Advertisement

“ಬೆಟ್ಟದ ಹೂವಿನ’ಹಿಂದೆ ಮಧುರ ನೆನಪು 

03:25 PM Apr 08, 2020 | |

ಕಳೆದ ತಿಂಗಳು ನವೆಂಬರ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು 33 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ, ತಮ್ಮ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಸಿನಿಮಾ “ಬೆಟ್ಟದ ಹೂವು’ ಚಿತ್ರದ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದರು. ಈಗ ಮತ್ತೆ ಇದೇ ಚಿತ್ರದ ಪೋಸ್ಟರ್ ಹಾಕಿ “ಮರೆಯಲಾಗದ ನೆನಪುಗಳು’ ಎಂದು ಪೋಸ್ಟ್ ಮಾಡಿದ್ದಾರೆ.

Advertisement

ಹೌದು, ಪುನೀತ್ ರಾಜಕುಮಾರ್ ತಮ್ಮ ಫೇಸ್‍ಬುಕ್‍ ಖಾತೆಯಲ್ಲಿ 33 ವರ್ಷದ ಹಿಂದಿನ “ಬೆಟ್ಟದ ಹೂವು’ ಚಿತ್ರದ ಪೋಸ್ಟರ್ ಹಾಕಿ ಅದಕ್ಕೆ, “ಬೆಟ್ಟದ ಹೂವು ಸಿನಿಮಾ ಪೋಸ್ಟರ್ ಮರೆಯಲಾಗದ ನೆನಪುಗಳು’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಪತ್ರಿಕೆಯಲ್ಲಿ ಬಂದಿದ್ದನ್ನು ಅವರು ಹಂಚಿಕೊಂಡಿದ್ದಾರೆ.

ಇನ್ನು ಪುನೀತ್ ರಾಜಕುಮಾರ್ ಬಾಲ ನಟರಾಗಿ “ಬೆಟ್ಟದ ಹೂವು’ ಚಿತ್ರದಲ್ಲಿ ನಟಿಸಿ ನ್ಯಾಷನಲ್ ಅವಾರ್ಡ್​​ ಪಡೆದಿದ್ದರು. ಅಲ್ಲದೇ ಈ ಹಿಂದೆ “ಬೆಟ್ಟದ ಹೂವು’ ಚಿತ್ರದ ದಿನಗಳನ್ನು ನೆನಪಿಸಿಕೊಂಡು, ಫೇಸ್‍ಬುಕ್‍ನಲ್ಲಿ ವಿಡಿಯೋವೊಂದನ್ನು ಕೂಡಾ ಅಪ್ಲೋಡ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next