Advertisement

ಸೌರಮಂಡಲದ ಅತೀ ಪ್ರಾಚೀನ ಘನ ವಸ್ತು ಪತ್ತೆ

09:17 AM Jan 16, 2020 | Hari Prasad |

ವಾಷಿಂಗ್ಟನ್‌: ನಮ್ಮ ಸೌರಮಂಡಲದ ಅತಿ ಪ್ರಾಚೀನ ವಸ್ತುವೊಂದು ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಘನರೂಪದಲ್ಲಿರುವ ಇದು ನಕ್ಷತ್ರದ ಅತಿ ಸಣ್ಣ ತುಣುಕು ಎಂದು ಹೇಳಿ ರುವ ವಿಜ್ಞಾನಿಗಳು, ಇದು 700 ಕೋಟಿ ವರ್ಷಗಳಷ್ಟು ಹಳೆಯದ್ದಾಗಿದೆ ಎಂದು ತಿಳಿಸಿದ್ದಾರೆ.

Advertisement

ಐವತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ನಿರ್ಜನ ಪ್ರದೇಶದಲ್ಲಿ ಉಲ್ಕೆಯೊಂದು ಅಪ್ಪಳಿಸಿದಾಗ ಅದರ ಜೊತೆಗೆ ಈ ನಕ್ಷತ್ರದ ಚೂರು ಸಹ ಭೂಮಿಗೆ ಬಂದು ಸೇರಿಕೊಂಡಿದೆ. ಇದು ಸೂರ್ಯನ ಸೃಷ್ಟಿಗೂ ಮುನ್ನ ತಾರೆಗಳು ಉದಯಿಸುವಾಗ ಜನಿತವಾಗಿರುವ ಪರಿಕರ ಎಂಬುದು ಪರೀಕ್ಷೆಯ ವೇಳೆ ತಿಳಿದುಬಂದಿದೆ.

ಇದರಿಂದ ತಾರೆಗಳ ಉಗಮದ ಬಗ್ಗೆ ಹೊಸ ಮಾಹಿತಿಗಳು ಸಿಗಲಿದ್ದು, ಈ ವರೆಗೆ ಇರುವ ಸಿದ್ಧಾಂತಗಳನ್ನು ಮೀರಿದ ಮತ್ತೂಂದು ಸಿದ್ಧಾಂತ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಷಿಕಾಗೋ ವಿವಿಯ ಸಹ ಪ್ರಾಧ್ಯಾಪಕ ಫಿಲಿಪ್‌ ಹೆಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next