Advertisement
ಮಲ್ಪೆಯ ಗೋವರ್ಧನ ಕಾಮತ್ ಅವರು 1995ರಲ್ಲಿ ಎಸ್‌ಟಿಡಿ ಬೂತ್ ತೆರೆದಿದ್ದರು. ಆರಂಭದಲ್ಲಿ ಸಾಕಷ್ಟು ವ್ಯವಹಾರಗಳು ನಡೆಯುತ್ತಿತ್ತು. ಪ್ರತಿ ದಿನಕ್ಕೆ ಕನಿಷ್ಠ ವೆಂದರೂ 1500ರೂ. ವ್ಯಾಪಾರ ಬರುತ್ತಿತ್ತು. ಮೊಬೈಲ್ ಕಾಲಿಟ್ಟ ನಂತರ ಕುಸಿಯುತ್ತಾ ಬಂದು ಇದೀಗ ವ್ಯವಹಾರ 15ರೂ.ಗೆ. ಇಳಿದಿದೆ. ಆದರೂ ಅವರು ಎಸ್‌ಟಿಡಿ ಬೂತನ್ನು ಕೈ ಬಿಡಲಿಲ್ಲ.
ಮೊಬೈಲ್‌ಗಳು ಬೆಳಕಿಗೆ ಬರುವುದಕ್ಕಿಂತ ಮೊದಲು ದೂರಸಂಪರ್ಕಕ್ಕೆ ಎಸ್‌ಟಿಡಿ ಬೂತುಗಳೇ ಆಧಾರವಾಗಿದ್ದು. ಟೆಲಿಫೋನ್ ರಂಗದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿದ್ದವು. ಬೂತ್‌ಗಳ ಹೊರಗೆ ಸಾಲು ಸಾಲು ಜನ ಕರೆ ಮಾಡಲು ಕಾಯುತ್ತಿದ್ದ ಕಾಲವದು. ಕ್ರಮೇಣ ಮೊಬೈಲ್ ರಂಗದಲ್ಲೂ ಕ್ಷಿಪ್ರ ಕ್ರಾಂತಿ ನಡೆಯಿತು. ಎಲ್ಲರೂ ಮೊಬೈಲ್ ಬಳಸಲು ತೊಡಗಿದರು. ದಿನಗಳೆದಂತೆ ಎಸ್‌ಟಿಡಿ ಬೂತ್‌ಗಳು ಬೇಡಿಕೆ ಕುಸಿಯುತ್ತಾ ಬಂದು, ಇಂದು ಬೂತ್‌ಗಳು ಕಾಲಗರ್ಭವನ್ನು ಸೇರುವಂತಾಗಿದೆ. ಇಂದಿನ ಯುವಜನತೆಗೆ ಮೊಬೈಲ್ ಪೋನ್, ವಾಟ್ಸಾಪ್ ಜ್ವರ ಹೇಗೆ ಅಂಟಿದೆಯೋ ಅದೇ ರೀತಿಯ ಹಿಂದಿನ ಯುವ ಜನತೆಗೂ ಕಾಯಿನ್ ಬಾಕ್ಸ್, ಎಸ್‌ಟಿಡಿ ಬೂತ್ ಒಂದು ಗೀಳಾಗಿ ಅಂಟಿಕೊಂಡಿತ್ತು. ಹೆಚ್ಚು ಸುರಕ್ಷಿತ, ಇನ್ನೊಬ್ಬರಿಗೆ ಕಿರುಕುಳ ಇಲ್ಲ
ಎಷೇr ಸೌಲಭ್ಯಗಳಿದ್ದರೂ ಎಸ್‌ಟಿಡಿ ಬೂತ್‌ಗಳಷ್ಟು ನೆಮ್ಮದಿ ಮೊಬೈಲ್‌ಗಳಲಿಲ್ಲ. ಬೂತ್‌ಗಳಲ್ಲಿ ಮಾತನಾಡುವಾಗ ಇನ್ನೊಬ್ಬರಿಗೆ ತೊಂದರೆಯಾಗಲಿ ಕಿರುಕುಳವಾಗಲಿ ಇರುತ್ತಿರಲಿಲ್ಲ. ದೇವಸ್ಥಾನವಾಗಿರಲಿ, ಬಸ್ಸು ನಿಲ್ದಾಣವಾಗಲಿ, ವಾಹನಗಳನ್ನು ಓಡಿಸುತ್ತಿರುವಾಗ ತಾವು ಎಲ್ಲಿ ಇದೇªವೆ ಎಂಬ ಪರಿಜ್ಞಾನ ಇಲ್ಲದೆ ಮೊಬೈಲ್‌ಗಳಲ್ಲಿ ಮಾತನಾಡುವ ಜನರ ವರ್ತನೆ ಬಹಳ ವಿಚಿತ್ರವಾಗಿದೆ. ಎಲ್ಲೆಂದರಲ್ಲಿ ಅತಿಯಾದ ಮೊಬೈಲ್ ಬಳಕೆ ಹಲವಾರು ಅಪಘಾತಗಳು ಹೆಚ್ಚಳಕ್ಕೂ ಕಾರಣವಾಗುತ್ತಿದೆ.
Related Articles
ಉತ್ತರ ಕನ್ನಡದ ಕೆಲವೊಂದು ಮೊಬೈಲ್ ಇಲ್ಲದ ಬಡ ಮೀನುಗಾರ ಕಾರ್ಮಿಕರು ಬಿಟ್ಟರೆ ಮತ್ತಾರು ಬೂತ್ ಕಡೆಗೆ ಮುಖ ಮಾಡುತ್ತಿಲ್ಲ. ಇಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ಗಿರಾಕಿ ಇರಲಿ ಇಲ್ಲದೆ ಇರಲಿ, ಇದ್ದಷ್ಟು ಕಾಲ ಮುಂದುವರೆಸಿಕೊಂಡು ಹೋಗಬೇಕೆಂಬ ಇರಾದೆ ನನ್ನದು.
– ಗೋವರ್ಧನ ಕಾಮತ್, ಬೂತ್ ನಿರ್ವಾಹಕ
Advertisement