Advertisement
ಪತ್ರ ವ್ಯವಹಾರ: ಹಳೆ ತಾಲೂಕು ಕಚೇರಿ ಕಟ್ಟಡವನ್ನು ವಸ್ತು ಸಂಗ್ರಾಹಲಯವನ್ನಾಗಿ ಮಾರ್ಪಡಿಸಲು ಬಿಟ್ಟಸಂದ್ರ ಗುರುಸಿದ್ದಯ್ಯ 14-07-2022ರಂದು 2 ಸಾವಿರ ಸಾರ್ವಜನಿಕರ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಹಾಗೂ ಪ್ರವಾಸೋದ್ಯಮ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ಪುರಾತತ್ವ ಇಲಾಖೆಗೆ ಸಲ್ಲಿಸಿದ್ದು 15-09-2022 ರಂದು ಮೈಸೂರಿನ ಪುರಾ ತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನೀಲಿನಕ್ಷೆ ಸಿದ್ಧಪಡಿಸಿ ವರದಿ ನೀಡಿ ದ್ದಾರೆ. 23-11-2022ರಂದು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ವಸ್ತು ಸಂಗ್ರಹಾಲ ಯವನ್ನಾಗಿ ಮಾರ್ಪಡಿಸಲು 1 ಕೋಟಿ 61 ಲಕ್ಷ ಪ್ರಸ್ತಾವನೆ ಹಾಗೂ ಕಟ್ಟಡವನ್ನು ಹಸ್ತಾಂತರಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಆದರೆ ಇದುವರೆಗೆ ಕಟ್ಟಡ ಹಸ್ತಾಂತರವಾಗಿಲ್ಲ. ದಿನೆ ದಿನೇ ಕಟ್ಟಡ ಮಾತ್ರ ಮಳೆಯಿಂದಾಗಿ ಹಾಳಾಗುತ್ತಿದೆ.
Related Articles
Advertisement
ಹಳೆಯ ತಾಲೂಕು ಕಚೇರಿ ಇದೊಂದು ಪಾರಂಪರಿಕ ಕಟ್ಟಡವಾಗಿದ್ದು, ಇದು ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದ್ದು. ಅಂತಹ ಕಟ್ಟಡ ಬಳಕೆಯಾಗದೆ ನಿರ್ವಹಣೆಯಿಲ್ಲದೆ, ಗಿಡಗೆಂಟಿ ಬೆಳೆದು ಕಟ್ಟಡ ಶಿಥಿಲಾವಸ್ಥೆಗೆ ತಲುಪುತ್ತಿದೆ. ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ಯಥಾಸ್ಥಿತಿ ಉಳಿಸಿ ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಾಡು ಮಾಡಲು ತಾಲೂಕಿನಾದ್ಯಂತ 2 ಸಾವಿರಕ್ಕೂ ಹೆಚ್ಚು ಜನರ ಸಹಿಸಂಗ್ರಹಿಸಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಪತ್ರ ಬರೆದ ನಂತರ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಟ್ಟಡ ಹಸ್ತಾಂತರಿಸುವ ಹಂತದಲ್ಲಿದೆ. ಈ ವಿಚಾರವಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಮಾಡಿದ್ದೇನೆ. ಸಚಿವರು ಜಿಲ್ಲಾಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಿದ್ದಾರೆ. ಆದಷ್ಟು ಬೇಗ ಕಟ್ಟಡ ಪುರಾತತ್ವ ಇಲಾಖೆಗೆ ಹಸ್ತಾಂತರಿಸಿ ಹಳೆ ಪಾರಂಪರಿಕ ಕಟ್ಟಡವನ್ನು ವಸ್ತು ಸಂಗ್ರಾಹಲವನ್ನಾಗಿ ಪರಿವರ್ತಿಸಬೇಕಾಗಿದೆ ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ತಿಳಿಸಿದರು.
ದೇವನಹಳ್ಳಿ ಹಳೆ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿ ಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಇದುವರೆಗೂ ಹಸ್ತಾಂತರವಾಗಿಲ್ಲ. ಮತ್ತೂಂದು ಪತ್ರ ಬರೆಯುತ್ತೇವೆ. ಹಳೆ ತಾಲೂಕು ಕಚೇರಿ ಇತಿಹಾಸ ಪ್ರಸಿದ್ಧವಾಗಿರುವ ಕಟ್ಟಡವಾಗಿದೆ. ದೇವನಹಳ್ಳಿಗೆ ವಸ್ತುಸಂಗ್ರಹಾಲಯದ ಅವಶ್ಯಕತೆ ಇದೆ. ಕಟ್ಟಡ ಹಸ್ತಾಂತರಿಸಿದರೆ ಇಲಾಖೆಯ ಅನುದಾನದಿಂದ ವಸ್ತು ಸಂಗ್ರಹಾಲಯನ್ನಾಗಿ ಮಾಡುತ್ತೇವೆ. -ದೇವರಾಜು.ಎ, ಆಯುಕ್ತರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ