೆ!

Advertisement

Udayavani is now on Telegram. Click here to join our channel and stay updated with the latest news.

Next