Advertisement
ಒಲಿಂಪಿಕ್ಸ್ ಜ್ಯೋತಿಯನ್ನು ತರುವ ಸಲುವಾಗಿಯೇ ವಿಶೇಷ ವಿಮಾನವೊಂದನ್ನು ಸಿದ್ಧಪಡಿಸಲಾಗಿದೆ. ಇದರ ಒಂದು ಬದಿಯಲ್ಲಿ “ಟೋಕಿಯೊ 2020 ಒಲಿಂಪಿಕ್ ಟಾರ್ಚ್ ರಿಲೇ’ ಎಂದೂ ಬಾಲದ ಒಂದು ಬದಿಯಲ್ಲಿ “ಹೋಪ್ ಲೈಟ್ಸ್ ಅವರ್ ವೇ’ ಎಂದು ಇಂಗ್ಲಿಷ್ನಲ್ಲಿಬರೆಯಲಾಗಿದೆ. ಈ ವಿಮಾನ ಶುಕ್ರವಾರ ಜ್ಯೋತಿಯೊಂದಿಗೆ ಜಪಾನಿಗೆ ಆಗಮಿಸಲಿದೆ.
ಜಪಾನ್‌ನ ಉತ್ತರಕ್ಕಿರುವ ಮಟ್ಸುಶಿಮ ವಿಮಾನ ನಿಲ್ದಾಣದಲ್ಲಿ ಜ್ಯೋತಿಯನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ. ಮಾಮೂಲಿಯಾಗಿ ಬಹಳ ಅದ್ದೂರಿಯಾಗಿ ನಡೆಯುವ ಕಾರ್ಯಕ್ರಮವನ್ನು ಕೋವಿಡ್ 19 ಕಾರಣಕ್ಕೆ ಅತ್ಯಂತ ಸರಳಗೊಳಿಸಲಾಗಿದೆ. ಕೆಲವೇ ಗಣ್ಯರು ವಿಮಾನ ನಿಲ್ದಾಣದ ಫ್ಲೈಓವರ್‌ನಲ್ಲಿ ನಿಂತು ಜ್ಯೋತಿಗೆ ಸೆಲ್ಯೂಟ್ ಹೊಡೆಯಲಿದ್ದಾರೆ. ಹವಾಮಾನ ಸಹಕರಿಸಿದರೆ ಅಗ್ಗಿಷ್ಟಿಕೆಯನ್ನು (ಲೋಹದ ಕಡಾಯಿಯಲ್ಲಿ ಬೆಂಕಿ ಹಾಕುವುದು) ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ. ಮಾ. 26ರಿಂದ ರಿಲೇ…
ಈ ರಿಲೇ ಮಾ. 26ರಂದು ಪ್ರಾರಂಭವಾಗಲಿದೆ. ಇದಕ್ಕೂ ಮೊದಲು 9 ವರ್ಷದ ಹಿಂದೆ ಭೂಕಂಪ, ಸುನಾಮಿ ಮತ್ತು ಅಣುಸ್ಥಾವರ ಸ್ಫೋಟದಿಂದ ನಲುಗಿರುವ ಫುಕುಶಿಮದ ಮೂರು ಕಡೆಗಳಲ್ಲಿ ಇದನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು.
Related Articles
Advertisement
ಜಪಾನ್‌ಗೆ ಈ ಒಲಿಂಪಿಕ್ಸ್ ಕೂಟವನ್ನು ನಡೆಸುವುದರಲ್ಲಿ ಅದರ ರಾಜಕೀಯ ಹಿತಾಸಕ್ತಿಯೂ ಅಡಗಿದೆ. ಪ್ರಧಾನಿ ಶಿಂಜೊ ಅಬೆಗೆ ಅತೀ ದೀರ್ಘಾವಧಿಗೆ ಆಡಳಿತ ನಡೆಸಿದ ಪ್ರಧಾನಿ ಎಂಬ ತನ್ನ ಹಿರಿಮೆಯನ್ನು ಜಗತ್ತಿಗೆ ಸಾರಲು ಸಿಕ್ಕಿರುವ ಅವಕಾಶ ಇದು. ಈ ಮೂಲಕ ಜನರ ವಿಶ್ವಾಸ ಗೆಲ್ಲುವ ಹಂಚಿಕೆ ಅವರದ್ದು.